- Advertisement -
ವೀರ ಸನ್ಯಾಸಿಗೆ ಅಕ್ಷರ ನಮನ
ಸೂರ್ಯ ತೇಜಸ್ಸು ಕಣ್ಣ ಕಾಂತಿ
ನೀಲಾಕಾಶದ ಹೊಳಪು
- Advertisement -
ಪೂರ್ಣಚಂದಿರನ ವದನಾರವಿಂದ
ನಕ್ಷತ್ರ ಪುಂಜದ ಬೆಳಕು
ಭವ್ಯ ಭಾರತದ ಕನಸ ನನಸಾಗಿಸೆ
- Advertisement -
ಹಗಲಿರುಳು ದುಡಿದೆ
ಭರತ ಖಂಡದ ಹಿರಿಮೆ ಗರಿಮೆಯ
ವಿಶ್ವದೆಲ್ಲೆಡೆ ಪಸರಿಸಿದೆ
ಯುವಕರ ನರ ನಾಡಿಯ ಮಿಡಿದೆ
ದೇಶಪ್ರೇಮವ ತುಂಬಿ
ಭಾರತದ ಭವ್ಯ ಭವಿಷ್ಯವ ಬರೆದೆ
ಯುವ ಸಮೂಹವ ನಂಬಿ
ಏಳಿ ಎದ್ದೇಳಿ ಗುರಿ ಮುಟ್ಟುವ ತನಕ
ನಿಲ್ಲದಿರಿ ಎಂದೆ
ಕ್ಷಾತ್ರ ತೇಜದ ಬೀಜಗಳ ಬಿತ್ತಿ
ಮುನ್ನುಗ್ಗುತ ಮುಂದೆ
ಸೃಷ್ಟಿಸಿದೆ ಅಚ್ಚಳಿಯದಿತಿಹಾಸ
ಭಾರತದ ಪುಟಗಳಲಿ
ನೆಲೆಸಿದೆ ಕೋಟಿ ಕೋಟಿ
ನವ ಯುವಕರ ಎದೆಯಲಿ
ಭಾರತದ ದ್ರುವತಾರೆ ಮಿಂಚುತಿದೆ
ಯುವಕರ ಕಣ್ಗಳಲಿ
ವೀರ ಸನ್ಯಾಸಿಯೇ… ಕರಮುಗಿದು
ನಮಿಪೆವು ನಿನ್ನ ಪಾದಾರವಿಂದದಲಿ
ದೇವರಾಜ್ ನಿಸರ್ಗತನಯ
ಬಂಗಾರಪೇಟೆ
9845527597