ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಶ್ರಮದಾನ

Must Read

ಮೂಡಲಗಿ: ಸಮೀಪದ ಕಲ್ಲೋಳಿ ಪಟ್ಟಣದ  ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಶುಕ್ರವಾರ ಕಲ್ಲೋಳಿ ಪಟ್ಟಣ ಪಂಚಾಯತ ಸಹಯೋಗದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಗೂ ದೇವಾಲಯಗಳ ಆವರಣಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡರು.

ಈ ಸ್ವಚ್ಛತಾ ಕಾರ್ಯಕ್ಕೆ ಪಟ್ಟಣ ಪಂಚಾಯತ ಸದಸ್ಯರಾದ ಸುಬಾಸ ಕುರಬೇಟ, ಮಾಳಪ್ಪ ಸನದಿ, ಮಲಪ್ಪ ಹೆಬ್ಬಾಳ, ಭಗವಂತ ಪತ್ತಾರ, ಮೋಹನ ಗಾಡಿವಡ್ಡರ,  ಮಹಾದೇವ ಮದಬಾವಿ, ಅಲಪ್ಪ ದಾಸನಾಳ, ಸಂಜು ಕಳ್ಳಿಗುದ್ದಿ, ವಸಂತ್ ತಹಶೀಲ್ದಾರ್‌ ಚಾಲನೆ ನೀಡಿದರು. 

ಸ್ವಚ್ಛತಾ ಕಾರ್ಯದಲ್ಲಿ ಗ್ರಾಮದ ಮುಖಂಡರಾದ ಡಾ. ಬೋಜರಾಜ ಬೆಳಕೂಡ, ಸಿದ್ದು ಉಳ್ಳಾಗಡ್ಡಿ, ಚನಪ್ಪ ಹಡಗಿನಾಳ, ಶ್ರೀಕಾಂತ ಸೌಂಸುದ್ದಿ, ಪ್ರಮೋದ ನುಗ್ಗಾನಟ್ಟಿ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಶಂಕರ ನಿಂಗನೂರ, ಎಂ.ಬಿ.ಕುಲಮೂರ, ದೈಹಿಕ ಶಿಕ್ಷಕ ಬಿ.ಕೆ. ಸೊಂಟನವರ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ, ಸಿಬ್ಬಂದಿ ವರ್ಗದವರು, ಇನ್ನಿತರರು ಉಪಸ್ಥಿತರಿದ್ದರು.

Latest News

ಮಾಚಿದೇವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು

ಮಡಿವಾಳ ಮಾಚಿದೇವರ ಜಯಂತಿ ಸಿಂದಗಿ; ಹನ್ನೆರಡನೆಯ ಶತಮಾನದಲ್ಲಿಯೇ ಸಮಾಜದ ಏಳ್ಗೆಗಾಗಿ ಸಮಾನತೆಯನ್ನು ಬಯಸಿದ ಶರಣ ಮಡಿವಾಳ ಮಾಚಿದೇವರ ಜೀವನ ಚರಿತ್ರೆ ಬಹಳ ಅರ್ಥ ಪೂರ್ಣವಾಗಿದೆ ಅವರ ವಚನಗಳನ್ನು...

More Articles Like This

error: Content is protected !!
Join WhatsApp Group