ಬೀದರ್ – ಜಿಲ್ಲೆಯಲ್ಲಿ ಇತ್ತೀಚೆಗೆ ಕಲ್ಲಿನ ನಂದಿ ಬಸವಣ್ಣ ನೀರು ಕುಡಿದ ವಿಸ್ಮಯದ ಘಟನೆ ಮಾಸುವ ಮುನ್ನವೆ ಭಕ್ತ ಜನರು ದೇವಸ್ಥಾನದಲ್ಲಿನ ನಂದಿಗೆ ಹಾಲು ಕುಡಿಸುತ್ತಿದ್ದು ಮಹಿಳೆಯರು ದೇವಸ್ಥಾನಗಳಲ್ಲಿ ಮುಗಿಬಿದ್ದು ನಂದಿಗೆ ಹಾಲು, ನೀರು ಕುಡಿಸುತ್ತ ಇದ್ದಾರೆ.
ಕಲ್ಲಿನ ನಂದಿ ಮೂರ್ತಿ ನೀರು ಕುಡಿಯುತ್ತಿರುವ ಪವಾಡವೊಂದರ ಬಗ್ಗೆ ಬೀದರ ಜಿಲ್ಲಾಯಾದ್ಯಂತ ಭಾರಿ ಚರ್ಚೆ ನಡೆದಿದ್ದು, ಇದನ್ನು ಕಣ್ತುಂಬಿಕೊಳ್ಳಲು ಜನರು ಹರಿದು ಬರುತ್ತಿದೆ.
ಹೌದು, ಇಂಥ ಘಟನೆ ನಡೆದಿದ್ದು ಬೀದರ ತಾಲೂಕಿನ ನಗರದ ಹೊರವಲಯದ ಧುಮಸಾಪುರ ಗ್ರಾಮದಲ್ಲಿ. ಹೆಣ್ಮಕ್ಕಳು ಚಮಚದಿಂದ ಕಲ್ಲಿನ ಮೂರ್ತಿಗೆ ನೀರು ಕುಡಿಸುತ್ತಿದ್ದಾರೆ. ಒಂದು ಹನಿಯೂ ಚೆಲ್ಲದಂತೆ ವಿಗ್ರಹ ನೀರು ಕುಡಿದಿದೆ. ಇದು ವಿಸ್ಮಯವೋ, ಪವಾಡವೋ ಗೊತ್ತಿಲ್ಲ. ಆದರೆ ಮೂರ್ತಿ ನೀರು ಕುಡಿದಿದ್ದು ನಿಜ ಎನ್ನುತ್ತಾರೆ ಜನರು. ಒಂದು ವಾರದಿಂದ ಆರಂಭವಾದ ಈ ಟ್ರೇಂಡ್ ಇದೀಗ ಜಿಲ್ಲೆಯ ಪ್ರತಿಯೊಂದು ಊರಲ್ಲು ನಡೆಯತ್ತಲೇ ಇದೆ. ನಂದಿ ವಿಗ್ರಹಕ್ಕೆ ಚಮಚದಿಂದ ನೀರು- ಹಾಲು ಕುಡಿಸುತ್ತಿರುವ ವಿಡಿಯೋಗಳು ಸಕತ್ ಆಗಿ ವೈರಲ್ ಆಗುತ್ತಿವೆ.
ಬಸವಣ್ಣನವರು ಕರ್ಮಭೂಮಿ ಬಸವಕಲ್ಯಾಣ ನಾರಾಯಣಪುರ ಗ್ರಾಮದಲ್ಲಿ ನಂದಿ ಹಾಲು ಕುಡಿಯುವ ವಿಡಿಯೋ, ಬೀದರ ತಾಲೂಕಿನ ದುಮ್ಮಸಾಪುರ ಗ್ರಾಮದಲ್ಲಿ ಹಾಲು ಕುಡಿಯುವ ವಿಡಿಯೋ, ಬೀದರ ತಾಲೂಕಿನ ಅಳಯಂಬರ್ ಗ್ರಾಮದಲ್ಲಿ ಹಾಲು ಕುಡಿಯುವ ವಿಡಿಯೋ ವೈರಲ್ ಆಗಿವೆ.
ಬೀದರ್ ನ ಧುಮಸಾಪುರ, ಮರಕುಂದ, ಚಿಟಗುಪ್ಪಾ ತಾಲೂಕಿನ ನಿರ್ಣಾ, ಮಂಗಲಗಿ, ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಸೇರಿದಂತೆ ಔರಾದ್, ಕಮಲನಗರ, ಹುಮನಾಬಾದ್ ತಾಲೂಕಿನಾದ್ಯಂತ ನಂದಿ ಹಾಲು- ನೀರು ಸೇವಿಸುತ್ತಿದೆ
ಜನ ಮರಳೊ-ಜಾತ್ರೆ ಮರಳೊ ಎಂಬಂತೆ ಅಲ್ಲಲ್ಲಿ ನಂದಿ ವಿಗ್ರಹಕ್ಕೆ ಹಾಲು- ನೀರು ಕುಡಿಸಲು ನಾರಿಮಣಿಗಳು ಟೆಂಪಲ್ ರನ್ ಮಾಡ್ತಿದ್ದಾರೆ.
ಬೀದರ ನಗರದ ಹೊರವಲಯದ ಧುಮಸಾಪುರ (ಎಸ ಎಂ ಕೃಷ್ಣಾ ನಗರ) ಗ್ರಾಮದಲ್ಲಿ ಭವಾನಿ ಮಾತೆಯ ಮಂದಿರ ಇದೆ. ದೇವಿಯ ಮೂರ್ತಿ ಎದುರು ಸುಮಾರು ೧೧ವರ್ಷದ ಹಿಂದೆ ನಂದಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿತ್ತು. ದೇವಸ್ಥಾನದ ಪೂಜಾರಿಯಾದ ಶಶಿಕಲಾ ಮಠಪತಿ ಅವರು ಎಂದಿನಂತೆ ಅಭಿಷೇಕ ಮುಗಿಸಿ ತೀರ್ಥವನ್ನು ನಂದಿ ಮೂರ್ತಿ ಎದುರು ಇಟ್ಟಿದ್ದಾರೆ. ನೋಡು ನೋಡುತ್ತಿದ್ದಂತೆ ಮೂರ್ತಿ ತೀರ್ಥವನ್ನು ಕುಡಿದಿದೆ.
ಸುದ್ದಿ ಸುತ್ತಮುತ್ತಲಿನ ಗ್ರಾಮಗಳಿಗೂ ಹರಡಿ ಜಮರು ಧುಮಸಾಪುರ ಕಡೆಗೆ ಹೆಜ್ಜೆ ಹಾಕಿದರು. ಬೆಳ್ಳೂರು, ಎಸ್.ಎಂ. ಕೃಷ್ಣ ನಗರ, ಗುಂಪಾ, ಕುಂಬಾರವಾಡಾ ಸೇರಿದಂತೆ ವಿವಿಧ ಕಡೆಯಿಂದ ಜನ ಆಗಮಿಸಿ ನಂದಿ ಮೂರ್ತಿಗೆ ನೀರು ಕುಡಿಸಿ ಭಕ್ತಿಯಿಂದ ನಮಿಸಿದ ಘಟನೆ ಕಂಡುಬಂತು.
ವರದಿ: ನಂದಕುಮಾರ ಕರಂಜೆ, ಬೀದರ

ವರದಿ : ನಂದಕುಮಾರ ಕರಂಜೆ, ಬೀದರ