Gurlapur: ಗುರ್ಲಾಪೂರದಲ್ಲಿ ಕುಮಾರಸ್ವಾಮಿಗೆ ಸನ್ಮಾನ

Must Read

ಗುರ್ಲಾಪೂರ–  ಸ್ಥಳಿಯ ಶ್ರೀ ಮಲ್ಲಿಕಾರ್ಜುನ ಅರ್ಬನ್ ಕೋ- ಆಪ್ ಕ್ರೆಡಿಟ್ ಸೊಸಾಯಿಟಿಯಲ್ಲಿ ನೀರಾವರಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿಯಾದ ಕುಮಾರಸ್ವಾಮಿ ಚನಬಸಯ್ಯ ಕುರಟ್ಟಿ ಇವರನ್ನು ಸಂಘದ ಅಧ್ಯಕ್ಷರಾದ ಪರಪ್ಪ ಚಿ ಮುಗಳಖೋಡ ಇವರ ಅಧ್ಯಕ್ಷತೆಯಲ್ಲಿ ಸನ್ಮಾನ ನಡೆಯಿತು.

ಸೇವೆಯಿಂದ ನಿವೃತ್ತಿಯಾದ ಕುಮಾರಸ್ವಾಮಿಯವರ ಜೀವನವು ಸುಂದರ ಸರಳವಾಗಿ ಸಾಗಲಿ ಹಾಗೆ ಅವರು ತಮ್ಮ ಅದಿಕಾರವಧಿಯಲ್ಲಿ ನಡೆದ ಬಂದ ಸಾಧನೆ ಬಗ್ಗೆ ತಿಳಿಸಿದರು. 

ಸನ್ಮಾನಿತರು ಮಾತನಾಡಿ, ನನ್ನನ್ನು ಗುರುತಿಸಿ ಸನ್ಮಾನ ಮಾಡಿದಕ್ಕೆ ನಾನು ಚಿರಋಣಿಯಾಗಿರುತ್ತೇನೆ ಹಾಗೆ ಇಂತಹ ಸಂಸ್ಥೆ ಬೆಳೆದು ಹೆಮ್ಮರವಾಗಲಿ ಎನ್ನುತ್ತಾ ಎಲ್ಲ ಆಡಳಿತ ಮಂಡಳಿಗೆ ಸಿಬ್ಬಂದಿಯವರಿಗೆ ಅಭಿನಂದನೆ ತಿಳಿಸಿದರು.

ಆರಂಭದಲ್ಲಿ ಸೊಸಾಯಿಟಿಯ ಕಾರ್ಯದರ್ಶಿ ಶೇಖರಯ್ಯಾ ಹಿರೇಮಠ ಸ್ವಾಗತಿಸಿ ಕುಮಾರಸ್ವಾಮಿಯವರ ಬಗ್ಗೆ ಮಾತನಾಡಿದರು.

ಈ ಸಂದರ್ಭದಲ್ಲಿ ಅಶೋಕ ಕೌಜಲಗಿ.ಅಲಗೌಡ ಶೇಗುಣಸಿ,ಬಸನಗೌಡ ಬೋರಗಲ್, ಕಲ್ಲಪ್ಪ ಹೊಸಟ್ಟಿ,ರಾಮಪ್ಪ ಮುಗಳಖೋಡ, ಪ್ರಕಾಶ ಸುಳ್ಳನವರ ಕೆಂಪಣ್ಣ ಮುಗಳಖೋಡ, ಶಂಕರ ಮುಗಳಖೋಡ ಹಾಗು ಸಂಘದ ಸದಸ್ಯರು ಉಪಸ್ಥಿತರಿದ್ದರು. ಮಾರುತಿ ಕಾಮಗೌಡರ ನಿರೂಪಿಸಿ ವಂದಿಸಿದರು.

Latest News

ಉಪ್ಪಾರ ಸಮಾಜ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನೆರವು – ಬರಮಣ್ಣ ಉಪ್ಪಾರ

ಮೂಡಲಗಿ: ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ರೂ.೫ ಕೋಟಿ ಹಣವಿದೆ ಸಮಾಜದ ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಸಾಧನೆ...

More Articles Like This

error: Content is protected !!
Join WhatsApp Group