Bidar: ಗೋ ಹತ್ಯೆ; ಇಬ್ಬರ ವಿರುದ್ಧ ಪ್ರಕರಣ ದಾಖಲು

0
649

ಬೀದರ – ಬಕ್ರೀದ ಹಬ್ಬದ ಸಂದರ್ಭದಲ್ಲಿ ಗೋ ಹತ್ಯೆ ಮಾಡುತ್ತಿದ್ದರೆಂದು ಆರೋಪಿಸಿ ಬಸವಕಲ್ಯಾಣದ ಇನಾಮುಲ್ಲಾ ಖಾನ್ ಹಾಗೂ ಮಜಾರ್ ಖಾನ್ ಎಂಬ ಇಬ್ಬರ ವಿರುದ್ಧ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆಯ ಪಿಎಸ್ಐ ಕು. ರೇಣುಕಾ ಅವರು ದೂರು ದಾಖಲಾತಿ ನೀಡಿದ್ದು, ನಗರದ ಹಿರೇಮಠ ಕಾಲನಿಯಲ್ಲಿ ಆರೋಪಿತರು ಇನಾಮುಲ್ಲಾ ಖಾನ್ ಹಾಗೂ ಆತನ ಮಗ ಮಜಾರ್ ಖಾನ್ ಬಕ್ರಿದ್ ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿ ಗೋವನ್ನು ಕಡಿಯುತ್ತಿದ್ದಾರೆಂಬ ಸುಳಿವಿನ ಮೇರೆಗೆ ದಾಳಿ ಮಾಡಿ ಕತ್ತರಿಸಿ ಇಡಲಾಗಿದ್ದ ದನದ ಮಾಂಸವನ್ನು ಜಪ್ತಿ ಮಾಡಿಕೊಂಡಿದ್ದಾಗಿ ದೂರು ನೀಡಿದ್ದಾರೆ.

ತಾವು ಹೋರಿಯೊಂದನ್ನು ತಂದು ಹತ್ಯೆ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದು ಇದೇ ಸಂದರ್ಭದಲ್ಲಿ ೬೦ ಕೆಜಿಯಷ್ಟು ದನದ ಮಾಂಸ ಹಾಗೂ ದನ ಕಡಿಯುವ ಸಾಧನಗಳನ್ನು ವಶಪಡಿಸಿಕೊಂಡಿದ್ದು ಸದರಿ ಆರೋಪಿತರ ವಿರುದ್ಧ ಗೋ ಹತ್ಯಾ ನಿಷೇಧ ಕಾಯ್ದೆಯ ಅನುಸಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರೇಣುಕಾ ಅವರು ದೂರು ದಾಖಲಿಸಿದ್ದಾರೆ.

ಪ್ರಕರಣವನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದ್ದು ಗೋ ಹತ್ಯೆ ಮಾಡಿರುವ ಇಬ್ಬರ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಲಾಗುವುದು ಎಂಬುದನ್ನು ಕಾದು ನೋಡಬೇಕು.


ವರದಿ: ನಂದಕುಮಾರ ಕರಂಜೆ, ಬೀದರ