spot_img
spot_img

ಶಾಸಕ ಮನಗೂಳಿ ತಂದೆಯಂತೆಯೇ ಕೆಲಸ ಮಾಡಬೇಕು

Must Read

spot_img
- Advertisement -

 

ಸಿಂದಗಿ: ಸಿಂದಗಿ ಮತಕ್ಷೇತ್ರ ಅಭಿವೃದ್ದಿ ಪಥದಲ್ಲಿ ಮುಂದಾಗಬೇಕು. ರಾಜ್ಯದಲ್ಲಿಯೆ ಸಿಂದಗಿ ಕ್ಷೇತ್ರ ಮಾದರಿ ಕ್ಷೇತ್ರವಾಗಬೇಕು ಆ ನಿಟ್ಟಿನಲ್ಲಿ ಶಾಸಕ ಅಶೋಕ ಮನಗೂಳಿ ದಿಟ್ಟ ಹೆಜ್ಜೆಯನಿಟ್ಟು ಅನೇಕ ಯೋಜನೆಗಳನ್ನು ಈ ಕ್ಷೇತ್ರಕ್ಕೆ ತಂದು ಅಭಿವೃದ್ದಿಗೆ ಮುಂದಾಗಬೇಕು ಎಂದು ಸಹಕಾರಿ ಧುರೀಣ ಶಿವಪ್ಪಗೌಡ ಬಿರಾದಾರ ಹೇಳಿದರು.

ಪಟ್ಟಣದ ಅವರ ನಿವಾಸದಲ್ಲಿ ನೂತನ ಶಾಸಕ ಅಶೋಕ ಮನಗೂಳಿ ಮತ್ತು ಅವರ ಧರ್ಮಪತ್ನಿ ನಾಗರತ್ನ ಮನಗೂಳಿ ಅವರನ್ನು ಸನ್ಮಾನಿಸಿ ಮಾತನಾಡಿ, ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಅವರು ಈ ಕ್ಷೇತ್ರವನ್ನು ನೀರಾವರಿ ಕ್ಷೇತ್ರವನ್ನಾಗಿ ಮಾಡಿ ಸಾವಿರಾರು ರೈತರಿಗೆ ದಾರಿ ದೀಪವಾಗಿದ್ದಾರೆ. ಈ ಕ್ಷೇತ್ರಕ್ಕೆ ಶಾಶ್ವತ ಯೋಜನೆಗಳನ್ನು ನೀಡುವ ಮೂಲಕ ಜನಮಾನಸದಲ್ಲಿ ಉಳಿದಿದ್ದಾರೆ ಅವರ ಹಾಗೆ ಅವರ ಮಗ ಅಶೋಕ ಮನಗೂಳಿ ಅವರು ಶಾಶ್ವತ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಮುಂದಾಗಬೇಕು ಎಂದು ಸಲಹೆ ನೀಡಿದರು.

- Advertisement -

ಈ ಸಂದರ್ಭದಲ್ಲಿ ಶಾಸಕ ಅಶೋಕ ಮನಗೂಳಿ ಮಾತನಾಡಿ, ಈ ಕ್ಷೇತ್ರದ ಜನತೆ ನನ್ನ ಹಾಗೂ ರಾಜ್ಯ ಸರ್ಕಾರದ ಮೇಲೆ ಅನೇಕ ಭರವಸೆಗಳನ್ನಿಟ್ಟಿದ್ದಾರೆ ಅವರ ಭರವಸೆಗಳನ್ನು ಹಂತ ಹಂತವಾಗಿ ಪ್ರಾಮಾಣಿಕವಾಗಿ ರೂಪಿಸಿ ಅವರ ಋಣ ತೀರಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಸೋಮನಗೌಡ ಬಿರಾದಾರ, ಆರ್.ಪಿ.ಬಿರಾದಾರ, ಡಾ. ಅರವಿಂದ ಮನಗೂಳಿ, ಆರ್.ಆರ್.ಪಾಟೀಲ, ಬಿ.ಜಿ.ನೆಲ್ಲಗಿ, ಶರಣಪ್ಪ ಕುರುಡೆ,  ಸೈಪನಸಾಬ ಕರ್ಜಗಿ, ಮಹಾದೇವಯ್ಯ ಹಿರೇಮಠ, ರವಿ ದೇವರಮನಿ, ಪ್ರವೀಣ ಕಂಟಿಗೊಂಡ, ಅರವಿಂದ ಬಿರಾದಾರ, ಡಾ. ಬಿ.ಜಿ.ಪಾಟೀಲ, ಡಾ. ರಾಜಶೇಖರ ಸಂಗಮ, ಎಮ್.ಎಸ್.ಪಾಟೀಲ, ಕಮ್ಮುಗೌಡ ಬಿರಾದಾರ ಸೇರಿದಂತೆ ಶಿವಪ್ಪಗೌಡ ಬಿರಾದಾರ ಅವರ ಕುಟುಂಬಸ್ಥರು ಭಾಗವಹಿಸಿದ್ದರು.

- Advertisement -
- Advertisement -

Latest News

ಹನಿಗವನಗಳು

ಹನಿಗವನಗಳು 1) ಸುಳ್ಳುಗಾರರು ಹತ್ತು ನಾಲಿಗೆಯ ರಾವಣ ಹೇಳಲಿಲ್ಲ ಒಂದು ಸುಳ್ಳು ಒಂದೇ ನಾಲಿಗೆಯ ರಾಜಕಾರಣಿ ಹೇಳುತ್ತಾನೆ ದಿನಕ್ಕತ್ತು ಸುಳ್ಳು! 2) ಶೀಲಾ ನೆರೆಮನೆ ಶೀಲಾ ಪರ ಪುರುಷರೊಡನೆ ಸೇರಿ ಹೆಸರು ಕೆಡಿಸಿಕೊಂಡಳು 3) ಟಿವಿ ಹಾವಳಿ ಮನೆಯಲ್ಲಿ ಟಿವಿ ಮುಂದೆ ಸದಾ ಇರುವ ವಿದ್ಯಾ ರ್ಥಿಗಳು ಶಾಲೆಯಲ್ಲಿ ಹಿಂದೆ ಬೀಳುವರು. 4) ವಾಸ್ತವ ಕಟ್ಟುವವು...
- Advertisement -

More Articles Like This

- Advertisement -
close
error: Content is protected !!
Join WhatsApp Group