spot_img
spot_img

ತುಕ್ಕಾನಟ್ಟಿ ಸರಕಾರಿ ಮಾದರಿ ಶಾಲೆಯಲ್ಲಿ ಅಕ್ಷರ ಸಂಸ್ಕಾರ ಕಾರ್ಯಕ್ರಮ

Must Read

spot_img
- Advertisement -

ಮೂಡಲಗಿ: ಸಂಸ್ಕೃತಿಯ ಮೂಲ ಬೇರು  ತಾಯಿವೆಂಬುದನ್ನು ನಮ್ಮ ನಾಡಿನ ಸಂಸ್ಕೃತಿಯ ಪರಂಪರೆ ಸಮಾಜಕ್ಕೆ ತಿಳಿಸಿಕೊಟ್ಟದೆ, ಮಕ್ಕಳಿಗೆ ಅಕ್ಷರ ಸಂಸ್ಕಾರವು ಬೇಕು, ನಮ್ಮ ನಾಡಿನ ಸಂಸ್ಕೃತಿಯು ಬೇಕು, ಸಾಮಾಜಿಕ, ಶೈಕ್ಷಣಿಕ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ತುಂಬಾ ಮಹತ್ವದಾಗಿದೆ ಎಂದು ತುಕ್ಕಾನಟ್ಟಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎ.ವಿ.ಗಿರೆಣ್ಣವರ ಹೇಳಿದರು.

ತಾಲೂಕಿನ ತುಕ್ಕಾನಟ್ಟಿ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಹೊಸದಾಗಿ ದಾಖಲಾದ ಒಂದನೇ ತರಗತಿ ಮಕ್ಕಳಿಗೆ ಅಕ್ಷರ ಸಂಸ್ಕಾರ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿ, ಇವತ್ತು ವಿದ್ಯಾರ್ಥಿಗಳ ತಾಯಿಯಿಂದ ಮಗುವಿಗೆ ಅಕ್ಕಿಯಲ್ಲಿ ಓಂಕಾರ ಬರೆಸುವದರೊಂದಿಗೆ ಅಕ್ಷರ ಸಂಸ್ಕಾರ ಹಾಗೂ ಸರಸ್ವತಿ ಪೂಜೆಯೊಂದಿಗೆ ದೈವಭಕ್ತಿ, ಮಾತೃಭಕ್ತಿ, ಶಿಕ್ಷಣದ ಮಹತ್ವ ಎಲ್ಲವನ್ನು ಕಲಿಸಿಕೊಡುವುದೆ ಇವತ್ತಿನ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. 

ಮನೆಯಲ್ಲಿ ತಾಯಿಂದಿರು ಮಕ್ಕಳಿಗೆ ತಮ್ಮ ಸಮಯವುನ್ನು ಮೀಸಲಿಟ್ಟು ತಮ್ಮ ಪ್ರೀತಿಯನ್ನು ಮಕ್ಕಳಿಗೆ ಧಾರೆ ಎರೆಯುವದರೊಂದಿಗೆ ಮಗು ಸಮಾಜದಲ್ಲಿ ಉತ್ತಮ ನಾಗರಿಕರಾಗಲು ಶಿಕ್ಷರ ಜೊತೆ ಕೈ ಜೋಡಿಸಬೇಕು, ಮಕ್ಕಳು ಚಿಕ್ಕವರು ಇರುವಾಗಲೇ ಉತ್ತಮ ನಡೆ, ನುಡಿ ಕಲಿಸಿ ಸಮಾಜಕ್ಕೆ ಒಬ್ಬ ಉತ್ತಮ ಪ್ರಜೆಯನ್ನು ಕೋಡುವಂತವರಾಗಬೇಕೆಂದರು. 

- Advertisement -

ಇದೇ ಸಂಧರ್ಭದಲ್ಲಿ ತಾಯಂದಿರರು ಅಕ್ಕಿಯಲ್ಲಿ ಮಗುವಿನ ಕಡೆಯಿಂದ ಓಂಕಾರ ಬರೆಯಿಸಿ ಅಕ್ಷರ ಕಲಿಕೆಗೆ ನಾಂದಿ ಹಾಡಿದರು. ಅದೇ ಅಕ್ಕಿಯಿಂದ ಅಡುಗೆ ಮಾಡಿ ಮಕ್ಕಳಿಗೆ ಹಾಗೂ ತಾಯಂದಿರಿಗೆ ಊಣಬಡಿಸಿದರು. 

ಪುರೋಹಿತರು ವಿದ್ಯಾ ದೇವತೆಗೆ ಸಲ್ಲಸಿದ ಪೂಜಾ ಕಾರ್ಯಕ್ರಮದಲ್ಲಿ ಮಕ್ಕಳುe ತಾಯಂದಿರು ಪಾಲ್ಗೊಂಡು ಶೈಕ್ಷಣಿಕ ಪ್ರಾರಂಭದಲ್ಲಿ ದೈವತ್ವವನ್ನು ಕಂಡುಕೊಂಡರು. ನಂತರ ಗುರುಬಳಗ ತಾಯಿಂದಿರರಿಗೆ ಆರತಿ ಮಾಡಿಸೌಹಾರ್ದತೆಯುತ ನಡುವಿನ ಭಕ್ತಿ ಪರಂಪರೆಯನ್ನು ಮೂಡಿಸಿದರು. ಸೌಹಾರ್ದಯುತ ಭಾಂಧವ್ಯಕ್ಕೆ ತಳಹದಿ ಹಾಕಿದರು. ಕಾರ್ಯಕ್ರಮದಲ್ಲಿ ನೂರಾರು ತಾಯಿಂದಿರರು ಪಾಲ್ಗೊಂಡಿದ್ದರು.

ಶಿಕ್ಷಕರಾದ ಲಕ್ಷ್ಮೀ ಹೆಬ್ಬಾಳ, ಪುಷ್ಪಾ ಭರಮದೆ, ಕುಸುಮಾ ಚಿಗರಿ, ವಿಮಲಾಕ್ಷಿ ತೋರಗಲ್ಲ, ಶೀಲಾ ಕುಲಕರ್ಣಿ, ಸಂಗೀತಾ ತಳವಾರ, ರೇಖಾ ಗದಾಡಿ, ಶೀವಲೀಲಾ ಹಣಮನ್ನವರ, ಖಾತೂನ ನದಾಫ್, ಮಾನಂದಾ ದಡ್ಡಿಮನಿ, ಶಂಕರ ಲಮಾಣಿ, ಕೆ.ಆರ್.ಭಜಂತ್ರಿ, ಎಮ್.ಡಿ.ಗೋಮಾಡಿ, ಹೊಳೆಪ್ಪ ಗದಾಡಿ ಮತ್ತಿತರರು ಇದ್ದರು.

- Advertisement -
- Advertisement -

Latest News

ಶಿವಮೊಗ್ಗದಲ್ಲಿ ರಾಷ್ಟ್ರಮಟ್ಟದ ಕನ್ನಡ ನುಡಿ ವೈಭವ ಕಾರ್ಯಕ್ರಮ

ಕರ್ನಾಟಕ ರಾಜ್ಯ ಬರಹಗಾರರ ಸಂಘ(ರಿ) ಹೂವಿನ ಹಡಗಲಿ, ಈ ಸಂಘವು ರಾಜ್ಯದ ೩೦ ಜಿಲ್ಲೆಗಳಲ್ಲಿ ಜಿಲ್ಲಾ ಘಟಕ ಸ್ಥಾಪನೆ ಮಾಡಿದ್ದು ಜಿಲ್ಲಾ ಅಧ್ಯಕ್ಷರ ನೇಮಕ ಮಾಡಲಾಗಿದೆ....
- Advertisement -

More Articles Like This

- Advertisement -
close
error: Content is protected !!
Join WhatsApp Group