ಪೂಜ್ಯ ಗುರುವರ್ಯ, ಪಂ. ಪುಟ್ಟರಾಜರ ಸ್ಮರಣೆಯಲ್ಲಿ, ಬೆಳಗಾವಿ ನಗರದ ಸರಸ್ವತಿ ವಾಚನಾಲಯದಲ್ಲಿ ದಿ. 01 ಆಕ್ಟೊಬರ್ 2023 ರಂದು ಹಮ್ಮಿಕೊಂಡಿರುವ ಭಕ್ತಿ ಸಾಹಿತ್ಯ ಸಮ್ಮೇಳನ ಕುರಿತು ಪೂರ್ವ ಭಾವಿ ಸಭೆಯನ್ನು ಇದೇ 27 ರಂದು ರವಿವಾರ , ಬೆಳಿಗ್ಗೆ 11 ಗಂಟೆಗೆ , ಶ್ರೀ ಸಿದ್ಧೇಶ್ವರ ಯೋಗ ಸೆಂಟರ್ ಶಿವಬಸವ ನಗರ (ವೀರಶೈವ ಲಿಂಗಾಯತ ಭವನದ ಪಕ್ಕದಲ್ಲಿ) ಬೆಳಗಾವಿ ಇಲ್ಲಿ ಕರೆಯಲಾಗಿದೆ.
ಈ ಸಭೆಯ ದಿವ್ಯ ಸನ್ನಿಧಾನವನ್ನು ಪೂಜ್ಯಶ್ರೀ ಶಿವ ಪಂಚಾಕ್ಷರಿ ಸ್ವಾಮಿಗಳು ನೀಡಶೋಷಿ ಶಾಖಾಮಠ ಅಡಲಹಟ್ಟಿ ತಾಲೂಕಾ ಅಥಣಿ ಇವರು ವಹಿಸಿಕೊಳ್ಳುವರು. ಯೋಗ ಗುರು, ಶ್ರೀ ಸಿದ್ಧೇಶ್ವರ ಸ್ವಾಮಿಗಳು ಶ್ರೀ ಸಿದ್ಧೇಶ್ವರ ಯೋಗ ಕೇಂದ್ರ ಬೆಳಗಾವಿ ಇವರು ಅಧ್ಯಕ್ಷತೆ ವಹಿಸಿಕೊಳ್ಳುವರು.
ಡಾ. ಪಂಡಿತ ಪುಟ್ಟರಾಜ ಸೇವಾ ಸಮಿತಿಯ ರಾಜ್ಯ ಅಧ್ಯಕ್ಷರಾದವೇ. ಚನ್ನವೀರ ಸ್ವಾಮಿಗಳು ಹಿರೇಮಠ (ಕಡಣಿ) ಗದಗ ಇವರು ಸಮ್ಮೇಳನ ಕುರಿತು ವಿವರ ನೀಡುವರು.
ಮುಖ್ಯ ಅತಿಥಿಗಳಾಗಿ ನಗರದ ಖ್ಯಾತ ಸಂಗೀತ ಕಲಾವಿದರಾದ ರಾಜ ಪ್ರಭು ಧೋತ್ರೆಯವರು ಆಗಮಿಸುವರು.
ಗುರು ಸೇವೆಯಲ್ಲಿ ಭಾಗಿಯಾಗಿ ತನು ಮನ ಧನದ ಸೇವೆ ಸಲ್ಲಿಸಲು ಆಸಕ್ತ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಸೇವಾ ಸಂಘದ ಮುಖ್ಯಸ್ಥರು ಮತ್ತು ಜಿಲ್ಲೆಯ ಪೂಜ್ಯರ ಅಭಿಮಾನಿ ಭಕ್ತರು ಈ ಸಭೆಗೆ ಬಂದು ಸಲಹೆ ಸೂಚನೆ ಮಾರ್ಗದರ್ಶನ ನೀಡಬೇಕೆಂದು ಕೋರುತಿದ್ದೇವೆ ಎಂದು ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀಮತಿ ವಿದ್ಯಾ ಮಗದುಮ್ ಗೋಕಾಕ ಹಾಗೂ ಪ್ರೊ. ಮಂಜುಶ್ರೀ ಹಾವಣ್ಣವರ ಬೆಳಗಾವಿ ಇವರು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿಕೊಂಡಿದ್ದಾರೆ.
ಮಾಹಿತಿಗಾಗಿ ಸಂಪರ್ಕಿಸಿ ವ್ಯಾಟ್ಸಪ್ ಸಂಖ್ಯೆ 98867 17732