spot_img
spot_img

ಶಿವ ಶರಣ ನೂಲಿ ಚಂದಯ್ಯ ಜಯಂತಿ ; ಪೂವ೯ಭಾವಿ ಸಭೆ

Must Read

spot_img
- Advertisement -

ಮೂಡಲಗಿ: ವೈಚಾರಿಕ ಕ್ರಾಂತಿಯ ಹರಿಕಾರರು, ಶಿವ  ಶರಣರಾದ ನೂಲಿ ಚಂದಯ್ಯರವರ ಜಯಂತಿಯನ್ನು  ಸರಳ ರೀತಿಯಲ್ಲಿ ಹಾಗೂ ಅಥ೯ಪೂಣ೯ವಾಗಿ ಅಗಸ್ಟ್ 31 ರಂದು ಆಚರಿಸಲು ಮೂಡಲಗಿ ತಹಶೀಲ್ದಾರರವರ ಕಚೇರಿಯಲ್ಲಿ ಜರುಗಿದ ಸಭೆಯಲ್ಲಿ ತೀಮಾ೯ನಿಸಲಾಯಿತು.

ತಹಶೀಲ್ದಾರರ ಶಿವಾನಂದ ಎ ಬಬಲಿ ಇವರ ಅಧ್ಯಕ್ಷತೆಯಲ್ಲಿ ನಡೆದ ಪೂವ೯ಭಾವಿ ಸಭೆಯಲ್ಲಿ ಸಮಾಜದ ಮುಖಂಡರು ಹಿರಿಯ ಪದಾಧಿಕಾರಿಗಳು ಉಪಸ್ಥಿತರಿದ್ದು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ಅಶೋಕ ಭಜಂತ್ರಿ ನಾಗನೂರ ಅಧ್ಯಕ್ಷರು ರಾಜ್ಯ ಪತ್ರಕರ್ತರ ಸಂಘ ರಿ.ಬೆಂಗಳೂರು ಇವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಸಪ್ಟೆಂಬರ್ ತಿಂಗಳಲ್ಲಿ ಸಮಾಜದ ಜಾಗೃತಿ ಸಮಾವೇಶ ಮಾಡಲಾಗುವುದು ಆ ಸಂದರ್ಭದಲ್ಲಿ  ಕುಲ ಗುರು ಆರಾಧ್ಯ ದೈವ ಶರಣ ನೂಲಿ ಚಂದಯ್ಯರವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ತಿಳಿಸಿದರು ಹಾಗೂ ಸರಕಾರದ ದಿನಾಂಕ 31 ರ ಕಾಯ೯ಕ್ರಮಕ್ಕೆ ಸಮುದಾಯದ ಬಂಧುಗಳೊಂದಿಗೆ ಅಗಮಿಸುವುದಾಗಿ ತಿಳಿಸಿದರು. 

- Advertisement -

ಸಭೆಯಲ್ಲಿ  ಹಾಜರಿದ್ದ ಹಣಮಂತ ಭಜಂತ್ರಿ ಅವರು ಮಾತನಾಡಿ, ಶರಣರ ಜಯಂತಿಯನ್ನು ತಾಲೂಕಿನ ಎಲ್ಲಾ ಕಚೇರಿಗಳಲ್ಲಿ ಕಡ್ಡಾಯವಾಗಿ ಅಚರಿಸುವಂತೆ ವಿನಂತಿಸಿದರು. 

ಇದಕ್ಕೆ ಸಮುದಾಯದ ಮುಖಂಡರ ಸಲಹೆ ಸೂಚನೆಯಂತೆ ತಹಶೀಲ್ದಾರರವರು ಒಪ್ಪಿಗೆ ಸೂಚಿಸಿ  ಸರಳ ರೀತಿಯಲ್ಲಿ ಜಯಂತಿಯನ್ನು ಅಚರಿಸಲು ಹಾಗೂ  ತಾಲೂಕಿನ ಎಲ್ಲಾ ಕಚೇರಿಗಳಲ್ಲಿ ಆಚರಿಸುವಂತೆ    ಆದೇಶಿಸುವುದಾಗಿ ತಿಳಿಸಿದರು.

ಈ ಸಭೆಯಲ್ಲಿ ರಾಜು ವಿ. ಭಜಂತ್ರಿ ಕೊರಮ (ಭಜಂತ್ರಿ) ಸಮಾಜದ ತಾಲುಕಾಧ್ಯಕ್ಷರು ಮೂಡಲಗಿ, ಮುಖಂಡರಾದ ಬಸವರಾಜ ಭಜಂತ್ರಿ, ಕಲ್ಲೋಳಿ , ಹಣಮಂತ ಭಜಂತ್ರಿ ಮೂಡಲಗಿ, ಶ್ರೀಕಾಂತ ಭಜಂತ್ರಿ ಹುಣಶ್ಯಾಳ ಪಿ ವಾಯ್, ಚಂದ್ರಕಾಂತ ಭಜಂತ್ರಿ ಧರ್ಮಟ್ಟಿ,ಸಂಜಯ ಭಜಂತ್ರಿ ಮೂಡಲಗಿ, ಕಲ್ಲಪ್ಪ ಭಜಂತ್ರಿ ಮೂಡಲಗಿ, ಬಾಬು ಭಜಂತ್ರಿ ಗುರ್ಲಾಪುರ, ಶಿವಾನಂದ ಭಜಂತ್ರಿ ಗುರ್ಲಾಪುರ, ಭೀಮಶಿ ಭಜಂತ್ರಿ ಧರ್ಮಟ್ಟಿ, ಬಹದ್ದೂರ ಭಜಂತ್ರಿ ಮೂಡಲಗಿ, ಬಾಬು ಭಜಂತ್ರಿ ಮೂಡಲಗಿ, ಶ್ರೀಕಾಂತ ಭಜಂತ್ರಿ ಮೂಡಲಗಿ’ ರೋಹಿತ ಭಜಂತ್ರಿ ಮೂಡಲಗಿ, ಪ್ರದೀಪ ಭಜಂತ್ರಿ ಮೂಡಲಗಿ,ಸಚ್ಚಿನ ಭಜಂತ್ರಿ ಮೂಡಲಗಿ,ಕಿರಣ ಭಜಂತ್ರಿ ಮೂಡಲಗಿ ಹಾಗೂ ಬಸು ಭಜಂತ್ರಿ ಗುರ್ಲಾಪುರ ಮೊದಲಾದವರು ಉಪಸ್ಥಿತರಿದ್ದರು.

- Advertisement -

ಸಭೆಯ ಪ್ರಾರಂಭದಲ್ಲಿ ತಾಲೂಕಾ ಶಿರಸ್ತೇದಾರ ಪರಶುರಾಮ ನಾಯಿಕ ಅವರು ಪೂವ೯ ಭಾವಿ ಸಭೆಗೆ ಆಗಮಿಸಿದ ಎಲ್ಲರನ್ನೂ  ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

- Advertisement -
- Advertisement -

Latest News

ಹನಿಗವನಗಳು

ಹನಿಗವನಗಳು 1) ಸುಳ್ಳುಗಾರರು ಹತ್ತು ನಾಲಿಗೆಯ ರಾವಣ ಹೇಳಲಿಲ್ಲ ಒಂದು ಸುಳ್ಳು ಒಂದೇ ನಾಲಿಗೆಯ ರಾಜಕಾರಣಿ ಹೇಳುತ್ತಾನೆ ದಿನಕ್ಕತ್ತು ಸುಳ್ಳು! 2) ಶೀಲಾ ನೆರೆಮನೆ ಶೀಲಾ ಪರ ಪುರುಷರೊಡನೆ ಸೇರಿ ಹೆಸರು ಕೆಡಿಸಿಕೊಂಡಳು 3) ಟಿವಿ ಹಾವಳಿ ಮನೆಯಲ್ಲಿ ಟಿವಿ ಮುಂದೆ ಸದಾ ಇರುವ ವಿದ್ಯಾ ರ್ಥಿಗಳು ಶಾಲೆಯಲ್ಲಿ ಹಿಂದೆ ಬೀಳುವರು. 4) ವಾಸ್ತವ ಕಟ್ಟುವವು...
- Advertisement -

More Articles Like This

- Advertisement -
close
error: Content is protected !!
Join WhatsApp Group