spot_img
spot_img

ಕಲಬುರಗಿ ಕರ್ನಾಟಕ ಹೈಕೋರ್ಟ್ ಪೀಠದ ಆದೇಶ

Must Read

spot_img
- Advertisement -

ಸಿಎಎ ಕುರಿತ ನಾಟಕ ಪ್ರದರ್ಶನದಲ್ಲಿ ದೇಶ ವಿರೋಧಿ ಘೋಷಣೆ ಪ್ರಕರಣ ವಜಾ

ಬೀದರ: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರವನ್ನು ಟೀಕಿಸುವ ನಾಟಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಬೀದರಿನ ಶಾಹೀನ್‌ ಶಾಲಾ ಆಡಳಿತದ ವಿರುದ್ಧ ಬೀದರಿನ ವ್ಯಕ್ತಿಯೊಬ್ಬರು ದಾಖಲಿಸಿದ್ದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟಿನ ಕಲಬುರಗಿ ಪೀಠವು ಇಂದು ಶಾಲೆಯ ವಿರುದ್ಧದ ದೇಶದ್ರೋಹ ಮತ್ತಿತರ ಆರೋಪಗಳನ್ನು ಕೈಬಿಟ್ಟಿದೆ.

ಶಾಹೀನ್ ಶಾಲಾಡಳಿತದ ಪರ ವಕೀಲ ಅಮಿತ್‌ ಕುಮಾರ್‌ ದೇಶಪಾಂಡೆ ಅವರ ವಾದವನ್ನು ಆಲಿಸಿದ ನಂತರ ಜಸ್ಟಿಸ್‌ ಹೇಮಂತ್‌ ಚಂದನ್‌ಗೌಡರ್‌ ಪ್ರಕರಣವನ್ನು ವಜಾಗೊಳಿಸಿದ್ದಾರೆ.

- Advertisement -

ಜನವರಿ 2020ರಲ್ಲಿ ಬೀದರಿನ ಶಾಹೀನ್ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿಗಳು ಸಿಎಎ ವಿರೋಧಿ ಕಥಾವಸ್ತು ಹೊಂದಿದ ನಾಟಕ ಪ್ರದರ್ಶಿಸಿದ ನಂತರ ಶಾಲಾಡಳಿತದ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ನಾಟಕದಲ್ಲಿ ಮೋದಿ ವಿರೋಧಿ ಘೋಷಣೆಗಳು ಮತ್ತು ಮತೀಯ ನಿಂದನೆ ಪದಗಳಿದ್ದವು ಎಂದು ಆರೋಪಿಸಲಾಗಿತ್ತು.

ಬೀದರ್‌ ಪೊಲೀಸರು ನೀಲೇಶ್ ರಕ್ಷ್ಯಲ ಎಂಬವರ ದೂರಿನ ಆಧಾರದಲ್ಲಿ ಐಪಿಸಿ ಸೆಕ್ಷನ್‌ 504, 505(2), 124(ಎ), 153(ಎ) ಅನ್ವಯ ಪ್ರಕರಣ ದಾಖಲಿಸಿದ್ದರು.

ಈ ಆರೋಪಗಳನ್ನು ನಿರಾಕರಿಸಿದ್ದ ಶಾಲೆ, ಪೊಲೀಸರು ಮಕ್ಕಳನ್ನು ʻದೇಶ-ವಿರೋಧಿಗಳುʼ ಎಂಬಂತೆ ಕಾಣುತ್ತಿದ್ದಾರೆ ಹಾಗೂ ಶಾಲೆಗೆ ಪ್ರತಿದಿನ ಭೇಟಿ ನೀಡುತ್ತಿದ್ದಾರೆ ಎಂದು ಹೇಳಿತ್ತು.

- Advertisement -

ಈ ಪ್ರಕರಣದಲ್ಲಿ ಮಕ್ಕಳನ್ನು ವಿಚಾರಣೆ ನಡೆಸುವ ವೇಳೆ ಸಶಸ್ತ್ರ ಪೊಲೀಸ್‌ ಅಧಿಕಾರಿಗಳ ಉಪಸ್ಥಿತಿಯು ಬಾಲ ನ್ಯಾಯ ಕಾಯಿದೆ 2015 ಮತ್ತು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆಗಸ್ಟ್‌ 17, 2021 ರಂದು ಕರ್ನಾಟಕ ಹೈಕೋರ್ಟಿನ ಬೆಂಗಳೂರು ಪೀಠ ಹೇಳಿತ್ತು.

ಮಕ್ಕಳ ಹಕ್ಕಿಗೆ ಸಂಬಂಧಿಸಿದಂತೆ ಹೈಕೋರ್ಟಿಗೆ ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಅರ್ಜಿ ಸಲ್ಲಿಸಿದ್ದರು. ಒಂಬತ್ತು ವರ್ಷದಷ್ಟು ಕಿರಿಯ ಮಕ್ಕಳು ಸೇರಿದಂತೆ 85 ಮಕ್ಕಳು ಪೊಲೀಸ್‌ ವಿಚಾರಣೆ ಎದುರಿಸಬೇಕಾಯಿತು ಇದು ಮಕ್ಕಳ ಮನಃಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಅರ್ಜಿಯಲ್ಲಿ ದೂರಲಾಗಿತ್ತು.

ನ್ಯಾಯಾಲಯದ ತೀರ್ಪಿಗೆ ಶಾಹೀನ್‌ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ ಅಬ್ದುಲ್‌ ಖಾದೀರ್‌ ಸಂತಸ ವ್ಯಕ್ತಪಡಿಸಿದ್ದಾರೆ. ಈ ಸವಾಲುಭರಿತ ಸಮಯದಲ್ಲಿ ಶಾಲೆಗೆ ಬೆಂಬಲ ವ್ಯಕ್ತಪಡಿಸಿದ ವಕೀಲರು, ಮಾಧ್ಯಮ ಮತ್ತು ಇತರ ಹಿತೈಷಿಗಳಿಗೆ ಅವರು ಧನ್ಯವಾದ ತಿಳಿಸಿದ್ದಾರೆ.

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group