Bidar: ಕಾರಂಜಾ ಸೇತುವೆ ಮೇಲೆ ಮಗಳೊಡನೆ ಸೆಲ್ಫಿ

0
604

ಬೀದರ – ರಾಜ್ಯದಾದ್ಯಂತ ಸಾಕಷ್ಟು ಮಳೆಯಾಗುತ್ತಿದೆ. ಅಣೆಕಟ್ಟೆಗಳು ತಂಬುತ್ತಿವೆ. ಹೊಳೆ ಹಳ್ಳಗಳೆಲ್ಲ ತುಂಬಿ ಹರಿಯುತ್ತಿವೆ. ಅಪಾಯ ಹೆಚ್ಚಾಗಿದೆ. ಆದರೂ ಕೆಲವು ಕಡೆಯಿಂದ ನದಿ ದಂಡೆಯಲ್ಲಿ ಸೆಲ್ಫಿ ತೆಗೆದುಕೊಳ್ಳುವ ಹುಚ್ಚಿಗೆ ಬಿದ್ದು ಜೀವ ಕಳೆದುಕೊಂಡವರು ಸಾಕಷ್ಟು ಜನ. ಹೀಗಿದ್ದರೂ ಇಲ್ಲೊಬ್ಬರು ಕಾರಂಜಾ ಜಲಾಶಯ ಪಕ್ಕದ ಸೇತುವೆಯ ತುದಿಗೆ ಮಗುವನ್ನು ನಿಲ್ಲಿಸಿ ಸೆಲ್ಫಿ ತೆಗೆದುಕೊಂಡರು.

ಗಡಿ ಜಿಲ್ಲೆ ಬೀದರ್ ನಲ್ಲಿ ಸತತವಾಗಿ ಆರು ಏಳು ದಿನಗಳಿಂದ ಸುರಿಯುತ್ತಿದೆ. ಕಾರಂಜಾ ಜಲಾಶಯ ತುಂಬಿ ತುಳುಕುತ್ತದೆ ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಹುಚ್ಚಾಟ ಮಾಡುತ್ತಿದ್ದಾರೆ. ಏನಾದರೂ ಅನಾಹುತದ ಆದರೆ ಯಾರು ಹೊಣೆಗಾರ ಎಂಬ ಪ್ರಶ್ನೆ.

ಭಾರೀ ಮಳೆಯಿಂದಾಗಿ ಜಿಲ್ಲಾ ಆಡಳಿತ  ಎರಡು ದಿವಸ ಶಾಲೆ ಕಾಲೇಜು ರಜೆಯ ಘೋಷಣೆ ಮಾಡಿದೆ‌ ಸಾರ್ವಜನಿಕರು ಮನೆ ಯಿಂದ ಹೊರಗೆ ಬರಬೇಡಿ ಎಂದು ಆದೇಶ ನೀಡಿದೆ ಆದರೂ ಜಿಲ್ಲಾ ಆಡಳಿತ ಆದೇಶಕ್ಕೆ ಕ್ಯಾರೆ ಅನ್ನದ ಸಾರ್ವಜನಿಕರು ಸೆಲ್ಫಿ ಮೋಡಿಗೆ ಒಳಗಾಗಿದ್ದಾರೆ. ಈ ತಂದೆ ಮಾತ್ರ  ತಮ್ಮ ಮಗಳನ್ನು ಉಕ್ಕಿ ಹರಿಯುತ್ತಿರುವ ಕಾರಂಜಾ ಅಣೆಕಟ್ಟು ಮೇಲೆ ನಿಲ್ಲಿಸಿ ಪೋಟೋ ತೆಗೆಯುತ್ತಿದ್ದ.


ವರದಿ: ನಂದಕುಮಾರ ಕರಂಜೆ, ಬೀದರ