spot_img
spot_img

ಜನಪದ ಸಾಹಿತ್ಯ ಬದುಕಿಗೆ ದಾರಿದೀಪ: ಡಾ. ಆನಂದಕುಮಾರ ಜಕ್ಕಣ್ಣವರ

Must Read

spot_img
- Advertisement -

ತುಕ್ಕಾನಟ್ಟಿ (ತಾ. ಮೂಡಲಗಿ): ಜನರಿಂದ ಜನರಿಗೆ, ನಾಲಿಗೆಯಿಂದ ನಾಲಿಗೆಗೆ ಹೃದಯದಿಂದ ಹೃದಯಕ್ಕೆ ಜನಪದ ರಸವಾಕ್ಯಗಳು ತಟ್ಟಿ ಹೊಸ ಸಾರ್ಥಕ ಬದುಕಿಗೆ ನಿದರ್ಶನವಾಗಿ ಜಾನಪದ ಗೀತೆಗಳು ಬಾಳಿವೆ ಎಂದು ಕಾಗವಾಡದ ಶಿವಾನಂದ ಮಹಾವಿದ್ಯಾಲಯದ  ಅಧ್ಯಾಪಕ ಡಾ. ಆನಂದಕುಮಾರ ಜಕ್ಕಣ್ಣವರ ಹೇಳಿದರು.

ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರದ ಎರಡನೇ ದಿನದ ಜನಪದ ಸಾಹಿತ್ಯದಲ್ಲಿ ಮೌಲ್ಯಗಳು ಮತ್ತು ಗೀತಗಾಯನ ಎಂಬ ವಿಷಯದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ನಮ್ಮ ಪೂರ್ವಜರಿಗೆ ಬದುಕಿನ ಬಗ್ಗೆ ಎಷ್ಟೊಂದು ಆಸ್ಥೆ ಇತ್ತೋ ಅಷ್ಟೇ ಮಾನವೀಯ ಮೌಲ್ಯಗಳ ಬಗ್ಗೆ ಕಾಳಜಿ ಇತ್ತು. ಬದುಕು ಕೇವಲ ನಿಂತ ನೀರಲ್ಲ. ಪ್ರತಿನಿತ್ಯ ಬಾಳನ್ನು ಸಂಸ್ಕರಿಸಬೇಕು. ದುಃಖ ಸುಖಗಳಲ್ಲೂ ತಟಸ್ಥ ಭಾವ ಇರಬೇಕು. ಬರುವ ಕಷ್ಟಗಳಿಗೆ ಎದುರಿಸುವ ಧೈರ್ಯವಿರಬೇಕು.

- Advertisement -

ಬಾಳು ಗಂಭೀರವಾಗಿ ಕಂಡರೂ ಸರ್ವಕಾಲಕ್ಕೂ ಖುಷಿಯಿಂದ ಜೀವಿಸಬೇಕು ಎಂಬುವ ಅನೇಕ ಉದಾತ ವಿಚಾರಗಳು ನಮ್ಮ ಜನರದು. ಅಂತಲೆ ನಮ್ಮ ನಡುವೆ ಗಾದೆಗಳು, ಒಗಟುಗಳು, ಕುಟ್ಟುವ, ಬೀಸುವ, ನೀತಿಯ, ಸೋಬಾನ, ಕಥೆಗಳು ಬಿತ್ತರಿಸುವ ಪದಗಳು ಹುಟ್ಟಿಕೊಂಡಿವೆ ಎಂದರು.

ಇನ್ನೋರ್ವ ಅತಿಥಿ ಡಾ. ಅಶೋಕ ಕಾಂಬಳೆ ಮಾತನಾಡುತ್ತಾ,  ಜನಪದ ಕವಿಯ ಹಾಡಿನಲ್ಲಿ ಎಂದೂ ಭಾರವಾದ ಶಬ್ದಗಳಿಲ್ಲ. ಮನಸ್ಸಿಗೆ ನೋವಾಗುವ ಅರ್ಥಗಳಿಲ್ಲ. ಶುಷ್ಕವಾದ ವಾಕ್ಯಗಳಿಲ್ಲ. ಪ್ರತಿಯೊಂದು ಪದಗಳಲ್ಲೂ ಒಂದು ಸಂದೇಶವಿದೆ, ಕಾಳಜಿಯಿದೆ, ಅನುಕಂಪವಿದೆ. ಜೀವನ ನೋಡುವ ರೀತಿ ವಿಹಂಗಮವಾಗಿದೆ. ಗ್ರಾಮೀಣರ ಬದುಕಿನ ಸಂಸ್ಕೃತಿಯನ್ನು ಹಿಡಿದಿಡುವ ಕಾರ್ಯ ಜಾನಪದ ಮಾಡಿದೆ ಎಂದು ಹೇಳುವುದರ ಜೊತೆಗೆ ಜನಪದ ಗೀತೆಗಳನ್ನು ಪ್ರಸ್ತುತ ಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಸುರೇಶ ಹನಗಂಡಿ ಮಾತನಾಡಿ, ಜಾನಪದ ಇಂದು ಮತ್ತೊಮ್ಮೆ ಜೀವಂತವಾಗಿ ಸಮಾಜದಲ್ಲಿ ಬೆಳಗುತ್ತಿದೆ. ಜಾನಪದವು ಜನರ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ. ಜನಪದರು ಜನಾಂಗದ ಜೀವನಾಡಿಯಾಗಿ ನೀತಿಯ ಸೂತ್ರವಾಗಿ, ಬಾಳಿನ ದೀಪವಾಗಿ ಬದುಕಿನ ವಿವಿಧ ಸಂಸ್ಕೃತಿಗಳನ್ನು ಬಿತ್ತರಿಸುವ ಹೃದಯಗಳ ಮಾಧ್ಯಮವಾಗಿ ಬಾಳಿದೆ. ಇಂದು ಬದುಕಿನಲ್ಲಿ ಜಾನಪದವಿಲ್ಲದಿದ್ದರೆ ಜೀವನಕ್ಕೆ ಯಾವ ಅರ್ಥ ಇರುತಿರಲಿಲ್ಲ. ನಮ್ಮ ಪೂರ್ವಜರ ನಡೆ, ನುಡಿ, ಅಂತಃಕರಣ ತತ್ವ ನಿಷ್ಠೆ, ಶೃದ್ಧೆ, ಜೀವನ ಸಾರ್ಥಕತೆ, ಮಾನವೀಯ ಮೌಲ್ಯಗಳಂಥ ಯಾವುವು ನಮಗೆ ಇಂದು ಕಾಣುತಿರಲಿಲ್ಲ ಎಂದರು.

- Advertisement -

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಸದಸ್ಯ ಗಂಗಾರಾಮ ಹಮ್ಮನ್ನವರ, ಡಾ. ಕೆ.ಎಸ್.ಪರವ್ವಗೋಳ, ಶಿಬಿರಾಧಿಕಾರಿಗಳಾದ ಶಂಕರ ನಿಂಗನೂರ,  ಎಂ. ಬಿ. ಕುಲಮೂರ, ಸಹಶಿಬಿರಾಧಿಕಾರಿ ಡಿ. ಎಸ್. ಹುಗ್ಗಿ, ವಿ. ವಾಯ್. ಕಾಳೆ, ವಿ. ಪಿ. ಕೆಳಗಡೆ ಇನ್ನಿತರರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group