ದೇಶಾಭಿಮಾನ ಬೆಳೆಸಿಕೊಳ್ಳುವಂತೆ ಯುವಕರಿಗೆ ರವಿ ಕೊಟಬಾಗಿ ಕರೆ

Must Read

ಬೆಳಗಾವಿ: ಇವತ್ತಿನ ದಿನಗಳಲ್ಲಿ ಯುವ ಜನಾಂಗ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದು ನಮ್ಮ ದೇಶದ ಸಂಸ್ಕೃತಿ ಅಭಿಮಾನ ಮರೆಯುತ್ತಿರುವುದು ಕಳವಳಕಾರಿಯಾಗಿದೆ. ದೇಶದ ಭದ್ರ ಬುನಾದಿಯಾಗಿರುವ ಯುವ ಜನಾಂಗ ನಮ್ಮ ದೇಶ-ನಮ್ಮ ಹೆಮ್ಮೆ ಎಂಬುದನ್ನು ಅರಿತು ದೇಶಾಭಿಮಾನ ಬೆಳೆಸಿಕೊಂಡಾಗ ಮಾತ್ರ ದೇಶದ ಸರ್ವೊತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಗ್ರಾಮ ಪಂಚಾಯತ್ ಸದಸ್ಯ ರವಿ ಕೊಟಬಾಗಿ ಅಭಿಪ್ರಾಯಪಟ್ಟರು.

ಮುತಗಾ ಗ್ರಾಮದ ಬಡಾವಣೆಯಾದ ಶ್ರೀರಾಮನಗರ ಕಾಲೋನಿಯಲ್ಲಿ ಶ್ರೀರಾಮ ನಗರ ರಹವಾಸಿಗಳ ಸಂಘದಿಂದ ಆಯೋಜಿಸಲ್ಪಟ್ಟಿದ್ದ 77 ನೇ ಸ್ವಾತಂತ್ರೋತ್ಸವ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು. 

ಹಿರಿಯ ನಾಗರಿಕ ಅಶೋಕ ಉಪಾಧ್ಯೆ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು.     

ಈ ಸಂಧರ್ಭದಲ್ಲಿ ಮಾತನಾಡಿದ ಹಿರಿಯ ಗಣ್ಯ ಸೂರ್ಯನಾರಾಯಣ ಭಟ್ ರವರು ದೇಶದ ಸ್ವಾತ್ರಂತ್ರ್ಯ ಪಡೆಯಲು ಅನೇಕರ ಬಲಿದಾನವಾಗಿದ್ದು ದೇಶದ ನಾಯಕರು ಕಂಡ ಕನಸು ನನಸಾಗಲು ಸ್ವಚ್ಛ ಭಾರತ ಅಭಿಯಾನದ ಕನಸು ಈಡೇರಿಸುವಲ್ಲಿ ಸರ್ವರೂ ಪ್ರಾಮಾಣಿಕತೆಯಿಂದ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಿಟ್ಟುಕೊಂಡಾಗ ಮಾತ್ರ ಸಾಧ್ಯವೆಂದು ಅಭಿಪ್ರಾಯಪಟ್ಟರು. 

ಮಹಿಳಾ ಮಂಡಳದ ಸದಸ್ಯೆಯರು ಪೂಜೆ ಕಾರ್ಯಕ್ರಮವನ್ನು ನೇರವೆರಿಸಿದರು. ಕಾರ್ಯಕ್ರಮದಲ್ಲಿ ವಿ. ಬಿ. ಕೋಟಬಾಗಿ, ನಾಗರಾಜ ಪೋತದಾರ, ಶೀತಲ ಪಾಟೀಲ, ಎಂ.ಬಿ.ಪಾಟೀಲ, ಶಂಕರ ದಂಡೀನ, ಆಕಾಶ್ ಶೆಟ್ಟಿ, ಶಿವು ಪಾಟೀಲ, ಶ್ರೀನಾಥ ಪೂಜೇರಿ ಒಳಗೊಂಡಂತೆ ಅನೇಕರು ಉಪಸ್ಥಿತರಿದ್ದರು.


ಮಾಹಿತಿ:ವರದಿ: 

ಆಕಾಶ್ ಅರವಿಂದ ಥಬಾಜ 

“ಸತ್ಯ-ಜಿನೇಂದ್ರ” 

ಪ್ಲಾಟ ನಂ: 9/264/1/2ಬಿ, 

14 ನೇ ಕ್ರಾಸ್ ಶ್ರೀರಾಮ ನಗರ ಕಾಲೋನಿ

ಮುತಗಾ-ಬೆಳಗಾವಿ 

9448634208

9035419700

Latest News

ಕವನ : ನೆಲದ ನಾಲಿಗೆ ಮೇಲೆ

ನೆಲದ ನಾಲಿಗೆ ಮೇಲೆ​ಆ ಗುಡಿಸಲೊಳಗೆ ಬರೀ ಬಿಕ್ಕಳಿಕೆಗಳೆ ಸುಕ್ಕುಗಟ್ಟಿವೆ, ನೆತ್ತರು ಮೆತ್ತಿದ ಪ್ರಶ್ನೆಗಳು- ಇನ್ನೂ ಉಸಿರಿಡಿದಿವೆ. ​ಈ ಅರಮನೆಯೊಳಗೆ ಬರೀ ಸೊಕ್ಕುಗಳೆ ತೊಟ್ಟಿಕ್ಕುತ್ತಿವೆ; ಹಾಲಾಹಲದ ನಂಜುಂಡು, ಬಡಿವಾರದಲಿ ಗರ ಬಡಿದಂತೆ ಹಾಸಿದೆ ಬೆಳಕು. ​ಆ ಗುಡಿಸಲೊಳಗೆ ಸುಖದ ಹಾದಿ ರಜೆ ಪಡೆದು, ಬಾಳು...

More Articles Like This

error: Content is protected !!
Join WhatsApp Group