ಸಿಂದಗಿ: ಶೌಚಾಲಯ ನಿರ್ಮಿಸಿಕೊಟ್ಟು ಹೆಣ್ಣು ಮಕ್ಕಳ ಮರ್ಯಾದೆ ಉಳಿಸಿ ಎಂದು ಪಟ್ಟಣದ ವಿದ್ಯಾನಗರದ ಪಕ್ಕದಲ್ಲಿರುವ ಸ್ಲಂ ನಿವಾಸಿ ಹೆಣ್ಣು ಮಕ್ಕಳು ಶಾಸಕ ಅಶೋಕ ಮನಗೂಳಿ ಅವರಿಗೆ ಮನವಿ ಮಾಡಿಕೊಂಡರು.
ನಂತರ ಶಾಸಕರು ಮಾತನಾಡಿ, ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿಯೂ ಇದೇ ಬೇಡಿಕೆ ಇಟ್ಟಿದ್ದಿರಿ ಈಗಲು ಅದೇ ವಿಷಯ ಪ್ರಸ್ತಾಪ ಮಾಡಿದ್ದೀರಿ ನಾನು ಸ್ಥಳೀಯವನಾಗಿದ್ದು ಇಲ್ಲಿನ ಹೆಣ್ಣು ಮಕ್ಕಳ ಸಮಸ್ಯೆ ಅರಿತಿದ್ದೇನೆ. ಸ್ವಚ್ಚ ಭಾರತ ಯೋಜನೆಯಡಿ ಕೇಂದ್ರ ಸರಕಾರ ಮನೆಗೊಂದು ಶೌಚಾಲಯ ನಿರ್ಮಿಸುವ ಗುರಿಯಿದ್ದು ಅದು ಕಾರ್ಯಗತಿಯಲ್ಲಿ ಜಾರಿಯಾಗಿಲ್ಲ ಅದನ್ನು ಕೂಡಲೇ ಪರಿಶೀಲಿಸಿ ಸರಕಾರದ ಯಾವುದೇ ಯೋಜನೆಯಡಿ ಯೋಜನೆ ರೂಪಿಸಿ ತುರ್ತುಗತಿಯಲ್ಲಿ ಹೆಣ್ಣು ಮಕ್ಕಳ ಶೌಚಾಲಯ ನಿರ್ಮಾಣಕ್ಕೆ ಕಾರ್ಯೋನ್ಮುಖ ನಾಗುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ್ರಥಮ ಧರ್ಜೆ ಗುತ್ತಿಗೆದಾರ ಗುರುಗೌಡ ಬಿರಾದಾರ, ಖಾದರ ಬಂಕಲಗಿ, ಅಮೀತ ಚವ್ಹಾಣ, ಚೇತನ, ಶಾಂತಾಬಾಯಿ ಇದ್ಲಿ, ಲಕ್ಕವ್ವ, ಪಾರ್ವತಿ, ಸುಲೋಚನಾ, ಕಮಲವ್ವ, ಹುಲಗವ್ವ, ಮಲಕವ್ವ, ಬಿಸ್ಮಿಲ್ಲಾ ನದಾಫ, ಮಹಿಬೂಬ ಸೇರಿದಂತೆ ನಿವಾಸಿ ನೂರಾರು ಹೆಣ್ಣು ಮಕ್ಕಳು ಇದ್ದರು.