ಸಿಂದಗಿ: ಎಲೈಟ್ ವಿಜ್ಞಾನ ಪ ಪೂ ಕಾಲೇಜು ಹಾಗೂ ಪ್ರಾದೇಶಿಕ ಮತ್ತು ಸಮಾಜಿಕ ಅರಣ್ಯ ವಲಯ ಸಿಂದಗಿ ಸಹಯೋಗದಲ್ಲಿ ಎಲೈಟ್ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆಯನ್ನು ಕಾಲೇಜಿನ ಸಂಸ್ಥಾಪಕ ಎಮ್ ಎಮ್ ಅಸಂತಾಪೂರ ಗಿಡ ನೆಡುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ವತಿಯಿಂದ ಹಸಿರು ಕರ್ನಾಟಕ ಅಭಿಯಾನ, ಬೀಜ ಬಿತ್ತನೆ ಅಭಿಯಾನದ ಸಂದೇಶ ಪ್ರದರ್ಶಿಸಿದರು. ಪ್ರಾಚಾರ್ಯ ಆಯ್ ಎ ಜುಮನಾಳ ನೇತೃತ್ವ ವಹಿಸಿದ್ದರು. ಅರಣ್ಯ ಇಲಾಖೆ ಅಧಿಕಾರಿ ಎಮ್ ಎನ್ ಮುಲ್ಲಾ, ಇಲಾಖೆ ಸಿಬ್ಬಂದಿ ಅಶೋಕ ಲಾಳಸಂಗಿ, ಶಿವಾನಂದ ಮುಡಗೊಂಡ, ವಿಠಲ ಚೆನ್ನೂರ, ಸೋಮಣ್ಣ ಬಬಲೇಶ್ವರ, ಬೀರೇಶ ಪೂಜಾರಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಜಿ ಜಿ ದೇಸಾಯಿ, ಪರಶುರಾಮ ಜಮಾದಾರ, ಅವಿನಾಶ ಎಚ್, ಅಜೀಜ್ ನಾಯ್ಕ, ಸ್ವಾತಿ ಎಲ್, ಸುವರ್ಣ ಸಿಂಧೂರ, ಹುಸೇನ್ ನಾಯ್ಕೋಡಿ, ಲಖನ್ ರಾಠೋಡ, ಸಿದ್ದರಾಮಯ್ಯ ಎಚ್, ಅಮರ ತೇಲಸಂಗ, ಮೋದನ್ ಪಟೇಲ್, ಸೇರಿದಂತೆ ಭೋದಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.