spot_img
spot_img

ಹೆಲ್ಮೆಟ್ ಅಭಿಯಾನ ಸಲುವಾಗಿ ಮ್ಯಾರಥಾನ್ Run for road safety

Must Read

- Advertisement -

ಬೀದರ: ಗಡಿ ಜಿಲ್ಲೆಯಾದ್ಯಂತ ಹೆಲ್ಮೆಟ್ ಹಾಕದೆ ೩೫೦ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ ಎಂಬ ಮಾಹಿತಿಗಳ ಹಿನ್ನೆಲೆಯಲ್ಲಿ ಬೀದರ್ ಜಿಲ್ಲಾ ಪೊಲೀಸ್ ಇಲಾಖೆ ಬೀದರ್ ಜನರಿಗೆ ಅರಿವು ಮೂಡಿಸುವ ಸಲುವಾಗಿ ರಸ್ತೆ ಸುರಕ್ಷತಾ ಅಭಿಯಾನ ೨೦೨೩ ರ ಅಂಗವಾಗಿ ಬೀದರ ಜಿಲ್ಲಾ ಪೊಲೀಸ್ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಆ.೨೭ ರಂದು ರವಿವಾರ ಬೆಳಿಗ್ಗೆ ೫ ಗಂಟೆಯಿಂದ ೯ ಗಂಟೆಯವರೆಗೆ ಮ್ಯಾರಥಾನ್ (Run for road safety) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಮ್ಯಾರಥಾನ್‍ದಲ್ಲಿ ಸುಮಾರು ೫ ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಮಾಹಿತಿ ನೀಡಿದರು.

ಮ್ಯಾರಥಾನ್ ತೆರಳುವ ಮಾರ್ಗಗಳ ವಿವರ:- ಬೀದರ ಕೋಟೆಯಿಂದ ಪ್ರಾರಂಭವಾಗಿ ಸಿದ್ದಾರ್ಥ ಕಾಲೇಜ್, ಮಡಿವಾಳ ವೃತ್ತ, ಹೊಸ ಬಸ್ ನಿಲ್ದಾಣ, ಕ್ಲಾಸಿಕ ದಾಬಾ, ಹೆಣ್ಣು ಮಗು ವೃತ್ತ, ಕೆ.ಇ.ಬಿ.ಕಚೇರಿ, ಗುದುಗೆ ಆಸ್ಪತ್ರೆ ಕ್ರಾಸ್,  ವೃತ್ತ, ಶಿವಾಜಿ ವೃತ್ತ, ಅಂಬೇಡ್ಕರ್ ವೃತ್ತ, ಮಹಾವೀರ ವೃತ್ತ, ಬಸವೇಶ್ವರ ವೃತ್ತ, ಚೌಬಾರ, ಗವಾನ ಚೌಕ್ ಮೂಲಕವಾಗಿ ಬೀದರ ಕೋಟೆಯಲ್ಲಿ ಈ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ.

- Advertisement -

ಮ್ಯಾರಥಾನ್ ನಲ್ಲಿ ಭಾಗವಹಿಸುವವರು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಹೆಸರು ನೊಂದಾಯಿಸಬೇಕು ಓಟ ಆರಂಭಿಸುವವರು ತಾವು ಆರೋಗ್ಯವಾಗಿರುವ ಬಗ್ಗೆ ಪ್ರಮಾಣಪತ್ರ ನೀಡಬೇಕಾಗುತ್ತದೆ ಎಂದು ಎಸ್ ಪಿ ಚನ್ನಬಸವಣ್ಣ ತಿಳಿಸಿದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group