spot_img
spot_img

‘ಗುರು ಗುಣ ಗಾನ’ ಸಂಗೀತ, ಸಾಹಿತ್ಯ, ನೃತ್ಯ ಸಂಭ್ರಮ -೨೦೨೩; ಕವಿ ಕಲಾವಿದರಿಂದ ಅರ್ಜಿ ಆಹ್ವಾನ

Must Read

spot_img
- Advertisement -

ಗದಗ– ಪೂಜ್ಯರ ಅಭಿಮಾನಿ ಭಕ್ತರ ಮಹಾ ಬಳಗವಾದ ಗದುಗಿನ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯು, ‘ಪದ್ಮಭೂಷಣ’ ಡಾ. ಪಂ. ಪುಟ್ಟರಾಜ ಕವಿ ಗುರುವರ್ಯರ ಪುಣ್ಯದಿನಾಚರಣೆ ಮತ್ತು ಸೇವಾ ಸಮಿತಿಯ ವಾರ್ಷಿಕೋತ್ಸವದಂಗವಾಗಿ, ದಿನಾಂಕ ೧೭ ಸಪ್ಟೆಂಬರ್ ೨೦೨೩ ರಂದು ಗದಗ-ಬೆಟಗೇರಿ ಮಹಾ ನಗರದಲ್ಲಿ ‘ಗುರು ಗುಣ ಗಾನ’ (ಪುಟ್ಟರಾಜ ಸಂಗೀತ ಸಾಹಿತ್ಯ ನೃತ್ಯ ಸಂಭ್ರಮ -೨೦೨೩)  ಕಾರ್ಯ ಕ್ರಮವನ್ನು ಹಮ್ಮಿಕೊಂಡಿದೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸಮೂಹ ಸಂಗೀತ, ನೃತ್ಯ ಪ್ರದರ್ಶನ ಸೇವೆ ಸಲ್ಲಿಸಲು ಆಸಕ್ತರಾದ ಯುವ ಉದಯೋನ್ಮುಖ ಕಲಾವಿದರು ಮತ್ತು ಗುರು ಪುಟ್ಟರಾಜರ ಕುರಿತಾದ ಸ್ವರಚಿತ ಕವನವಾಚಿಸಿ ಗುರು ಗುಣ ಗಾನಮಾಡಲು ಆಸಕ್ತರಾದ ಹಿರಿಯ ಮತ್ತು ಯುವ ಕವಿಗಳು ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಆಹ್ವಾನಿಸಲಾಗಿದೆ.

ಈ ಸಮಾರಂಭದಲ್ಲಿ ಭಾಗವಹಿಸಿ ಗುರು ಸೇವೆ ಸಲ್ಲಿಸಿದ ಕವಿ, ಕಲಾವಿದರಿಗೆ ಅಭಿನಂದನಾ ಪತ್ರ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು. ಕವಿಗಳು, ಪುಟ್ಟರಾಜ ಗುರುವರ್ಯರ ಕುರಿತು ರಚಿಸಿದ ಎರಡು ಕವನ, ಪರಿಚಯಪತ್ರ ಮತ್ತು ಒಂದು ಭಾವ ಚಿತ್ರ ಸಹಿತ ಗದಗ ತಾಲೂಕಾ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಸಂಚಾಲಕರಾದ, ‘ಯುವ ಸಾಹಿತಿ’ ಶಿವಾನಂದ ಭಜಂತ್ರಿ ಇವರ ೮೬೧೮೫ ೯೩೨೪೭ ವ್ಯಾಟ್ಸಪ್ ನಂಬರಿಗೆ ಕಳಿಸಿಕೊಡ ಬೇಕು. ಕಲಾವಿದರು ತಮ್ಮ ಇತ್ತೀಚಿನ ಒಂದು ಭಾವಚಿತ್ರ, ಪರಿಚಯಪತ್ರ ದೊಂದಿಗೆ, ಸೇವಾ ಸಮಿತಿಯ ಜಿಲ್ಲಾ ಸಂಚಾಲಕ, ರಂಗಭೂಮಿ ಕಲಾವಿದ ಶಿವು ವಾಲಿಕಾರ ಮಕ್ತುಂಪುರ ಮುಂಡರಗಿ ಇವರ ೯೯೦೨೫ ೩೪೧೧೬ ವ್ಯಾಟ್ಸಪ್ ನಂಬರಿಗೆ ಕಳಿಸಿಕೊಡ ಬೇಕು. ಕಲಾವಿದರು ತಮ್ಮ ಗಾಯನ ಮತ್ತು ನೃತ್ಯದಲ್ಲಿ ಗುರು ಪುಟ್ಟರಾಜರ ಕುರಿತಾದ ಗೀತೆ ಅಥವಾ ಪೂಜ್ಯರು ಬರೆದ ವಚನಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಿದೆ. ಹೆಸರುಗಳನ್ನು puttarajsvasmiti@gmail.com ಇಮೇಲ್ ಮೂಲಕವೂ ಕಳಿಸಿಕೊಡಬಹುದಾಗಿದೆ. ಹೆಸರು ನೋಂದಾಯಿಸಿಕೊಳ್ಳುವ ಕೊನೆಯ ದಿನಾಂಕ ೧೫ ಅಗಸ್ಟ ೨೦೨೩ ರ ಸಂಜೆ ೫ ಗಂಟೆ. ಹೆಚ್ಚಿನ ಮಾಹಿತಿಗಾಗಿ ಸಂಚಾರಿ ದೂರವಾಣಿ ೯೪೮೩೨೨೪೬೬೦ ಗೆ ಸಂಪರ್ಕಿಸ ಬಹುದಾಗಿದೆ ಎಂದು, ಡಾ. ಪಂ. ಪುಟ್ಟರಾಜ ಸೇವಾ ಸಮಿತಿ (ರಿ) ಗದಗ, ಜಿಲ್ಲಾ ಅಧ್ಯಕ್ಷರಾದ ಮಂಜುನಾಥ ಹಳ್ಳೂರಮಠ ಬೆಳಧಡಿ ಇವರು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿಕೊಂಡಿದ್ದಾರೆ.

- Advertisement -
- Advertisement -

Latest News

10 ನೆಯ ತರಗತಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಧೈರ್ಯ ನೀಡಿದ ತಾಲೂಕಾಧಿಕಾರಿಗಳು

ಮೂಡಲಗಿ:- ಮಾರ್ಚ್ ನಲ್ಲಿ ನಡೆಯುವ 10 ನೆಯ ತರಗತಿ ವಿದ್ಯಾರ್ಥಿಗಳ ಪರೀಕ್ಷೆ, ಅದರ ಪೂರ್ವ ತಯಾರಿ ನಡೆಸುತ್ತಿರುವ ತಾಲೂಕಾ ಅಧಿಕಾರಿಗಳು ಪೂರ್ವಭಾವಿಯಾಗಿ ವಿದ್ಯಾರ್ಥಿಗಳ ಮನೆಗೆ ಭೇಟಿ...
- Advertisement -

More Articles Like This

- Advertisement -
close
error: Content is protected !!
Join WhatsApp Group