spot_img
spot_img

‘ಸಂಗೀತಕ್ಕೆ ನೆನಪಿನ ಶಕ್ತಿಯನ್ನು ವೃದ್ಧಿಗೊಳಿಸುವ ಅಗಾದ ಶಕ್ತಿ ಇದೆ’

Must Read

spot_img
- Advertisement -

ಜೋಗದಿ ಸಿರಿ ಬೆಳಕಿನಲ್ಲಿ ನಾದಮಲ್ಲಿಗೆ ಕಾರ್ಯಕ್ರಮದಲ್ಲಿ ವಿ.ನಾಗರಾಜ ಭೈರಿ ಅಭಿಮತ

ಮೈಸೂರು – ಮೈಸೂರಿನ ಕರ್ನಾಟಕ ಸುಗಮ ಸಂಗೀತ ಪರಿಷತ್ತು ಹಾಗೂ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ ಇವರುಗಳ ಸಂಯುಕ್ತಾಶ್ರಯದಲ್ಲಿಂದು (ಫೆ.8) ವರಕವಿ ದ.ರಾ.ಬೇಂದ್ರೆ, ಕೆ.ಎಸ್.ನರಸಿಂಹಸ್ವಾಮಿ ಹಾಗೂ ಕೆ.ಎಸ್.ನಿಸ್ಸಾರ್ ಅಹಮದ್ ಅವರುಗಳ ಜನ್ಮದಿನಾಚರಣೆಯ ಅಂಗವಾಗಿ ‘ಜೋಗದ ಸಿರಿ ಬೆಳಕಿನಲ್ಲಿ ನಾದಮಲ್ಲಿಗೆ’ ಎಂಬ ಶೀರ್ಷಿಕೆಯಡಿಯಲ್ಲಿ ಗೀತ ನಮನ ಹಾಗೂ ನುಡಿ ನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಮೈಸೂರಿನ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ವಿ.ನಾಗರಾಜ ಬೈರಿಯವರು ಸಸಿಗೆ ನೀರೆರೆಯುವುದರ ಮೂಲಕ ಚಾಲನೆ ನೀಡಿ, ನಂತರ ಮಾತನಾಡಿ, ಇಂದು ಸುದಿನ ಕಾರಣ ಇಷ್ಟೇ ನಮ್ಮ ಹಿರಿಯ ಕವಿಗಳನ್ನು ಸ್ಮರಣೆ ಮಾಡುವ ದಿನ. ಫೆಬ್ರವರಿ ತಿಂಗಳಲ್ಲಿ ಮೇರು ಕವಿಗಳಾದ ದ.ರಾ.ಬೇಂದ್ರೆ, ಕೆ.ಎಸ್.ನರಸಿಂಹಸ್ವಾಮಿ, ಕೆ.ಎಸ್.ನಿಸ್ಸಾರ್ ಅಹಮದ್, ದೊಡ್ಡರಂಗೇಗೌಡ ಹಾಗೂ ಮೈಸೂರು ಅನಂತಸ್ವಾಮಿಯವರು ನೆನಪಿಗೆ ಬರುತ್ತಾರೆ. ಈ ಎಲ್ಲ ಮಹನೀಯರ ಜನ್ಮದಿನಾಚರಣೆ ಫೆಬ್ರವರಿ ತಿಂಗಳಲ್ಲಿ ಬಂದಿರುವುದು ಮತ್ತೊಂದು ವಿಶೇಷ. ಅವರ ಕಾಯವನ್ನು ಗೀತ ನಮನ ಅಥವಾ ನುಡಿ ನಮನದ ಮೂಲಕ ನೆನಪಿಸಿಕೊಳ್ಳುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಫೆಬ್ರವರಿ ಎಂದರೆ ಶಿವರಾತ್ರಿ ಮಹೋತ್ಸವ. ಶಿವರಾತ್ರಿ ಎಂದಾಕ್ಷಣ ಚಳಿ ಶಿವ ಶಿವ ಎಂದು ಬಿಟ್ಟುಹೋಗುತ್ತದೆ ಎಂದು ಹೇಳುವುದು ವಾಡಿಕೆ. ಆದರೆ ಇಂದಿನ ದಿನಗಳಲ್ಲಿ ಇದಕ್ಕೆ ತದ್ವಿರುದ್ಧ. ಕಾರಣ ಈ ಬಾರಿ ಮಳೆಯೂ ಇಲ್ಲ ಚಳಿನೂ ಇಲ್ಲ ಕಾರಣ ಬಿಸಿಲಿನ ಬೇಗೆ ಜಾಸ್ತಿಯಾಗುತ್ತದೆ. ಸುಗಮ ಸಂಗೀತದ ತಂಗಾಳಿಯನ್ನು ಉಣಬಡಿಸುವುದಕ್ಕಾಗಿ ನಾವು ಮಹಾರಾಜ ತಾಂತ್ರಿಕ ಮಹಾವಿದ್ಯಾಲಯದ ಸಹಯೋಗದೊಂದಿಗೆ ಇಲ್ಲಿಗೆ ಬಂದಿದ್ದೇವೆ ಎಂದು ತಿಳಿಸಿದರು.

- Advertisement -

ಅಧ್ಯಕ್ಷತೆ ವಹಿಸಿದ್ದ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಬಿ.ಜಿ.ನರೇಶ್‍ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಬರೀ ಓದಿನಲ್ಲೇ ಕಾಲ ಕಳೆಯುವುದಕ್ಕಿಂತ ಸಂಗೀತದ ಕಡೆ ಹೆಚ್ಚು ಒಲವು ತೋರಿದರೆ ಮಾನಸಿಕ ಖಿನ್ನತೆ ದೂರವಾಗಿ ಮನಸ್ಸಿಗೆ ಶಾಂತಿ, ಸಮಾಧಾನ ದೊರಕುತ್ತದೆ ಎಂದು ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ಮಹಾರಾಜ ಎಜುಕೇಷನ್ ಟ್ರಸ್ಟ್‍ನ ಅಧ್ಯಕ್ಷ ಡಾ.ಎಸ್.ಮುರುಳಿ, ಮಂಡ್ಯದ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ಡೇವಿಡ್ ಪ್ರತಿಭಾಂಜಲಿ, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಉಪಾಧ್ಯಕ್ಷ ಎಸ್.ಗಂಗಾಧರಪ್ಪ, ಕಾರ್ಯದರ್ಶಿ ಸಿರಿಬಾಲು, ಎಂಐಟಿ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಪ್ರೊ.ಎಲ್.ಕಿರಣ್‍ಕುಮಾರ್ ಹಾಗೂ ಇತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಡೇವಿಡ್ ಪ್ರಾರ್ಥಿಸಿದರು. ಡೇವಿಡ್ ನಿರೂಪಸಿದರು. ಸಿರಿಬಾಲು ವಂದಿಸಿದರು.

ವೇದಿಕೆ ಕಾರ್ಯಕ್ರಮದ ನಂತರ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಡಾ.ಶ್ರೀದೇವಿ ಕುಳೇನೂರ್ ಗಮಗಮ ಮಾಡುತ್ತಿವೆ ಮಲ್ಲಿಗೆ, ಡೇವಿಡ್ ಪ್ರತಿಭಾಂಜಲಿ ಹಾಗೂ ರಶ್ಮಿ ಚಿಕ್ಕಮಗಳೂರು ಕೆ.ಎಸ್.ನರಸಿಂಹಸ್ವಾಮಿ ರಚನೆಯ, ಸಿ.ಅಶ್ವಥ್ ಸಂಗೀತ ಸಂಯೋಜನೆಯ ಒಂದಿರುಳು ಕನಸಿನಲಿ, ಎಂಐಟಿ ಕಾಲೇಜಿನ ವಿದ್ಯಾರ್ಥಿ ರುತ್ವಿಕ್ ಸಿ.ರಾಜ್ ದ.ರಾ.ಬೇಂದ್ರೆಯವರ ಶ್ರಾವಣ ಬಂತು ನಾಡಿಗೆ, ದ.ರಾ.ಬೇಂದ್ರೆಯವರ ಚಲನಚಿತ್ರಗೀತೆ ಮೂಡಲ ಮನೆಯ ಗೀತೆಯನ್ನು ರಶ್ಮಿ ಚಿಕ್ಕಮಗಳೂರು ಸುಶ್ರಾವ್ಯವಾಗಿ ಹಾಡಿದರು. ಕಾರ್ಯಕ್ರಮದ ಮಧ್ಯದಲ್ಲಿ ಪುನೀತ್ ರಾಜ್‍ಕುಮಾರ್ (ಅಪ್ಪು)ವನ್ನು ನೆನೆದು ಡೇವಿಡ್ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಹಾಡನ್ನು ಭಾವುಕರಾಗಿ ಹಾಡಿದರು. ಡಾ.ಶ್ರೀದೇವಿ ಕುಳೇನೂರ್ ದ.ರಾ.ಬೇಂದ್ರೆಯವರ ನಾಕು ನಾಕೇ ತಂತಿ, ರುತ್ವಿಕ್ ಕೆ.ಎಸ್.ನರಸಿಂಹಸ್ವಾಮಿಯವರ ನಿನ್ನ ಪ್ರೇಮದ ಪರಿಯ ಗೀತೆಯನ್ನು ಸುಮಧುರವಾಗಿ ಹಾಡಿ ಸಭಿಕರನ್ನು ರಂಜಿಸಿದರು.

- Advertisement -
- Advertisement -

Latest News

ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಗ್ರಾಮ ಆಂದೋಲನಕ್ಕೆ ಚಾಲನೆ

ಮೂಡಲಗಿ : ಕಳೆದ ಶನಿವಾರದಂದು ಗೋಸಬಾಳದ ಸರಕಾರಿ ಕೆ.ಹೆಚ್.ಪಿ.ಎಸ್ ಮತ್ತು ಉನ್ನತೀಕರಿಸಿದ ಪ್ರೌಢ ಶಾಲೆಯಲ್ಲಿ ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ವತಿಯಿಂದ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group