spot_img
spot_img

ಶ್ರೀ ಲಕ್ಷ್ಮೀದೇವಿ ಜಾತ್ರೆ ಸಂಪನ್ನ

Must Read

- Advertisement -

ಗುರ್ಲಾಪೂರ: ಗ್ರಾಮದ ಆರಾಧ್ಯ ದೇವತೆ ಶ್ರೀ ಲಕ್ಷ್ಮೀದೇವಿ ಜಾತ್ರೆಯು ಅದ್ಧೂರಿಯಾಗಿ ಮಂಗಲವಾಯಿತು.

ಜಾತ್ರೆಯ ಪ್ರಾರಂಭದಲ್ಲಿ ಗ್ರಾಮದಲ್ಲಿ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಹೀಗೆ ಐದು ವಾರಗಳವರೆಗೆ ಗ್ರಾಮದಲ್ಲಿ ಅಂಗಡಿ ಮುಗ್ಗಟ್ಟು ಯಾವುದೇ ಕೆಲಸ ಕಾರ್ಯಕ್ಕೆ ಹೋಗದೆ ಸ್ವ-ಪ್ರೇರಿತವಾಗಿ ಯಾವುದೇ ಕೆಲಸದಲ್ಲಿ ತೊಡಗದೆ ಬಂದ್ ಮಾಡಿರುತ್ತಾರೆ. 

ಕೊನೆಯ ಮಂಗಳವಾರ ಮುಂಜಾನೆ ಶ್ರೀ ಲಕ್ಷ್ಮೀದೇವಿಗೆ ಅಭಿಷೇಕ ಉಡಿ ತುಂಬುವ ಕಾರ್ಯಕ್ರಮ ನಡೆಯಿತು ಸಾಯಂಕಾಲ ಶ್ರೀ ಶಿವಲಿಂಗೇಶ್ವರ ಪಲ್ಲಕ್ಕಿ ಆಗಮನ ಸ್ಥಳೀಯ ಸರ್ವ ದೇವರ ಒಕ್ಕೋರ ಪಲ್ಲಕ್ಕಿ ಉತ್ಸವ ಜರುಗಿತು. ರಾತ್ರಿ ಸುಪ್ರಸಿದ್ಧ ಡೊಳ್ಳಿನ ಪದ ಜರುಗಿದವು. ಬುಧವಾರ ಮುಂಜಾನೆ ಲಕ್ಷ್ಮೀದೇವಿ ಹಾಗೂ ಸರ್ವ ದೇವಾದಿಗಳಿಗೆ ಅಭಿಷೇಕ ನೈವೇದ್ಯ ಜರುಗಿತು. ತದನಂತರ ಶ್ರೀ ಲಕ್ಷ್ಮೀದೇವಿ ದೇವಸ್ಥಾನದಿಂದ ಸರ್ವ ದೇವರ ಪಲ್ಲಕ್ಕಿಯು ಸುಮಂಗಲೆಯರ ಆರತಿ ಮೇಳ ಡೊಳ್ಳು ಕುಣಿತ,  ರೂಪಕ ಛತ್ರಿ, ಚಾಮರ ನಂದಿಕೋಲ, ಬಾಜಾ ಭಜಂತ್ರಿ, ಭಕ್ತರು ಕಾಯಿ, ಚುನಮುರಿ, ಖಾರಿಕ ಭಂಡಾರ ಹಾರಿಸುತ್ತಾ ಪಲ್ಲಕ್ಕಿ ಉತ್ಸವವು ಪ್ರಾರಂಭವಾಗಿ ಶ್ರೀ ಬಸವೇಶ್ವರ ದೇವಸ್ಥಾನ ತಲುಪಿ ಅಲ್ಲಿ ಮೈ ಮರೆಸುವ ದತ್ತಿ ಆಟ ನಡೆಯಿತು.

- Advertisement -

ಮತ್ತೆ ಪಲ್ಲಕ್ಕಿಯು ಲಕ್ಷ್ಮೀದೇವಿ ದೇವಸ್ಥಾನ ತಲುಪಿದ ನಂತರ ದೇವಸ್ಥಾನದ ಅರ್ಚಕರು ಸುಡುವ ಹುಗ್ಗಿಯಲ್ಲಿ ಕೈ ಅದ್ದಿ ದೇವರಿಗೆ ನೈವೇದ್ಯ ನೀಡುವುದು ವಿಸ್ಮಯದಂತಿತ್ತು. ನಂತರ ಮಹಾಪ್ರಸಾದ ಜರುಗಿತು. ನಂತರ ಸಂಜೆ 5 ಗಂಟೆಗೆ   ಖಾನಟ್ಟಿ ಶ್ರೀ ಶಿವಲಿಂಗೇಶ್ವರ ಪಲ್ಲಕ್ಕಿಯನ್ನು ಸಕಲ ವಾದ್ಯ ಮೇಳದೊಂದಿಗೆ ಬೀಳ್ಕೊಡುವರು.

- Advertisement -
- Advertisement -

Latest News

ಅಹಂಕಾರದಿಂದ ಸರ್ವನಾಶ: ಡಾ. ಶ್ರೇಯಾ ಮಹೀಂದ್ರಕರ್

ಬೀದರ: ಪ್ರತಿ ವರ್ಷ ಶ್ರೀ ರಾಮನವಮಿಗೆ ಶ್ರೀ ರಾಮಜನ್ಮೋತ್ಸವವನ್ನು ನಾವು ಆಚರಿಸುತ್ತೇವೆ. ಶ್ರೀರಾಮ ನಮ್ಮ ಆದರ್ಶದ ಪ್ರತೀಕವಾಗಿದ್ದಾನೆ. ಮರ್ಯಾದಾ ಪುರುಷೋತ್ತಮ ರಾಮ ಮತ್ತು ರಾವಣರ ಮಧ್ಯೆ...
- Advertisement -

More Articles Like This

- Advertisement -
close
error: Content is protected !!
Join WhatsApp Group