ಮೈಸೂರು – ನಗರದ ಅಗಸ್ತ್ಯ ಸಿದ್ಧ ಸಾಹಿತ್ಯ ಸಂಶೋಧನಾ ಕೇಂದ್ರ, ಮೈಸೂರು ಇವರ ವತಿಯಿಂದ ಸಿದ್ಧ ವೈದ್ಯರಾದ ನರಸಿಂಹಸ್ವಾಮಿ ಪಿ.ಎಸ್. ರವರ ‘ಅಗಸ್ತ್ಯ ಸಿದ್ಧ ವೈದ್ಯ ಪದ್ಧತಿ’ ಗ್ರಂಥದ ಲೋಕಾರ್ಪಣಾ ಕಾರ್ಯಕ್ರಮವನ್ನು ಲಕ್ಷ್ಮೀಪುರಂನಲ್ಲಿರುವ ಗೋಪಾಲಸ್ವಾಮಿ ಶಿಶು ವಿಹಾರದಲ್ಲಿ ಜ.14ರಂದು ಭಾನುವಾರ ಬೆಳಿಗ್ಗೆ 10ಕ್ಕೆ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಕೆ.ಆರ್.ಕ್ಷೇತ್ರದ ಶಾಸಕರಾದ ಟಿ.ಎಸ್. ಶ್ರೀವತ್ಸರವರು, ಹಿರಿಯ ನ್ಯಾಯವಾದಿಗಳಾದ ಓ. ಶ್ಯಾಂಭಟ್, ಮಣಿಪಾಲ್‍ನ ಅಕಾಡೆಮಿ ಆಫ್ ಹೈಯರ್ ಸೈನ್ಸ್ ನ ಸಿದ್ಧ ವೈದ್ಯರಾದ ಡಾ.ಅರುಳ್ ಅಮುದನ್, ಚೆನೈನ ಸಿದ್ಧ ವೈದ್ಯರಾದ ಡಾ.ಸೆಲ್ವ ಷಣ್ಮುಗಂ, ಮೈಸೂರಿನ ಹಿರಿಯ ಆಯುರ್ವೇದ ತಜ್ಞರಾದ ಡಾ.ಎನ್.ಎಸ್.ರಾಮಚಂದ್ರ, ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಕೆ.ಎಸ್.ರಾಧಾಕೃಷ್ಣರಾವ್, ಹಿರಿಯ ಆಯುರ್ವೇದ ತಜ್ಞರಾದ ಡಾ.ಚಂದ್ರಶೇಖರ್ ಎ.ಎಸ್.ರವರು ಭಾಗವಹಿಸಲಿದ್ದಾರೆ.
ಭಾರತೀಯ ವೈದ್ಯ ಪದ್ಧತಿಯಲ್ಲಿ ಅತ್ಯಂತ ಪ್ರಾಚೀನವಾದ ವೈದ್ಯ ಪದ್ಧತಿ ಅಗಸ್ತ್ಯ ಸಿದ್ಧ ವೈದ್ಯ ಪದ್ಧತಿ. ಅಗಸ್ತ್ಯರು ಇದರ ಪ್ರವರ್ತಕರು. ಮೂಲತಃ ಸಿದ್ಧ ವೈದ್ಯ ಪದ್ಧತಿಯು ತಮಿಳು ಮತ್ತು ಕೇರಳ ಭಾಷೆಯಲ್ಲಿದೆ. ಆದ್ದರಿಂದ ಕರ್ನಾಟಕ ರಾಜ್ಯದ ಜನರಿಗೆ ಅನುಕೂಲವಾಗಲೆಂದು ಸಿದ್ಧ ವೈದ್ಯ ಪದ್ಧತಿಯನ್ನು ಪರಿಚಯಿಸಲಿಕ್ಕಾಗಿ ಹಳೆಯ ಗ್ರಂಥ, ತಾಳೇಗರಿ, ಪ್ರಾಚೀನ ತಮಿಳು ಲಿಪಿಯಲ್ಲಿದ್ದ ಅಪರೂಪದ ಸಿದ್ಧ ವೈದ್ಯ ಸಾಹಿತ್ಯವನ್ನು ಕನ್ನಡಿಗರಿಗೆ ಪುಸ್ತಕದ ರೂಪದಲ್ಲಿ ಅಪರೂಪವಾಗಿ ಲೋಕಾರ್ಪಣೆಯಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 9845167119 ಸಂಪರ್ಕಿಸಬಹುದು.