spot_img
spot_img

ಬೇಡಿಕೆ ಈಡೇರಿಕೆಗಾಗಿ ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ

Must Read

spot_img
- Advertisement -

ಮೂಡಲಗಿ: ಅತ್ಯಂತ ದಯನೀಯ ಸ್ಥಿತಿಯಲ್ಲಿರುವ ಅಂಗನವಾಡಿ ಕೆಲಸಗಾರರನ್ನು ನಿರ್ಲಕ್ಷ್ಯ ಮಾಡುತ್ತಿರುವ ಕೇಂದ್ರ ಸರ್ಕಾರದ ಧೋರಣೆಯ ವಿರುದ್ಧ ಮತ್ತು ರಾಜ್ಯದಲ್ಲಿ ಹೊಸ ಮೊಬೈಲ್‍ಗಳಿಗಾಗಿ ಹಾಗೂ 2023 ರ ಬಜೆಟ್‍ನಲ್ಲಿ

ಹೆಚ್ಚಳವಾದ 1000 ರೂ.ಗಳ ಗೌರವಧನ ಬಿಡುಗಡೆಗಾಗಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ, ಸೋಮವಾರದಂದು ಪಟ್ಟಣದ ಪುರಸಭೆ ಆವರಣದಿಂದ ಸಿಡಿಪಿಓ ಕಚೇರಿವರೆಗೆ ರ್ಯಾಲಿ ಮೂಲಕ ಆಗಮಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಸಿಡಿಪಿಒ ಯಲ್ಲಪ್ಪ ಗದಾಡಿ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ದೊಡ್ಡವ್ವ ಪೂಜಾರಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಬಳಸುತ್ತಿರುವ ಮೊಬೈಲ್‍ಗಳು ಸರಿಯಾಗಿ ಬಳಸಲು ಸಾಧ್ಯವಾಗುತ್ತಿಲ್ಲ. ಇದರಿಂದ ನಮ್ಮ ಕಾರ್ಯಕರ್ತೆಯರಿಗೆ ದಾಖಲಾತಿಗಳನ್ನು ಮೊಬೈಲ್‍ದಲ್ಲಿ ತುಂಬಲು ತೊಂದರೆ ಉಂಟಾಗುತ್ತಿದೆ. ಶೀಘ್ರವಾಗಿ ಸರ್ಕಾರ ಹೊಸ ಮೊಬೈಲ್‍ಗಳನ್ನು ವಿತರಣೆ ಮಾಡಬೇಕು. ಹಾಗೂ ಕಾರ್ಯಕರ್ತೆಯರಿಗೆ ಸಂಬಳ ಸಹ ಕಡಿಮೆ ಇರುವುದರಿಂದ ತಮ್ಮ ಜೀವನ ಸಾಗಿಸಲು ಸಂಕಷ್ಟ ಎದುರಿಸುತ್ತಿದ್ದಾರೆ. ಆದರಿಂದ ಕಳೆದ ಬಜೆಟ್‍ನಲ್ಲಿ ಹೇಳಿದ ಹಾಗೆ 1000 ರೂ,ಗಳನ್ನು ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸಿ, ಮೊಬೈಲ್ ನೀಡುವವರೆಗೂ ಕೈಬರಹದ ಮೂಲಕ ಸಮಿಕ್ಷೆ ಮಾಡಿರುವ ದಾಖಲಾತಿಗಳನ್ನು ತುಂಬುವಂತೆ ಅವಕಾಶ ಕಲ್ಪಿಸಬೇಕೆಂದರು.

- Advertisement -

ಈ ಸಂದರ್ಭದಲ್ಲಿ ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಮುನಿರಾ ಮುಲ್ಲಾ, ಗ್ರಾ.ಪಂ ನೌಕರರ ಸಂಘದ ಮೂಡಲಗಿ ತಾಲೂಕಾ ಅಧ್ಯಕ್ಷ ರಮೇಶ ಹೋಳಿ, ಉಪಾಧ್ಯಕ್ಷ ಬಸವರಾಜ ಮಿರ್ಜಿ, ಮೂಡಲಗಿ ತಾಲೂಕಾ ಸಹಕಾರ್ಯದರ್ಶಿ ಸುಜಾತಾ ಕೊಕಟನೂರ, ಮುಖಂಡರಾದ ವಿಜಯಲಕ್ಷ್ಮೀ ಶಿರೆಗಾರ, ಸುರ್ವಣಾ ವಡರಹಟ್ಟಿ, ಬಂದವ್ವ ಘಂಟಿಚೂರ, ಸುವರ್ಣಾ ಪಾಟೀಲ, ಸುಜಾತ ಕಿತ್ತೂರ, ರೇಣುಕಾ ಪಾಟೀಲ, ಹೇಮಾ ಸಿದ್ದಪೂರ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟೆಯಲ್ಲಿ ಭಾಗವಹಿಸಿದರು.

- Advertisement -
- Advertisement -

Latest News

ಶಿವಮೊಗ್ಗದಲ್ಲಿ ರಾಷ್ಟ್ರಮಟ್ಟದ ಕನ್ನಡ ನುಡಿ ವೈಭವ ಕಾರ್ಯಕ್ರಮ

ಕರ್ನಾಟಕ ರಾಜ್ಯ ಬರಹಗಾರರ ಸಂಘ(ರಿ) ಹೂವಿನ ಹಡಗಲಿ, ಈ ಸಂಘವು ರಾಜ್ಯದ ೩೦ ಜಿಲ್ಲೆಗಳಲ್ಲಿ ಜಿಲ್ಲಾ ಘಟಕ ಸ್ಥಾಪನೆ ಮಾಡಿದ್ದು ಜಿಲ್ಲಾ ಅಧ್ಯಕ್ಷರ ನೇಮಕ ಮಾಡಲಾಗಿದೆ....
- Advertisement -

More Articles Like This

- Advertisement -
close
error: Content is protected !!
Join WhatsApp Group