- Advertisement -
ಬೀದರ: ದೇಶದಲ್ಲಿ ಬೇಟಿ ಬಚಾವೋ ಎಂದು ವ್ಯಾಪಕವಾಗಿ ಅಭಿಯಾನ ಹಮ್ಮಿಕೊಂಡಿದ್ದರೂ ಬೀದರ್ ಜಿಲ್ಲೆಯ ಹುಲಸೂರ ತಾಲೂಕಿನಲ್ಲಿ ಹೆಣ್ಣು ಭ್ರೂಣವೊಂದನ್ನು ರಕ್ತದ ಮಡುವಿನಲ್ಲಿ ಬಿಟ್ಟು ಹೋಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಭ್ರೂಣ ಹತ್ಯೆ ಮಾಡಿ ಮಗುವನ್ನು ರಸ್ತೆ ಬದಿಯಲ್ಲಿ ರಕ್ತದೊಡಲಿನಲ್ಲಿ ಬಿಸಾಡಿ ಹೊದ ಕಿಡಿಗೇಡಿಗಳು ಮಾನವ ಜಾತಿಗೇ ಕಳಂಕ ಮೆತ್ತಿದ್ದಾರೆ. ಬೀದರ್ ಜಿಲ್ಲೆಯ ಹುಲಸೂರ ತಾಲೂಕಿನ ಗುತ್ತಿ ಗ್ರಾಮದ ರಸ್ತೆ ಬದಿಯಲ್ಲಿರವಿವಾರ ರಾತ್ರಿ ೧೦ ಗಂಟೆಗೆ ಘಟನೆ ಬೆಳಕಿಗೆ ಬಂದಿದೆ.
ಕೂಡಲೆ ಸ್ಥಳಕ್ಕೆ ಭೇಟಿ ನೀಡಿದ ಹುಲಸೂರ ಪೊಲೀಸ್ ಠಾಣೆಯ ಪೊಲೀಸರು ಭ್ರೂಣವನ್ನು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ನೀಡಿದ್ಧಾರೆ.
- Advertisement -
ತಾಯಿಯ ಹೊಟ್ಟೆಯಲ್ಲಿರುವ ಮಗುವಿಗೆ ಕೇವಲ 4 ತಿಂಗಳು ಆಗಿರಬಹುದು ಅಲ್ಲದೆ ಹೆಣ್ಣು ಮಗುವಿದೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಹುಲಸೂರು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ವರದಿ : ನಂದಕುಮಾರ ಕರಂಜೆ, ಬೀದರ