ಅಕ್ಕಿಯಲ್ಲಿ ಹುಳವೋ, ಹುಳುಗಳಲ್ಲಿ ಅಕ್ಕಿಯೋ! ಬೀದರ ಜಿಲ್ಲೆಯ ಗೌರ ಗ್ರಾಮದ ಪ್ರೌಢ ಶಾಲೆಯ ಕರ್ಮಕಾಂಡ

Must Read

ಬೀದರ – ಇದೊಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ನೋಡಲೇಬೇಕಾದ ಸುದ್ದಿ. ಮಕ್ಕಳ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಶಿಕ್ಷಣ ಇಲಾಖೆ. ಜಿಲ್ಲೆಯ ಗೌರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಬಿಸಿಯೂಟದ ಅಕ್ಕಿಯಲ್ಲಿ ಹುಳವೋ ಹುಳುಗಳಲ್ಲಿ ಅಕ್ಕಿಯೋ ಎನ್ನುವುದು ಗೊತ್ತಾಗುತ್ತಿಲ್ಲ.

ಸಾಂಬಾರ ಗೆ ಬಳಸುವ ತೊಗರಿ ಬೇಳೆಯಲ್ಲಿ ಬೇಳೆಗಿಂತ ಪೌಡರ್ ಪ್ರಮಾಣ ಜಾಸ್ತಿಯಾಗಿದೆ. ಅಕ್ಕಿಯಲ್ಲಿ ಹುಳು ಕಾಣಿಸಿಕೊಂಡಿದೆ ಹೀಗಾಗಿ ಬಿಸಿ ಊಟ ಮಾಡಲು ಮಕ್ಕಳು ಹೆದರುತ್ತಿದ್ದಾರೆ ಗೌರ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಮಕ್ಕಳು.

        ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರೇ,  ಸ್ವಲ್ಪ ನೋಡಿ ನಿಮ್ಮ  ತವರು ಜಿಲ್ಲೆಯ ಶಾಲೆಯೊಂದರ ಕರ್ಮಕಾಂಡ

     ಮೊದಲೇ ಶಾಲೆಯಲ್ಲಿ ಪೌಷ್ಟಿಕಾಂಶಯುಕ್ತ  ಆಹಾರ ಸಿಗುತ್ತಿಲ್ಲ ಎನ್ನುವ ಆರೋಪ ಒಂದು ಕಡೆಯಾದರೆ ಮತ್ತೊಂದು ಕಡೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗುತ್ತಿಲ್ಲ ಎನ್ನುವ ಆರೋಪ ಗಟ್ಟಿಯಾಗಿ ಕೇಳಿ ಬಂದಿದೆ.ರಾಜ್ಯ ಸರ್ಕಾರ ಮಕ್ಕಳಿಗೆ ಬಿಸಿ ಊಟ ನೀಡಲು ಸಾವಿರಾರು ಕೋಟಿ ಖರ್ಚು ಮಾಡುತ್ತದೆ. ಆದರೆ ಬಿಸಿಯೂಟದ ಪದಾರ್ಥವೇ ಕಳಪೆಯಾಗಿದೆ‌ ಗಡಿ ಜಿಲ್ಲೆ ಮಕ್ಕಳ ಪರಿಸ್ಥಿತಿ ಯಾರು ಕೇಳವರು ಯಾರು ಇಲ್ಲವೆನ್ನುವಂತಾಗಿದೆ. 

ಈ ಪ್ರೌಢ ಶಾಲೆಯ ಕರ್ಮಕಾಂಡದ ಬಗ್ಗೆ ಸರ್ಕಾರ ಕಣ್ಣು ತೆರೆದು ನೋಡಬೇಕಾಗಿದೆ.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಗಂಡನ ಮನೆಯವರ ಕಿರುಕುಳ ; ಗೃಹಿಣಿ ಆತ್ಮಹತ್ಯೆ, ಅನಾಥವಾದ ೧೧ ತಿಂಗಳ ಮಗು

ಬೀದರ - ಗಂಡ, ಅತ್ತೆ, ಮಾವ ಸೇರಿ ಗೃಹಿಣಿಗೆ ಸತತವಾಗಿ ಮಾನಸಿಕ ಕಿರುಕುಳ ನೀಡಿದ ಕಾರಣ ಮನನೊಂದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರನಲ್ಲಿ ನಡೆದಿದೆಹೌದು...

More Articles Like This

error: Content is protected !!
Join WhatsApp Group