ಶ್ರೀರಾಮ ದೇವರ ಪ್ರತಿಷ್ಠಾಪನೆ ಪ್ರಯುಕ್ತ ಚಿತ್ರ ಬಿಡಿಸುವ ಸ್ಪರ್ಧೆ

Must Read

ಮೈಸೂರು -ಅಯೋಧ್ಯೆಯಲ್ಲಿ ಶ್ರೀರಾಮ ದೇವಸ್ಥಾನ ಪ್ರತಿಷ್ಠಾಪನೆ ಅಂಗವಾಗಿ ಇಂದು ಹೂಟಗಳ್ಳಿ ಕೆಹೆಚ್‍ಬಿ ಕಾಲೋನಿಯ ಅಸೋಸಿಯೇಷನ್ ಆಫ್ ಅಲೈಯನ್ಸ್ ಕ್ಲಬ್ ಇಂಟರ್‍ನ್ಯಾಷನಲ್ ನಲ್ಲಿ ಜಿಲ್ಲೆ 255 ಇವರ ಆಶ್ರಯದಲ್ಲಿ ಸಿರಿ ವಿದ್ಯಾಲಯ, ಸುದರ್ಶನ ವಿದ್ಯಾಸಂಸ್ಥೆ ಹಾಗೂ ಗುಡ್‍ವಿಶ್ ಫೌಂಡೇಶನ್ ವಿದ್ಯಾರ್ಥಿಗಳಿಗೆ ಶ್ರೀರಾಮ ದೇವರ ಕಂಠಪಾಠ ಹಾಗೂ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಸುಮಾರು 600 ಮಕ್ಕಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅಲೈಯನ್ಸ್ ಇಂಟರ್‍ನ್ಯಾಷನಲ್ ಒಂದನೇ ಉಪರಾಜ್ಯಪಾಲ ಅಲೈಯನ್ ಸಿರಿಬಾಲು (ಸಿರಿ ವಿದ್ಯಾಲಯ), ಸಂಪುಟ ಕಾರ್ಯದರ್ಶಿ ಅಲೈ ಸಂತೋಷ್ (ಶಾಂತಲಾ ವಿದ್ಯಾಕೇಂದ್ರ), ಅಲೈ ಶೋಭಾ ಸಿರಿಬಾಲು, ಅಲೈ ಸಿರಿಮಾ ಬಿ.ರಾಜು, ಅಲೈ ಶಶಿಕುಮಾರ್, ಅಲೈ ಶಕುಂತಲಾ ರವೀಂದ್ರ ಹಾಗೂ ಇನ್ನಿತರ ಅಲೈಯನ್ಸ್ ಸ್ನೇಹಿತರು ಪಾಲ್ಗೊಂಡಿದ್ದರು. 

ವೇದಿಕೆ ಕಾರ್ಯಕ್ರಮದ ನಂತರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

Latest News

ಮಾಚಿದೇವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು

ಮಡಿವಾಳ ಮಾಚಿದೇವರ ಜಯಂತಿ ಸಿಂದಗಿ; ಹನ್ನೆರಡನೆಯ ಶತಮಾನದಲ್ಲಿಯೇ ಸಮಾಜದ ಏಳ್ಗೆಗಾಗಿ ಸಮಾನತೆಯನ್ನು ಬಯಸಿದ ಶರಣ ಮಡಿವಾಳ ಮಾಚಿದೇವರ ಜೀವನ ಚರಿತ್ರೆ ಬಹಳ ಅರ್ಥ ಪೂರ್ಣವಾಗಿದೆ ಅವರ ವಚನಗಳನ್ನು...

More Articles Like This

error: Content is protected !!
Join WhatsApp Group