spot_img
spot_img

ಕವನ ; ಬದುಕು

Must Read

- Advertisement -

ಬದುಕು

ನಾವು ಬದುಕೋಣ
ಇತರರನ್ನು ಬದುಕಲು
ಬಿಡೋಣ!

ಈ ಪ್ರಪಂಚವು
ಬರೀ ಮಾನವನ
ಸ್ವತ್ತಲ್ಲ
ಎಲ್ಲ ಪ್ರಾಣಿ ಪಕ್ಷಿ
ಜಲಚರಗಳ
ಸ್ವತ್ತು

- Advertisement -

ಈ ಭೂಮಿ ಮೇಲಿನ
ಹಕ್ಕು
ಬರೀ ಮಾನವನದಲ್ಲ
ಈ ಭೂಮಿ ಮೇಲೆ
ವಾಸಿಸುತ್ತಿರುವ ಎಲ್ಲರಿಗೂ
ಇದೆ ಹಕ್ಕು

ಹುಟ್ಟಿದ ಮೇಲೆ
ಎಲ್ಲ ಜೀವಿಗಳು
ತಮ್ಮ ಸಂತತಿಯನು
ಬೆಳೆಸಿಕೊಂಡು ಹೋಗುವುದು
ಪ್ರಕೃತಿ ನಿಯಮ

ಆದರೆ ಪ್ರಕೃತಿಯನ್ನೇ
ಕಬಳಿಸಿ
ಪ್ರಕೃತಿಯ ನಿಯಮವನ್ನೇ
ಗಾಳಿಗೆ ತೂರಿ ಮನಬಂದಂತೆ
ಮನುಜ ತನ್ನ ಸ್ವಾರ್ಥಕ್ಕೆ
ಬಳಸಿಕೊಳ್ಳುತ್ತಿರುವುದು
ವಿಪರ್ಯಾಸವೇ ಸರಿ

- Advertisement -

ಈ ಭೂಮಿಯ ಮೇಲಿನ
ಸಂಪತ್ತಿಗೆ
ತಂದೊಡ್ಡುತ್ತಿರುವನು
ವಿಪತ್ತು
ಈ ಮನುಜ
ಕರಗುತ್ತಿದೆ ಕಣಜ
ಭೂಮಿ ವಿನಾಶದತ್ತ ಸಾಗುತ್ತಿರುವುದು
ಈ ಮನುಜನ ಕೃತ್ಯದಿಂದ
ಈ ಮನುಜನ ದೌರ್ಜನ್ಯದಿಂದ!

ಈ ಭೂ ಸಂಪತ್ತನ್ನು
ಎಲ್ಲ ಪಶು, ಪ್ರಾಣಿ,
ಪಕ್ಷಿ ಗಳೊಂದಿಗೆ ಹಂಚಿಕೊಂಡು
ಬದುಕಲು ಕಲಿಯಬೇಕು ಮನುಜ

ತನ್ನ ಸಂತತಿಯನು
ಹಿಡಿತದಲ್ಲಿಟ್ಟುಕೊಂಡು
ಜನಸಂಖ್ಯೆ ಸ್ಫೋಟವನು
ನಿಯಂತ್ರಿಸುತ್ತ ಬದುಕುವುದು
ಆಗಿದೆ ಅನಿವಾರ್ಯವಿಂದು!!

ರಕ್ಷಿಸಿಕೊಳ್ಳಿ ನಿಮ್ಮ
ಭವಿಷ್ಯವನು
ರಕ್ಷಿಸಿಕೊಳ್ಳಿ ಈ
ಭುವಿಯನು
ನಾಶಪಡಿಸದಿರಿ
ಈ ಭೂ ಸಂಪತ್ತನ್ನು
ಕಾಯ್ದುಕೊಳ್ಳಿರಿ ಈ
ಭುವಿಯನು ಏಕೆಂದರೆ
ಇರುವುದೊಂದೇ ಗ್ರಹದಲ್ಲಿ
ಈ ಜೀವವು
ಅದುವೇ ಭೂ ಗ್ರಹದಲ್ಲಿ
ನಿಯಂತ್ರಸಿ ಜನಸಂಖ್ಯೆ ಸ್ಫೋಟವನು
ನಿಮ್ಮದಾಗಿಸಿಕೊಳ್ಳಿ ಕುಟುಂಬ
ಕಲ್ಯಾಣ ಯೋಜನೆಗಳನು

ಡಾ.ಜಯಾನಂದ. ಧನವಂತ 

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ತಲೆಬಾಗು ಗುರುಗಳಿಗೆ ಗಣ್ಯರಿಗೆ ಮಾನ್ಯರಿಗೆ ಶಿರಬಾಗು ಹಿರಿಯರಿಗೆ ಹೆತ್ತವರಿಗೆ ಶರಣಾಗು ಸಂಪೂರ್ಣ ಮದವಳಿದು ದೈವಕ್ಕೆ ಬಾಗಿದವ ಬಾಳುವನು - ಎಮ್ಮೆತಮ್ಮ ಶಬ್ಧಾರ್ಥ ಗಣ್ಯರು = ಗಣನೀಯವಾದವರು ಮಾನ್ಯರು = ಮನ್ನಣೆಗೆ ಪಾತ್ರರಾದವರು ತಾತ್ಪರ್ಯ ಗುರುಗಳಲ್ಲಿ‌ ಗಣ್ಯರಲ್ಲಿ‌ ಮಾನ್ಯರಲ್ಲಿ‌‌...
- Advertisement -

More Articles Like This

- Advertisement -
close
error: Content is protected !!
Join WhatsApp Group