Sindagi Chidananda Chalavadi: ಜನಪರ ಕಾಳಜಿಗೆ ಕಾರ್ಯಕರ್ತರು ಬರಬೇಕು – ಚಲವಾದಿ

Must Read

ಸಿಂದಗಿ: ಬಿಜೆಪಿ ಕೇವಲ ರಾಜಕೀಯ ಪಕ್ಷ ಎನ್ನುವ ಸಾರ್ವಜನಿಕರ ಭಾವನೆ ಬದಲಾಯಿಸಿ ಜನಪರ ಕಾಳಜಿಗೆ  ಒತ್ತು ನೀಡಲು ಕಾರ್ಯಕರ್ತರು ತೊಡಗಿಸಿ ಕೊಳ್ಳಬೇಕು  ಎಂದು ಸಿಂದಗಿ ಮಂಡಲ ಉಸ್ತುವಾರಿ ಚಿದಾನಂದ ಚಲವಾದಿ ಕರೆ ನೀಡಿದರು.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಸಿಂದಗಿ ಮಂಡಲ ಕಾರ್ಯಕಾರಣಿ ಸಭೆಯಲ್ಲಿ ಅವರು ಮಾತನಾಡಿದರು.

ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ಬಿಜೆಪಿ ನಮ್ಮ ದೇಶದ ಮಹಿಳೆ ಯರಿಗೆ ನೀಡುವ ಗೌರವ ಮತ್ತು ಸ್ವಾತಂತ್ರ್ಯ ಯಾವ ದೇಶದಲ್ಲಿಯೂ ಸಿಕ್ಕಿಲ್ಲ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ನಂತರ ಕೇಂದ್ರ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನ ನೀಡಿದ್ದಲ್ಲದೆ ನವಭಾರತ ನಾರಿ ಶಕ್ತಿ ಉಜ್ವಲ ಯೋಜನೆ ಅಡಿಯಲ್ಲಿ 2.6 ಕೋಟಿ ಎಲ್ ಪಿಜಿ ಸಂಪರ್ಕ ಕಲ್ಪಿಸಿದ್ದಾರೆ.

ಮಹಿಳೆಯರಿಗೋಸ್ಕರ ವಿವಿಧ ಯೋಜನೆ ಜಾರಿಗೆ ತಂದಿದ್ದಾರೆ. ಇದರಿಂದ ಪ್ರಧಾನಿ ಮೋದಿ  ಆಡಳಿತ ಜನಮನ್ನಣೆ ಗಳಿಸಿದ್ದು ವಿಶ್ವದಲ್ಲಿಯೇ ನಮ್ಮ ದೇಶ ಗುರುತಿಸುವ ಕೆಲಸ ಆಗಿದೆ. ರಾಷ್ಟ್ರೀಯ ಸುರಕ್ಷೆ ಮತ್ತು ವಿದೇಶಿ ನೀತಿ ಹಾಗೂ ಆರೋಗ್ಯ ರಕ್ಷಣೆ ಹಾಗೂ ತಂತ್ರಜ್ಞಾನ ಅಂತ್ಯೋದಯ ಮಿಷನ್ ರೈತ ಕಲ್ಯಾಣ ಕಾರ್ಯಕ್ರಮಗಳು ಹಾಗೂ ಯುವ ಸಬಲೀಕರಣ ರಕ್ಷಣಾ ಕ್ಷೇತ್ರ  ಅಂತರಿಕ ಹಾಗೂ ಬಾಹ್ಯ ಸುರಕ್ಷೆ, ತ್ರಿವಳಿ ತಲಾಖ್, ಅರ್ಟಿಕಲ್ 370 ರ ರದ್ಧತಿ ಹಾಗೂ ರಾಮ ಮಂದಿರ ನಿರ್ಮಾಣಕ್ಕಾಗಿ ಓಂಕಾರ ಹಾಗು ಕರ್ತಾರ್ ಪುರ್ ಕಾರಿಡಾರ್, ಜಲಜೀವನ್ ಮಿಷನ್, ಅಟಲ್ ಪಿಂಚಣಿ ಇನ್ನೂ ಅನೇಕ ಕಾರ್ಯಕ್ರಮ ಸೇರಿದಂತೆ ಜನಸಾಮಾನ್ಯರಿಗೆ ಎಟಕುವ ರೀತಿಯಲ್ಲಿ ಆಡಳಿತ ನೀಡುತ್ತಿದ್ದಾರೆ. ಎಂದರು 

ಮಂಡಲ ಅಧ್ಯಕ್ಷ ಈರಣ್ಣ ರಾವುರ, ಮಾಜಿ ನಿಂಬೆ ನಿಗಮದ ಅಧ್ಯಕ್ಷ ಅಶೋಕ ಅಲ್ಲಾಪುರ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಜೋಗುರ, ರಾಜಶೇಖರ ಪೂಜಾರಿ, ಮಾಜಿ ಜಿ ಪಂ ಸದಸ್ಯರಾದ ಶ್ರೀಮಂತ ನಾಗೂರ, ಶಂಕರ ಬಗಲಿ, ಮಲ್ಲಪ್ಪ ಹಾದಿಮನಿ,  ಎಮ್ ಎಸ್ ಮಠ ಅಮರೇಶ ಸಾಲಕ್ಕಿ ಶ್ರೀಶೈಲ ಭೋವಿ ಆಲಮೇಲ ಪಟ್ಟಣ ಪಂಚಾಯಿತಿ ಸದಸ್ಯರು ಮಹಾಂತಗೌಡ ಬಿರಾದಾರ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ವಕೀಲರು,  ಪ್ರಕಾಶ ನಂದಿಕೊಲ, ಗುರು ತಳವಾರ, ಬಸು ಸಜ್ಜನ  ಸಿದ್ಧಲಿಂಗಯ್ಯ ಹಿರೇಮಠ ಗುರು ಹುಲ್ಲೂರ ಚಂದ್ರಶೇಖರ ಅಮಲಿಹಾಳ ಪ್ರಕಾಶ ಶೇರಖಾನೆ ನಾಗರಾಜ್ ರಾಯಗೊಂಡ ಬಳಗಾನೂರ, ಸಿದ್ದು ಆನಗೊಂಡ, ಸಿದ್ಧು ಪುಜಾರಿ, ಶಮಿ ಬಿಜಾಪುರ, ಶಾರದಾ ಮಂಗಳೂರ, ಅನಸುಬಾಯಿ ಪರಗೊಂಡ. ಜಗದೇವಿ ಬಿರಾದಾರ, ಮಾಧ್ಯಮ ಸಂಚಾಲಕ ಶಿವಕುಮಾರ ಬಿರಾದಾರ ಸೇರಿದಂತೆ ಅನೇಕರಿದ್ದರು.

Latest News

ಎಲ್ಲಾ ಜಿಲ್ಲೆಗಳ ಯುವ ಸಾಧಕರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರದಾನ  

ಮೂಡಲಗಿ:-ತಾಲೂಕಿನ ಹಳ್ಳೂರ ಗ್ರಾಮದಲ್ಲಿ ರಾಜ್ಯದ ೩೧ ಜಿಲ್ಲೆಯ "ಯುವ ಸಾಧಕರಿಗೆ ಪ್ರಶಸ್ತಿ" ಪ್ರದಾನ ಸಮಾರಂಭ ಕಾರ್ಯಕ್ರಮ ದಿ. 26 ಹಾಗೂ 27 ರಂದು ಜರುಗುವುದು.ಕರ್ನಾಟಕ ರಾಜ್ಯ...

More Articles Like This

error: Content is protected !!
Join WhatsApp Group