ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿಯವರಿಗೆ ಯುವ ವಿಕಾಸ ಪ್ರಶಸ್ತಿ

Must Read

 

ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಗ್ಲೋಬಲ್ ಯೋಗ ಸಮಿಟ್ 2023 ಸಮಾರಂಭದಲ್ಲಿ ಅಂಕಣಕಾರ, ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಕಾರ್ಯನಿರ್ವಾಹಕ ಡಾ.ಗುರುರಾಜ ಪೋಶೆಟ್ಟಿಹಳ್ಳಿಯವರಿಗೆ ಪ್ರತಿಷ್ಠಿತ ‘ಯುವ ವಿಕಾಸ ಪ್ರಶಸ್ತಿ ‘ನೀಡಿ ಗೌರವಿಸಲಾಯಿತು.

ಭಾರತ ವಿಕಾಸ ಸಂಗಮದ ವತಿಯಿಂದ ಆಯೋಜಿಸಲಾಗಿದ್ದ ಯುವಶಕ್ತಿ ಸಂಗಮದಲ್ಲಿ ಶ್ರೀಯುತರು ಮಾಧ್ಯಮಗಳ ಮೂಲಕ ನಡೆಸುತ್ತಿರುವ ಆಧ್ಯಾತ್ಮಿಕ ಜಾಗೃತಿಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಕಾರ್ಯಕ್ರಮದ ಮುಖ್ಯ ಸಂಯೋಜಕ ಭಾರತೀಯ ವಿಕಾಸ ಪರಿಷತ್ ಅಕಾಡೆಮಿಕ್ ಡೀನ್ ಸೇಡಂನ ಡಾ .ವಾಸುದೇವ ಅಗ್ನಿಹೋತ್ರಿ ತಿಳಿಸಿರುತ್ತಾರೆ.

ವಿಚಾರ ಸಂಕಿರಣದಲ್ಲಿ ಖ್ಯಾತ ಲೆಕ್ಕಪತ್ರ ಪರಿಶೋಧಕ ಬಿವಿಎಸ್‌ನ ರಾಜ್ಯ ಸಂಚಾಲಕ ಮತ್ತು ರಾಷ್ಟ್ರೀಯ ಖಜಾಂಚಿ ಡಾ.ಸಿ ಆರ್ ಡವಳಗಿ ,ಪತ್ರಕರ್ತ ಸೇಡಂನ ಪ್ರಭಾಕರ ಜೋಶಿ ,ಡಾ. ವಾಸುದೇವ ದೇಶಪಾಂಡೆ ,ಎಂ ಡಿ ಪಾಟೀಲ್ ,ಡಾ ಶಾಂತಣ್ಣ ಕಡಿವಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಖ್ಯಾತ ವೇದ ಗಣಿತ ಶಾಸ್ತ್ರಜ್ಞ ವೈ ಎಸ್ ಗಾಯತ್ರಿ ಹಾಗೂ ಹರಿದಾಸ ಸಾಹಿತ್ಯ ಸಂಶೋಧಕಿ ರಮ ಕಲ್ಲೂರ್ಕರ್ ರವರಿಗೆ ಮಾತೃ ಶಕ್ತಿ ಸಂಗಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Latest News

ಗಂಡನ ಮನೆಯವರ ಕಿರುಕುಳ ; ಗೃಹಿಣಿ ಆತ್ಮಹತ್ಯೆ, ಅನಾಥವಾದ ೧೧ ತಿಂಗಳ ಮಗು

ಬೀದರ - ಗಂಡ, ಅತ್ತೆ, ಮಾವ ಸೇರಿ ಗೃಹಿಣಿಗೆ ಸತತವಾಗಿ ಮಾನಸಿಕ ಕಿರುಕುಳ ನೀಡಿದ ಕಾರಣ ಮನನೊಂದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರನಲ್ಲಿ ನಡೆದಿದೆಹೌದು...

More Articles Like This

error: Content is protected !!
Join WhatsApp Group