ವಾರದ ಸಾಮೂಹಿಕ ಪ್ರಾಥ೯ನೆ ಮತ್ತು ಕಣ್ಣಿಗೆ ಸುರಕ್ಷಾ ಹನಿ ಹಾಕುವ ವಿಶೇಷ ಕಾಯ೯ಕ್ರಮ

Must Read

ಬೆಳಗಾವಿ – ಡಾ.ಫ.ಗು.ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ  ದಿನಾಂಕ 17.12.2023.ರಂದು ವಾರದ ಪ್ರಾರ್ಥನೆ ಹಾಗೂ ಕಣ್ಣಿಗೆ ಸುರಕ್ಷಾ ಹನಿ ಹಾಕುವ ಕಾರ್ಯಕ್ರಮ  ಜರುಗಿತು.

ಪ್ರಾರಂಭದಲ್ಲಿ ಮಹಾದೇವಿ ಅರಳಿ ವಚನ  ಪ್ರಾರ್ಥನೆ ನಡೆಸಿಕೊಟ್ಟರು ಮತ್ತು ವಿಶ್ಲೇಷಣೆಯನ್ನು ವಿ.ಕೆ.ಪಾಟೀಲ, ಜೆ.ಪಿ.ಜವಣಿ, ಆರ್.ಎಸ್.ಚಾಪಗಾವಿ

ಅಕ್ಕಮಹಾದೇವಿ ತೆಗ್ಗಿ ಶರಣೆಯರು ಮಾಡಿದರು.   

ಇಂದಿನ ಉಪನ್ಯಾಸ ವನ್ನು ಡಾ.ಸುಭಾಷ್ ಮಾರಿಹಾಳ ಖ್ಯಾತ ಪತ್ರ ತಜ್ಞರು ಧಾರವಾಡ ಅವರು ನೇತ್ರ ಸಂರಕ್ಷಣೆ ಮತ್ತು ಆಹಾರ ಪದ್ಧತಿ ಕುರಿತು ನೀಡಿದರು. ಎ ಜಿವಸತ್ವದ ಕೊರತೆದ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಸೆಮಿನಾರ್ ಮೂಲಕ ಸಂಶಯ ಪರಿಹಾರವಾಗುವುದು.ಪಪ್ಪಾಯಿ, ಮಾವು, ಕಿವಿಹಣ್ಢು, ಗಜ್ಜರಿ, ಸೇಬು, ತಾಜಾ ಹಣ್ಣುಗಳನ್ನು ಸೇವಿಸಬೇಕು ಎಂದು ತಿಳಿಸಲಾಯಿತು.

ಮಹಾಂತೇಶ ಇಂಚಲ  ಅವರು 1000ನೋಟು, ಒಂದು ರೂಪಾಯಿ ನಾಣ್ಯದ ಕಥೆ ಹೇಳಿದರು. ಅಧ್ಯಕ್ಷತೆಯನ್ನು ಈರಣ್ಣಾ ದೇಯಣ್ಣವರ ಅವರು ವಹಿಸಿದ್ದರು. ದಾಸೋಹ ಸೇವೆಯನ್ನು ಕಿರಣ ಬೆಳಕಿಂಡಿ ಅವರು ನೀಡಿದರು. ಪೂಜಾರ ಸರ್, ದೊಡಮನಿ ಸರ್,  ಗದಿಗೆಪ್ಪ ತಿಗಡಿ, ಮಲ್ಲಿಕಾರ್ಜುನ ಜಗಜಂಪಿ, ಆನಂದ ಕಕಿ೯, ಎಂ.ವೈ.ಮೆಣಸಿನಕಾಯಿ,  ಸುವರ್ಣ ಮೆಡಂ, ತಿಗಡಿ ಮೆಡಂ, ಇತರ ಶರಣ ಶರಣೆಯರು ಉಪಸ್ಥಿತರಿದ್ದರು. ಕೊನೆಯಲ್ಲಿ ವಚನ ಮಂಗಲದೊಂದಿಗೆ ಮುಕ್ತಾಯವಾಯಿತು.

Latest News

ಬೆಳಗಾವಿಯಿಂದ ಉಡಾನ್ ಸೇವೆ ಪುನಾರಂಭಿಸಲು ಕಡಾಡಿ ಮನವಿ

ಮೂಡಲಗಿ:ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕೇಂದ್ರ ಸರ್ಕಾರ ನೀಡಿದ ಉಡಾನ್ ಯೋಜನೆಯ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ದೇಶದ ಅನೇಕ ನಗರಗಳಿಗೆ ಈ ಮೊದಲು ವಿಮಾನಯಾನ ಸಂಸ್ಥೆಗಳು ಒದಗಿಸುತ್ತಿದ್ದ...

More Articles Like This

error: Content is protected !!
Join WhatsApp Group