spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ಸಕಲೇಶ ಮಾದರಸ

ಸಕಲೇಶ ಮಾದರಸರು ಬಸವಣ್ಣನವರ ಹಿರಿಯ ಸಮಕಾಲೀನರು. ಅವರ  ಕಾಲ ಕ್ರಿ.ಶ 1130.ಇವರು ಕರ್ನಾಟಕದ ಮಧ್ಯಭಾಗದಲ್ಲಿರುವ ಕಲ್ಲಗುರ್ಕಿಯ ರಾಜರಾದ ಮಲ್ಲಿಕಾರ್ಜುನ [ಮಲ್ಲರಸ]ರಪುತ್ರರು.  ಮಲ್ಲರಸರ ತರುವಾಯ ಬಂದ ಮಾಯಿದೇವ, ಕೆರೆಯ ಪದ್ಮರಸ, ಕುಮಾರ ಪದ್ಮರಸ, ಪದ್ಮಣಾಂಕುರ ಭಕ್ತ ಕವಿಗಳು ಇವರ ವಂಶದವರು.
ಹನ್ನೆರಡನೆಯ ಶತಮಾನದ ಕಾಲ ಅದು ಕರ್ನಾಟಕದ ಸಂಕ್ರಮಣದ   ಪರ್ವಕಾಲ, ವಿಶ್ವಕ್ಕೆ ಹೊಸ ಧರ್ಮವನ್ನು ಒದಗಿಸಿದ ಕಾಲ,ಶರಣರ ಮಾರಣಹೋಮದ ನಡುವೆಯೂ ಲಿಂಗಾಯತ ಧರ್ಮ ಉದಯಿಸಿದ ಕಾಲ, ಇಷ್ಟಲಿಂಗದ ಅನ್ವೇಷಣೆಯ ಕಾಲ ಮಾತ್ರವಲ್ಲ, ವಚನ ಸಾಹಿತ್ಯರಚನೆಯಾದ ಕಾಲವೂ ಅದು12ನೇಯ ಶತಮಾನ.

ವಚನಗಳು ಶರಣರ ಸ್ವಂತ ವೃತ್ತಿ ಗಳ ಮೂಲಕ ಅನುಭವಗಳಿಂದ, ಚಿಂತನೆಗಳಿಂದ ಕೂಡಿದ ಅನುಭಾವದ ಸತ್ಯದ ನುಡಿಗಳು, ಅವು ಜ್ಞಾನದ ದೀವಿಗೆ ಗಳಾಗಿ, ಕ್ರಾಂತಿಯ ವಿಚಾರದ ಸಾಹಿತ್ಯ ವಾಗಿ ಹೊರ ಹೊಮ್ಮಿದವು. ಸರ್ವರೂ ಸಮಾನರು, ವರ್ಗ ವರ್ಣ ಲಿಂಗಭೇದವಿಲ್ಲದಂತೆ ನಡೆದು ಕೊಳ್ಳುವುದು, ಅಂತರಂಗ ಬಹಿರಂಗ ಶುದ್ಧವಾಗಿರಿಸಿಕೊಂಡು ನುಡಿಯುವುದು, ನುಡಿದಂತೆ ನಡೆಯುವುದು. ಸತ್ಯ ಶುದ್ಧ ಕಾಯಕ, ಕಾಯಕದಿಂದ ದಾಸೋಹ  ಇವು ಶರಣರ ನಡೆಗಳಾಗಿದ್ದವು.

- Advertisement -

ಅಂತಹ ಶರಣರಲ್ಲಿ ಸಕಲೇಶ ಮಾದರಸ ರು ಕಲ್ಯಾಣ ನಾಡಿನ ಶ್ರೇಷ್ಠ  ಶರಣ ಸಂಕುಲದ ಒಬ್ಬ ವಚನಕಾರ ರಾಗಿದ್ದರು. ಅವರು ಒಟ್ಟು 134 ವಚನಗಳನ್ನು “ಸಕಳೇಶ ದೇವ “ಎಂಬ ಅಂಕಿತನಾಮದಿಂದ ರಚನೆ ಮಾಡಿರುವರು. ಮಾತ್ರವಲ್ಲದೇ ತತ್ವ ಪದಗಳನ್ನು ರಚನೆ ಮಾಡಿದವರಲ್ಲಿ ಮೊಟ್ಟ ಮೊದಲಿಗರು.

ಸಕಲೇಶ ಮಾದರಸರು ಒಬ್ಬ ಶ್ರೇಷ್ಠ  ಸಂಗೀತ ಗಾರರು, ಅವರು ವೀಣೆ ಆದಿಯಾಗಿ ಅನೇಕ ವಾದ್ಯ ಗಳನ್ನು ನುಡಿಸುವಲ್ಲಿ ಪಂಡಿತರಾಗಿದ್ದರು, ಅವರು ತಮ್ಮ ಹಾಗು ಶರಣರ ವಚನಗಳನ್ನು ಲಯ ತಾಳಕ್ಕೆ ತಕ್ಕಂತೆ ಸುಶ್ರಾವ್ಯ ವಾಗಿ ಹಾಡಿ ಜನರನ್ನು ಮಂತ್ರ ಮುಗ್ಧರಾಗಿಸುತ್ತಿದ್ದರು.

 ವಚನಗಳು
ಸಕಲೇಶ ಮಾದರಸರು ವಚನಗಳಲ್ಲಿ  ಆತ್ಮಶೋಧನೆ, ವಿಡಂಬನೆ,ಪ್ರಸಾದದ ಮಹತ್ವ ನೀತಿ ಬೋಧೆ ಆಚಾರ ಭಕ್ತಿಯ ತೀವ್ರತೆ, ಅಹಂಕಾರ ನಿರಸನಗಳಿಂದ ಕೂಡಿದ ವಚನಗಳನ್ನು ರಚಿಸಿರುವರು, ಗಾದೆಮಾತು ಉಪಮೆ ರೂಪಕ ದೃಷ್ಟಾಂತದ ಬಳಕೆಗಳು ಅವರ ವಚನಗಳಲ್ಲಿ ಆಗಿವೆ ಅದರಲ್ಲಿ

- Advertisement -

ಸಕಲ ಜೀವಕ್ಕೆಲ್ಲಕ್ಕೂ ಜೀವವೇ ಆಧಾರ, ಜೀವವ ತಪ್ಪಿಸಿ ಜೀವಿಸಲಿಕ್ಕಾರಿಗೆಯೂ ಬಾರದು ವಿಕೃತಿಯಿಂದ ನೋಡಿದಡಾರೂ ಸ್ವತಂತ್ರವಿಲ್ಲ, ಸಕಳೇಶ್ವರ ದೇವಂಗುಪಹಾರ ಕೊಡಲು ಅದು ಶುದ್ಧ ಭಕ್ತಿಪ್ರಸಾದ

ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ಶರಣರ ತತ್ವ ಸಿದ್ಧಾಂತ, ಏಕಕೋಶ ಜೀವಿಯಿಂದ ಹಿಡಿದು ಹಲವಾರು ಜೀವಕೋಶಗಳನ್ನು ಜೀವಿಗಳು  ಬದುಕಲು ಮತ್ತೊಂದು ಜೀವಿಯನ್ನು ತಿಂದು ಬದುಕುವುದು ಎಂಬ ನೈಸರ್ಗಿಕ ಸತ್ಯವನ್ನು ಸ್ಪಷ್ಟ ಪಡಿಸಿದ್ದಾರೆ. ಸಕಲ ಜೀವಕ್ಕೆಲ್ಲಕ್ಕೂ ಜೀವವೇ ಆಧಾರ ಎಂದು ತಿಳಿಸಿದ್ದಾರೆ.

ಆಚಾರವ ನುಡಿವೆ ಅನಾಚಾರವಾ ನಡೆವೆ ನಮಗೆ ನಿಮಗೆಪ್ರಸಾದ ಸ್ವಾಯತ ನೋಡಾ, ನಾನು ಭಕ್ತನೆಂಬ ನುಡಿಗೆ ಸಕಳೇಶ್ವರ ದೇವ ನಗುವ

ಆಚಾರದಿಂದ ನಡೆದು, ನುಡಿದು ಪ್ರಸಾದ ವನ್ನು ಸ್ವಾಯತ ಮಾಡಿದಾಗ ಭಕ್ತನೆಂಬ ಭಾವ,ಇಲ್ಲದಿದ್ದರೆ ಸಕಳೇಶ ದೇವ ನೋಡಿ ನಗುವ ಎಂದು ತಮ್ಮ ಅನಿಸಿಕೆಯನ್ನು ವಚನದಲ್ಲಿ ತಿಳಿಸಿದ್ದಾರೆ.

ಮಾಡುವ ಭಕ್ತಂಗೆಯೂ ದೇವಂಗೆಯೂ ಎಂದೆಂದಿಗೂ ಕೇಡಿಲ್ಲ, ಮಾಡಿ ಭೋ ಮಾಡಿ ಭೋ,ಎನಗೆ ಲೇಸಾಯಿತ್ತು ಹೋಯಿತ್ತೆಂಬ ಚಿಂತೆಬೇಡ ಇದಿತ್ತೆಂಬ ಸಂತೋಷಬೇಡ ಸಕಳೇಶದೇವನವರದು ಸಲಹುವನಾಗಿ

    ಈ ವಚನದಲ್ಲಿ ಸಕಲೇಶ ಮಾದರಸ ರು ಮಾಡುವ ಕಾಯಕ ಸತ್ಯ ಶುದ್ಧತೆಯಿಂದ ಕೂಡಿರಬೇಕು, ತನಗೆ ಲೇಸಾಯಿತು ತನಗೆ ಸಿಗಲಿಲ್ಲವೆಂಬ ಚಿಂತೆಬೇಡ,ಎಲ್ಲವೂ ಇದೆ ಎಂಬ ಸಂತೋಷಬೇಡ ಸಕಳೇಶ ದೇವ ನಮ್ಮನ್ನು ಸಲಹುವನು ಎನ್ನವುದು ಸಕಲೇಶ ಮಾದರಸರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ದೇಶ ದೇಶಾಂತರ ತಿರುಗಿ ತೋಳಲಿ, ಕೆಲರ ಹಳಿದು, ಕೆಲರ ಹೊಗಳಿ ವಧಾ ಹೊತ್ತೆನ್ನ ಸಂಸಾರ ಗಿರಿಯ ಶಿಖರದ ಮೇಲೆ ಲಿಂಗಧ್ಯಾನದಲ್ಲಿ ಮೌನಯಾಗಿರಿಸೆನ್ನ ಸಕಳೇಶ್ವರಯ್ಯಾ

ದೇಶ ದೇಶಗಳನ್ನು ತಿರುಗಿ, ಒಬ್ಬರನ್ನು ಹೊಗಳುವುದು ಒಬ್ಬರನ್ನು ತೆಗಳುವುದಕ್ಕಿಂತ ಗಿರಿಯ ಶಿಖರದ ಮೇಲೆ ನನ್ನನ್ನು ಲಿಂಗಧ್ಯಾನದಲ್ಲಿ ಮೌನವಾಗಿರಿಸು ಎಂದು ಸಕಳೇಶ್ವರ ದೇವರಲ್ಲಿ ಮೊರೆ ಹೋಗುವರು.

ಬಯಲಾದ ಶರಣ ಸಕಲೇಶ ಮಾದರಸ
ಕಲ್ಲಗುರ್ಕಿಯಲ್ಲಿ ಅರಸ ಮಲ್ಲರಸರು ರಾಜ್ಯ ವೈಭೋಗಗಳಿಂದ ವೈರಾಗ್ಯಗೊಂಡು ಪಟ್ಟಣವನ್ನು ತ್ಯಜಿಸಿ, ಅವರ ಮಗನಾದ ಮಾದರಸರಿಗೆ ಪಟ್ಟಕಟ್ಟಿ ಶ್ರೀಶೈಲದ ಕಡೆಗೆ ಹೋಗುವರು.ಮಹಾಜ್ಞಾನಿಯಾದ ಮಾದರಸರು ತಂದೆಯ ತರುವಾಯ ಕಲ್ಲಗುರ್ಕಿಯ ರಾಜ್ಯಭಾರ ಮಾಡುವರು.
ಮಾದರಸರ ವೃತ್ತಿ ಅರಸೊತ್ತಿಗೆಯಾದರೂ ಪ್ರವೃತ್ತಿ ಮಾತ್ರ ಅನುಭಾವದ ಕಡೆಗೆ ಇರುವುದು ಲೋಕ ಕಲ್ಯಾಣವೇ ಅವರದು ಗುರಿಯಾಗಿರುತ್ತದೆ ಅವರಿಗೂ ಸಹ ಶ್ರೀಶೈಲದ ಕಡೆಗೆ ಮನಸ್ಸಾಗುವುದು, ಅವರು ಕೆಲ ಕಾಲ ಮಾರ್ಗ ಮಧ್ಯದಲ್ಲಿ “ಅಂಬೆ “ಈಗಿನ ಮಹಾರಾಷ್ಟ್ರದ ಅಂಬೆಜೊಗೈ ನಲ್ಲಿ ಇದ್ದುಕೊಂಡು ಮುಂದೆ ವರ್ಣಸಂಕರದ ಹೆಸರಿನಲ್ಲಿ ಕಲ್ಯಾಣ ದ ಕ್ರಾಂತಿ ಸಂದರ್ಭದಲ್ಲಿ ಶರಣರ ಮೇಲೆ ದಾಳಿ ನಡೆದು ಹಲವಾರ ಶರಣರ ಕಗ್ಗೊಲೆ ಯಾಗುವುದು ಈ ಸಂದರ್ಭದಲ್ಲಿ ವಚನಗಳ ಕಟ್ಟುಗಳ ಸಂರಕ್ಷಣೆಯ ಜವಾಬ್ದಾರಿಯು ಉಳಿದ ಶರಣರಿಗೆ ಹೆಚ್ಚಾಗುವುದು, ಅವರು ವಚನ ಕಟ್ಟುಗಳನ್ನು ಹೊತ್ತುಕೊಂಡು ಉಳವಿ, ಸೊಲ್ಲಾಪುರ, ಲಾತುರ, ಬನವಾಸಿ ಕಡೆಗೆ ಹೋಗುವರು ಹಾಗೆ ಶ್ರಿಶೈಲದ ಕಡೆಗೂ ಹೋಗುವಲ್ಲಿ ಮಾದರಸರು ಶರಣರ ಜೊತೆಗೂಡಿ ವಚನ ಕಟ್ಟುಗಳನ್ನು ಸಂರಕ್ಷಣೆಯ ಕಾರ್ಯದಲ್ಲಿ ಪಾಲ್ಗೊಳ್ಳುವರು. ಅಲ್ಲಿಯೇ ಅಂದರೆ ಶ್ರೀಶೈಲದಲ್ಲಿ ಸಕಳೇಶ ವೆಂಬ ಮಹಾಬಯಲಿನೊಳಗೆ ಒಂದಾಗಿ ಬಯಲಾಗವರು.
.
ಡಾ.ಲತಾ ಹೆಸರೂರ                                              ವಚನ ಅಧ್ಯಯನ ವೇದಿಕೆ,                                  ಅರಿವು, ಬಸವಾದಿ ಶರಣರ ಚಿಂತನ ಕೂಟ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಎನ್.ಎಸ್.ಎಸ್. ಶಿಬಿರ ಸಹಕಾರಿ: ಡಾ. ಸಂಜೀವ ತಳವಾರ

ಮೂಡಲಗಿ: ವಿದ್ಯಾರ್ಥಿಗಳು ಸೇವಾ ಮನೋಭಾವ ರೂಢಿಸಿಕೊಳ್ಳಲು ಮತ್ತು ತಮ್ಮ ಬದುಕನ್ನು ಸಾರ್ಥಕ ಪಡಿಸಿಕೊಳ್ಳಲು ಎನ್‌.ಎಸ್‌.ಎಸ್‌ ವಾರ್ಷಿಕ ವಿಶೇಷ ಶಿಬಿರಗಳು ಉತ್ತಮ ಅವಕಾಶ ಒದಗಿಸಿಕೊಡುತ್ತವೆ ಎಂದು ರಾಣಿ...
- Advertisement -

More Articles Like This

- Advertisement -
close
error: Content is protected !!
Join WhatsApp Group