spot_img
spot_img

ಕಲ್ಲೋಳಿ ಮಹಾಲಕ್ಷ್ಮೀ ಸಹಕಾರಿಯು ರೂ. 1.72 ಕೋಟಿ ಲಾಭಗಳಿಸಿದೆ-ಸಂಸದ ಈರಣ್ಣ ಕಡಾಡಿ

Must Read

- Advertisement -

ಮೂಡಲಗಿ: ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘವು ಸನ್ 2022-23ನೇ ಸಾಲಿನಲ್ಲಿ ರೂ 1.72 ಕೋಟಿ ರೂ ಲಾಭಗಳಿಸಿದೆ ಎಂದು ರಾಜ್ಯಸಭಾ ಸಂಸದ ಹಾಗೂ ಸಂಸ್ಥಾಪಕ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.

ಶನಿವಾರ ಸೆ.16 ರಂದು ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ನಿ.ಕಲ್ಲೋಳಿ ಇದರ ಸನ್ 2022-23ನೇ ಸಾಲಿನ 21ನೇ ಸರ್ವ ಸಾಮಾನ್ಯ ಸಭೆಯನ್ನು ಸಸಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಹಕಾರಿಯು ಗ್ರಾಹಕರ ಸಹಕಾರದಿಂದ ಪ್ರಗತಿ ಹೊಂದಿದ್ದು, ಎಲ್ಲ ಸದಸ್ಯರಿಗೆ ಶೇ 20 ರಷ್ಟು ಲಾಭಾಂಶ ಘೋಷಿಸಿದ ಅವರು ಸಂಘವು ಸ್ವಂತ ಕಟ್ಟಡ ಹೊಂದಿ, 8737 ಸದಸ್ಯರ ರೂ-16.73 ಲಕ್ಷ ಶೇರ ಬಂಡವಾಳ, ಗ್ರಾಹಕರಿಂದ ರೂ-47.78 ಕೋಟಿ ಠೇವಣಿ ಹೊಂದಿದ್ದು, ರೂ-5.14 ಕೋಟಿ ವಿವಿಧ ನಿಧಿಗಳನ್ನು ಹೊಂದಿದೆ ಎಂದರಲ್ಲದೇ ಗ್ರಾಹಕರಿಗೆ ರೂ-45.69 ಕೋಟಿ ವಿವಿಧ ಸಾಲ ವಿತರಿಸಲಾಗಿದೆ. ಸಹಕಾರಿಯ ನೂತನ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದ್ದು, ಬರುವ ವರ್ಷದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದರು.

- Advertisement -

ಸಹಕಾರಿಯ ಉಪಾಧ್ಯಕ್ಷ ಶ್ರೀಶೈಲ ತುಪ್ಪದ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ, ನಿರ್ದೆಶಕರಾದ ಬಾಳಪ್ಪ ಸಂಗಟಿ, ಪರಪ್ಪ ಮಳವಾಡ, ಸಹದೇವ ಹೆಬ್ಬಾಳ, ಶಿವಪ್ಪ ವ್ಯಾಪಾರಿ, ಮಾರುತಿ ಮಕ್ಕಳಗೇರಿ, ಮಲ್ಲಿಕಾರ್ಜುನ ಹುಲೆನ್ನವರ, ಸೋಮನಿಂಗ ಹಡಗಿನಾಳ, ಸಿದ್ದಪ್ಪ ಹೆಬ್ಬಾಳ, ನಿಂಗಪ್ಪ ಮಿಡಕನಟ್ಟಿ, ಬೆಟಗೇರಿ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಈರಪ್ಪ ದೆಯೆನ್ನವರ, ಉಪಾಧ್ಯಕ್ಷ ಮಾಯಪ್ಪ ಬಾಣಸಿ, ಘಟಪ್ರಭಾ ಶಾಖೆಯ ಅಧ್ಯಕ್ಷ ಬಸವರಾಜ ಕತ್ತಿ, ಉಪಾಧ್ಯಕ್ಷ ರಾಮಚಂದ್ರ ಕೊಡ್ಲಿ, ಶ್ರೀಕಾಂತ ಕರೆಪ್ಪಗೋಳ, ಬಸಪ್ಪ ಗೌಡರ, ಗಣೇಶ ಗಾಣಿಗ,ಹಾಲಪ್ಪ ಕರಿಗಾರ, ಸತೀಶ ಪಾಟೀಲ, ಮಹಾಂತೇಶ ಉದಗಟ್ಟಿಮಠ, ರಾಮಪ್ಪ ಮುಧೋಳ ಸೇರಿದಂತೆ ಅನೇಕ ಸಹಕಾರಿಗಳು ಭಾಗವಹಿಸಿದ್ದರು.

ಪ್ರಧಾನ ವ್ಯವಸ್ಥಾಪಕ ಹಣಮಂತ ಕಲಕುಟ್ರಿ ಸ್ವಾಗತಿಸಿದರು. ವಿಠ್ಠಲ ಜಟ್ಟೆನ್ನವರ ವಾರ್ಷಿಕ ವರದಿ ಓದಿದರು, ಶಾಖಾ ವ್ಯವಸ್ಥಾಪಕ ಪರಪ್ಪ ಗಿರೆಣ್ಣವರ ಕಾರ್ಯಕ್ರಮ ನಿರೂಪಿಸಿದರು, ಸುರೇಶ ಮಠದ ವಂದಿಸಿದರು.

- Advertisement -
- Advertisement -

Latest News

ವಚನ ವಿಶ್ಲೇಷಣೆ : ಕಾಯದ ಜೀವದ ಹೊಲಿಗೆ

*ಕಾಯದ ಜೀವದ ಹೊಲಿಗೆ* ----------------------------------- ದೇಹಭಾವವಳಿದಲ್ಲದೆ ಜೀವಭಾವವಳಿಯದು. ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು. ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು. ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಇದು ಕಾರಣ; ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ ಗುಹೇಶ್ವರಲಿಂಗದ...
- Advertisement -

More Articles Like This

- Advertisement -
close
error: Content is protected !!
Join WhatsApp Group