ಸರ್ಕಾರಿ ಶಾಲೆಯ ಅಭಿವೃದ್ಧಿ ಗೆ ಶಾಸಕರ ಸೂಚನೆ

Must Read

ಸಿಂದಗಿ: ಬಡ ಮತ್ತು ಕಾರ್ಮಿಕ ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದೆಂದು ಹಲವಾರು ಸೌಲಭ್ಯಗಳು ನೀಡಲಾಗುತ್ತಿದೆ ಆದರೆ ಇಂದು ಸರಕಾರಿ ಶಾಲೆಗಳು ನಿರ್ವಹಣೆಯ ಕೊರತೆಯಿಂದ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ ಸರಕಾರಿ ಶಾಲೆಗಳ ಜೀರ್ಣೋದ್ದಾರಕ್ಕೆ ಸರಕಾರ ಬದ್ಧವಿದೆ ಅದಕ್ಕೆ ಶಾಸಕರ ಅನುದಾನದಲ್ಲಿ ರೂ 15 ಲಕ್ಷ ವೆಚ್ಚದಲ್ಲಿ ಅಚ್ಚಕಟ್ಟಾಗಿ ರಿಪೇರಿ ಮಾಡಿ ಎಂದು ಜಿಪಂ ಜೆಇ ಅಶೋಕ ಪಾಟೀಲರಿಗೆ  ಶಾಸಕ ಅಶೋಕ ಮನಗೂಳಿ ಸೂಚಿಸಿದರು.

ಪಟ್ಟಣದ ವಿದ್ಯಾನಗರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶಾಸಕ ಅಶೋಕ ಮನಗೂಳಿ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ಹೊಸ ಕಟ್ಟಡ ಮಾಡಲಿಕ್ಕೆ ಅನುದಾನದ ಕೊರತೆಯಿದ್ದು ಹಳೇ ಕಟ್ಟಡದ ಪತ್ರಾಸ ಶೀಟ್‍ಗಳನ್ನು ತೆಗೆದು ಮೇಲೆತ್ತರಿಸಿ ಮಳೆಗಾಲದಲ್ಲಿ ಸೋರದ ಹಾಗೆ ರಿಪೇರಿ ಮಾಡಿ ಮಕ್ಕಳ ವಿದ್ಯಾಬ್ಯಾಸಕ್ಕೆ ಅನುಕೂಲ ಮಾಡಿ ಅಲ್ಲದೆ ಶಾಲೆಯ ಒಳಾಂಗಣದಲ್ಲಿ ಗಟ್ಟು ಜೋಡಣೆ ಮಾಡಿ ಮಕ್ಕಳು ಗಿಡದ ನೆರಳಲ್ಲಿ ಊಟ ಮಾಡಲು ಅನಕೂಲವಾಗುತ್ತದೆ ಈ ಕಾಮಗಾರಿ ಅಗಷ್ಟ 15ರೊಳಗೆ ಮುಗಿಸಿ ಅದಕ್ಕೆ ಶಾಲಾ ಸಿಬ್ಬಂದಿ ಮತ್ತು ಸಾರ್ವಜನಿಕರು ಸಹಕಾರ ನೀಡಿ ಎಂದರು.

ಈ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿ ಶಾಸಕ ಅಶೋಕ ಮನಗೂಳಿ ಅವರಿಗೆ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಪ್ರಥಮ ದರ್ಜೇ ಗುತ್ತಿಗೆದಾರ ಗುರುಗೌಡ ಬಿರಾದಾರ, ಸಿ.ಎಂ.ಮನಗೂಳಿ ಕಾಲೇಜಿನ ನಿವೃತ್ತ ಗ್ರಂಥಪಾಲಕ ಸಿದ್ದಬಸವ ಕುಂಬಾರ, ಅಮೀತ ಚವ್ಹಾಣ, ವಿ.ಬಿ.ಕುರುಡೆ, ಮುಖ್ಯಗುರುಮಾತೆ ಶ್ರೀಮತಿ ಆರ್.ಎಸ್.ಸಿಂದಗಿ, ಶಿಕ್ಷಕರಾದ ಬಸವರಾಜ ಸೊಮಾಪೂರ, ಎಸ್.ಸಿ.ತಳವಾರ, ಶಶಿಕಲಾ ನಾಯಕ, ರೂಪಾಲಿ ಕಟಾರೆ,ನವೀನ ಕುಲಕರ್ಣಿ, ವಿಜಯಲಕ್ಷೀ ನಿಂಬರಗಿ, ಜಗದೀಶ ಬೋಗಾರ, ಮುಖಂಡರಾದ ಪದ್ಮರಾಜ ಬಿರಾದಾರ, ಅರವಿಂದ ಹೂಗಾರ ಮುದ್ದೇಬಿಹಾಳ, ಡಾ.ಡಿ.ಕೆ.ಕುಲಕರ್ಣಿ, ಶೇಖರ ಬ್ಯಾಕೊಡ, ಖಾದರ ಬಂಕಲಗಿ ಸೇರಿದಂತೆ ಅನೇಕರು ಇದ್ದರು.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group