ಗುರ್ಲಾಪೂರ– ಮೂಡಲಗಿ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಗುರ್ಲಾಪೂರ ಗ್ರಾಮಕ್ಕೆ ಇತ್ತಿಚೆಗೆ ಬೆಳಗಾವಿಯ ಲೋಕಸಭಾ ಸದಸ್ಯರಾದ ಶ್ರೀಮತಿ ಮಂಗಳಾ ಸುರೇಶ ಅಂಗಡಿ ಇವರು ಪ್ರಥಮ ಬಾರಿಗೆ ಭೇಟಿ ಕೊಟ್ಟರು.
ಈ ಸಂದರ್ಭದಲ್ಲಿ ಶ್ರೀಮತಿ ಮಂಗಳಾ ಸುರೇಶ ಅಂಗಡಿಯವರು ಮಾತನಾಡಿ, ನಿಮ್ಮೆಲ್ಲರ ಪ್ರೀತಿಯ ದಿ. ಸುರೇಶ ಅಂಗಡಿಯವರು ನಡೆದ ಬಂದ ದಾರಿಯಲ್ಲಿ ನಡೆಯುತ್ತಿದ್ದೇವೆ. ನಿಮ್ಮ ಸಹಕಾರ ಸದಾ ನಮ್ಮ ಮೇಲಿರಲ್ಲಿ ಎಂದರು. ಯಾವುದೇ ಅಭಿವೃದ್ಧಿ ಕಾರ್ಯಗಳಿದ್ದರೆ ನಾವು ಮಾಡಿಕೊಡುತ್ತವೆ ಎಂದು ಗ್ರಾಮದ ಕಂಬಳಿ ಪ್ಲಾಟ್ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನಂತರ ಗ್ರಾಮದ ಬಸವೇಶ್ವರ ಕಲ್ಯಾಣ ಮಂಟಪ ವೀಕ್ಷಣೆ ಮಾಡಿದರು ಕಾರ್ಯಕರ್ತರ ಮನಗೆ ತೆರಳಿ ಕುಶಲೋಪರಿ ವಿಚಾರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಆರ್ ಬಿ ನೇಮಗೌಡರ, ಎಸ್ ಎಸ್ ಮುಗಳಖೋಡ, ಎಮ್ ಎಸ್ ಜಕಾತಿ, ಎಮ್ ಎಸ್ ನೇಮಗೌಡರ, ಎಮ್ ಬಿ ರಂಗಾಪೂರ, ಆಯ್ ವಾಯ್ ಮುಗಳಖೋಡ, ಬಿ ಎಸ್ ಮುಗಳಖೋಡ,ಜಯ ಪ್ರಕಾಶ ಗಾಣಿಗೇರ, ಶಂಕರ ಕಾಳಪ್ಪಗೋಳ, ಎಸ.ಬಿ ಕದಮ, ಪಿ,ಬಿ ನೇಮಗೌಡರ, ಈಶ್ವರ ಡವಳೇಶ್ವರ, ಡಾ ಎಸ್ ಎಸ್ ಪಾಲಭಾಂವಿ, ಕೆ ಆರ್ ದೇವರಮನಿ, ಎಸ್ ಆರ್ ನೇರ್ಲಿ, ಆಯ್ ಎಸ್ ಹಿರೇಮಠ, ಎಲ್ ಎಮ್ ಜಾಧವ ಮಹಾದೇವ ಬೀಳಗಿ, ದುಂಡಪ್ಪ ಗೌಡ್ರ, ಶಿವಬಸು ಬಿಳಗಿ ಹಾಗು ಮಹಿಳಾ ಮಂಡಳದ ಸದಸ್ಯರು ಮತ್ತು ಬಿ ಜೆ ಪಿ ಕಾರ್ಯಕರ್ತರು ಆಗಮಿಸಿದ್ದರು.