- Advertisement -
ಬೇವೂರ: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಮುಖ್ಯ ಎಂದು ಮೈಪಾಲ್ ಇಂಡಿಯಾ ಘರ್ ಐಎಎಸ್ ಸಂಸ್ಥೆಯ ಮಾರ್ಕೆಟಿಂಗ್ ಮುಖ್ಯಸ್ಥೆ ಪ್ರಮೋದ ಜಾದವ ಹೇಳಿದರು
ಬಾಗಲಕೋಟ ತಾಲೂಕಿನ ಬೇವೂರ ಪಿ ಎಸ್ ಎಸ್ ಕಾಲೇಜಿನ ಐ ಶು ಎ ಸಿ, ಘಟಕ ಹಾಗೂ ಬೆಂಗಳೂರಿನ ಮೈಪಾಲ್ ಇಂಡಿಯಾ ಘಾರ ಐಎಎಸ್ ಸಂಸ್ಥೆಯ ಸಹಯೋಗದಲ್ಲಿ ಜರುಗಿದ ಐಎಎಸ್ ಪರೀಕ್ಷೆ ಸ್ಪರ್ಧೆಯ ಶಿಕ್ಷಣ ವೇತನಕ್ಕಾಗಿ, ಪರೀಕ್ಷೆ ಸಮಾರಂಭವನ್ನು ಕುರಿತು ಅವರು ಮಾತನಾಡಿದರು.
ಎನ್ಎಸ್ಎಸ್ ಕಾರ್ಯಕ್ರಮದ ಅಧಿಕಾರಿ ಡಾ ಎಸ್ ಬಿ ಹಂಚಿನಾಳ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಪ್ರಯತ್ನದಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಬೇಕೆಂದು ಹೇಳಿದರು,
- Advertisement -
ಮಹಾವಿದ್ಯಾಲಯದ ಪ್ರಾಚಾರ್ಯ ಜಗದೀಶ ಬೈರಮಟ್ಟಿ ಹಿರಿಯ ಉಪನ್ಯಾಸಕರಾದ ಬಿ ಬಿ ಬೇವೂರ ಎಸ್ಎಸ್ ಆದಾಪುರ ಜಿ ಎಸ್ ಗೌಡರ್ ಡಿ ವೈ ಬುಡ್ಡಿಯವರ, ಉಪಸ್ಥಿತರಿದ್ದರು ಆದಪ್ಪ ಗೊರಚಕ್ನವರ ನಿರೂಪಿಸಿದರು, ನಾಗಲಿಂಗೇಶ ಬೆನ್ನೂರು ವಂದಿಸಿದರು