ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯೇ ಎನ್.ಎಸ್.ಎಸ್ ಶಿಬಿರದ ಗುರಿಯಾಗಿರಲಿ- ಡಾ.ಎಲ್.ಬಿ.ಬನಶಂಕರಿ

Must Read

“ಹಳ್ಳಿಯ ಜನರಿಗೆ ಸರ್ಕಾರದ ಸೌಲಭ್ಯಗಳ ಸಂಪೂರ್ಣ ಮಾಹಿತಿ ನೀಡಿ, ಸ್ವಚ್ಛತೆಯ ಕಡೆ ಗಮನಹರಿಸಿ ಪರಿಸರ ಸಂರಕ್ಷಣೆಯ ಧ್ಯೇಯದೊಂದಿಗೆ ನಡೆಯುತ್ತಿರುವ ಎನ್.ಎಸ್.ಎಸ್ ಶಿಬಿರದಿಂದ ಗ್ರಾಮದ ಚಿತ್ರಣ ಬದಲಾಗಲಿ ಈ ನಿಟ್ಟಿನಲ್ಲಿ ಸುಣದೋಳಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯೇ ನಿಮ್ಮ ಶಿಬಿರದ ಗುರಿಯಾಗಿರಲಿ “ ಎಂದು ಡಾ.ಎಲ್.ಬಿ. ಬನಶಂಕರಿ ಪ್ರಾಂಶುಪಾಲರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾರೂಗೇರಿ ಇವರು ಕರೆ ನೀಡಿದರು.

ಅವರು ಸುಣದೋಳಿ ಗ್ರಾಮದಲ್ಲಿ  ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪದವಿ ಕಾಲೇಜು ಮೂಡಲಗಿಯ ವಿದ್ಯಾರ್ಥಿಗಳು ಹಮ್ಮಿಕೊಂಡ  2022-23 ನೇ ಸಾಲಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, “ಎನ್ ಎಸ್ ಎಸ್ ಶಿಬಿರವು  ಸೇವೆಯ ಅನುಭವದ ಜೊತೆಗೆ ನಾಯಕತ್ವದ ಗುಣಗಳನ್ನು ಕಲಿಸಿಕೊಡುತ್ತಿದ್ದು ಶಿಬಿರಾರ್ಥಿಗಳು ಇದರ ಸಂಪೂರ್ಣ ಪ್ರಯೋಜನ ಪಡೆದು ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಉತ್ತಮ ನಾಯಕರಾಗಿ ” ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ  ಎಸ್.ಡಿ. ಗಾಣಿಗೇರ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ “ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಿದ್ದು ಸುಣದೋಳಿ ಗ್ರಾಮದ ಶಿವಾನಂದ ಪೂಜ್ಯರ ಆಶೀರ್ವಾದದೊಂದಿಗೆ ಶಿಬಿರವು ಯಶಸ್ವಿಯಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಸುಣದೋಳಿ ಜಡಿಸಿದ್ಧೇಶ್ವರ ಮಠದ ಪೂಜ್ಯರಾದ ಶ್ರೀ ಶಿವಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿ “ಶಿಬಿರಾರ್ಥಿಗಳು ಮಾಡುವ ಕೆಲಸದಲ್ಲಿ ಶ್ರದ್ಧೆಯಿರಲಿ, ಗ್ರಾಮದ ಯಾವುದೇ ಕೆಲಸವನ್ನು ಅಂಜಿಕೆಯಿಂದ ಮಾಡದೇ ಮನಪೂರ್ವಕವಾಗಿ ಮಾಡಿ ಮಠದ ಪರಂಪರೆಯೊಂದಿಗೆ ಸಂಸ್ಕೃತಿ, ನಯ-ವಿನಯತೆ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಶಿಬಿರಕ್ಕೆ ಬೇಕಾದ ಎಲ್ಲಾ ಸಹಕಾರಗಳನ್ನು ಮಠ ಹಾಗೂ ಗ್ರಾಮಸ್ಥರು ನೀಡಲಿದ್ದು ಅದರ ಸದುಪಯೋಗ ಪಡೆದು ಗ್ರಾಮದ ಅಭಿವೃದ್ಧಿ ಮಾಡಿ ನಿಮ್ಮ ಕಾಲೇಜಿನ ಹೆಸರನ್ನು ಉಜ್ವಲಗೊಳಿಸಿ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಸದಸ್ಯರು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಊರಿನ ಮುಖಂಡರು ಹಾಗೂ ಮಹಾವಿದ್ಯಾಲಯದ ಸಾಂಸ್ಕೃತಿಕ ಸಂಯೋಜಕರಾದ ಸಂಜೀವಕುಮಾರ ಗಾಣಿಗೇರ, ಕ್ರೀಡಾ ಸಂಯೋಜಕರಾದ ಡಾ. ರವಿ ಗಡದನ್ನವರ, ಸಿಬ್ಬಂದಿ ಕಾರ್ಯದರ್ಶಿಯಾದ ಬಿ.ಎಸ್. ಕೆಸರಗೊಪ್ಪ, ರೆಡ್ ಕ್ರಾಸ್ ಸಂಯೋಜಕರಾದ ಭೀಮರಾವ್ ನಾಯಕ, ಶಿವಕುಮಾರ,  ಬಸಪ್ಪ ಹೆಬ್ಬಾಳ, ಸಹ ಶಿಬಿರಾಧ್ಯಕ್ಷರಾದ ಶಿವರಾಜ ಮುಗಳಖೋಡ ಭಾಗವಹಿಸಿದ್ದರು. ಕುಮಾರಿ ಪೂಜಾ ಬೂದಿಹಾಳ ಪ್ರಾರ್ಥಿಸಿದರು.

ಕುಮಾರಿ ಅನ್ನಪೂರ್ಣ ಬೀಸನಕೊಪ್ಪ ಸ್ವಾಗತಿಸಿದರು. ಸುರೇಶ ಅಂಗಡಿ ವಂದಿಸಿದರು. ಎನ್.ಎಸ್.ಎಸ್ ಸಂಯೋಜಕರಾದ ಸಂಜೀವ ಮದರಖಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ಅರ್ಪಿತಾ ಮಳವಾಡ ನಿರೂಪಿಸಿದರು.

Latest News

ಎಲ್ಲಾ ಜಿಲ್ಲೆಗಳ ಯುವ ಸಾಧಕರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರದಾನ  

ಮೂಡಲಗಿ:-ತಾಲೂಕಿನ ಹಳ್ಳೂರ ಗ್ರಾಮದಲ್ಲಿ ರಾಜ್ಯದ ೩೧ ಜಿಲ್ಲೆಯ "ಯುವ ಸಾಧಕರಿಗೆ ಪ್ರಶಸ್ತಿ" ಪ್ರದಾನ ಸಮಾರಂಭ ಕಾರ್ಯಕ್ರಮ ದಿ. 26 ಹಾಗೂ 27 ರಂದು ಜರುಗುವುದು.ಕರ್ನಾಟಕ ರಾಜ್ಯ...

More Articles Like This

error: Content is protected !!
Join WhatsApp Group