spot_img
spot_img

ಪಿಸ್ತೂಲ್ ಹಣೆಗೆ ಇಟ್ಟು ೩.೫೦ ಕೋ. ರೂ. ದರೋಡೆ : ಆರೋಪಿಗಳು ವಶಕ್ಕೆ

Must Read

spot_img
- Advertisement -

ಬೀದರ – ಗಾಳಿಯಲ್ಲಿ ಗುಂಡು ಹಾರಿಸಿ, ಹಣೆಗೆ ಪಿಸ್ತೂಲ್ ಇಟ್ಟು ಬೆದರಿಸಿ  ಕಾಂಗ್ರೆಸ್ ಮುಖಂಡನಿಂದ ೩.೫೦ ಕೋಟಿ ರೂ. ದರೋಡೆ ಮಾಡಿರುವ ಪ್ರಕರಣ ಬಸವಕಲ್ಯಾಣ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ೬೫ರ ಹಣಮಂತವಾಡಿ ಬಳಿ ನಡೆದಿದೆ.

ಉಮಾ ಪತಿ ಎಂಬುವರಿಂದ ೩.೫ ಕೋಟೆ ರೂಪಾಯಿ ಸುಲಿಗೆ ನಡೆದಿದ್ದು ಅವರು ಆಂಧ್ರಪ್ರದೇಶದ ತಿರುಪತಿಯಿಂದ ಪಂಡರಾಪುರಕ್ಕೆ ಹೊರಟಿದ್ದರು.

ತಮ್ಮಿಂದ ಹಾಲು ಖರೀದಿಸಿದ ರೈತನಿಗೆ ಹಣ ನೀಡಲು ಹೊರಟಿದ್ದ ಉಮಾಪತಿ ದಾರಿ ಮಧ್ಯೆ ೯ ಗಂಟೆ ಸುಮಾರಿಗೆ ಪನ್ನೀರಿ ಪ್ಯಾಕ್ಟರಿ ಹತ್ತಿರ ರಿಫ್ರೆಶ್ ಆಗಲು ನಿಂತಿದ್ದರು ಈ ವೇಳೆ ಬೈಕ್ ಮೇಲೆ ಆಗಮಿಸಿದ ಗುಂಡು ರೆಡ್ಡಿ ಎಂಬ ವ್ಯಕ್ತಿ  ಸೇರಿ ನಾಲ್ವರ ತಂಡ ಗಾಳಿಯಲ್ಲಿ ಗುಂಡು ಹಾರಿಸಿ, ಉಮಾಪತಿಯ ಹಣೆಯ ಮೇಲೆ ಪಿಸ್ತೂಲ್ ಇಟ್ಟಿ ಬೆದರಿಕೆ ಹಾಕಿ  ೩ ಕೋಟಿ ೫೦ ಲಕ್ಷ ದೋಚಿಕೊಂಡಿದಾರೆಂದು ಆರೋಪ ಮಾಡಲಾಗಿದೆ. ಘಟನೆ ನಡೆದ ೨೪ ಗಂಟೆಯಲ್ಲೆ ಪ್ರಕರಣ ಭೇದಿಸಿದ ಪೊಲೀಸರು

- Advertisement -

ಗುಂಡು ರೆಡ್ಡಿ, ವಿಜಯ ಕುಮಾರ್ ರೆಡ್ಡಿ, ಸಂಜಯರೆಡ್ಡಿ ಸೇರಿ ನಾಲ್ವರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ  ಓರ್ವನಿಗಾಗಿ ಶೋಧ ನಡೆದಿದೆ.

ಆರೋಪಿತರಿಂದ ೨ ಕೋಟಿ, ೬೨ ಲಕ್ಷ ಜಪ್ತಿ ಮಾಡಿಕೊಂಡ ಪೊಲೀಸರು ಈ ಕುರಿತು ಮಂಠಾಳ ಪೊಲೀಸ್ ಠಾಣೆಯಲ್ಲಿ ಸುಲಿಗೆ, ಕೊಲೆ ಯತ್ನ ಮತ್ತು ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿದ್ದಾರೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಬಸವಣ್ಣನವರ ಬಗ್ಗೆ ಮಾತನಾಡುವ ಅಧಿಕಾರ ಈ ಕೆಳಗಿನವರಿಗಿಲ್ಲ

ಬಸವಣ್ಣನವರು ಜಗವು ಕಂಡ ಸರ್ವ ಶ್ರೇಷ್ಠ ಬಂಡುಕೋರ ಕ್ರಾಂತಿಕಾರಿ , ಬಸವಣ್ಣನವರ ಕ್ರಾಂತಿಯನ್ನು ವಿಫಲಗೊಳಿಸಲು ಯತ್ನಿಸಿದ ಜಾತಿ ಕರ್ಮಠರು, ಮನುವಾದಿಗಳು ವಚನ ಕ್ರಾಂತಿಗೆ ಶರಣ ಸಾಹಿತ್ಯಕ್ಕೆ...
- Advertisement -

More Articles Like This

- Advertisement -
close
error: Content is protected !!
Join WhatsApp Group