- Advertisement -
ಸಿಂದಗಿ: ವಿಜಯಪುರ ಲೋಕಸಭೆ ಚುನಾವಣೆ ಪ್ರಚಾರ ಪ್ರಯುಕ್ತವಾಗಿ ಸಿಂದಗಿ ಮತಕ್ಷೇತ್ರಕ್ಕೆ ಬಿಜೆಪಿ ಸ್ಟಾರ ಪ್ರಚಾರಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬುಧವಾರ ಮದ್ಯಾಹ್ನ 3 ಗಂಟೆಗೆ ಆಗಮಿಸಿ ರೋಡ ಶೋ ಮೂಲಕ ಪ್ರಚಾರ ಮಾಡುವವರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷ ಆರ್ ಎಸ್ ಪಾಟೀಲ್ ಕೂಚುಬಾಳ ಮಾಜಿ ಶಾಸಕರಾದ ರಮೇಶ್ ಬಾ ಭೂಸನೂರ ಸಿಂದಗಿ ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ್ ಡಂಬಳ ಹಾಗೂ ಮಂಡಲದ ಪ್ರಭಾವಿಗಳಾದ ಅನಿಲ್ ಜಮಾದಾರ್ ಗುರು ತಳವಾರ್, ಸಿದ್ದರಾಮ ಆನಗೊಂಡ, ಅಶೋಕ್ ವಾರದ, ಈರಣ್ಣ ರಾವೂರ್ ಹೀಗೆ ಹಲವಾರು ಮುಖಂಡರು ಉಪಸ್ಥಿತ ಇರುವವರು ಆದಕಾರಣ ಸಿಂದಗಿ ಮತಕ್ಷೇತ್ರದ ಎಲ್ಲಾ ಬಿಜೆಪಿ ಕಾರ್ಯಕರ್ತರು ಈ ಕಾರ್ಯಕ್ರಮಕ್ಕೆ ತಪ್ಪದೇ ಆಗಮಿಸುವಂತೆ ಬಿಜೆಪಿ ಪತ್ರಿಕಾ ಮಾಧ್ಯಮದ ಸಂಚಾಲಕ ಸಿದ್ದಲಿಂಗಯ್ಯ ಹಿರೇಮಠ ವಿನಂತಿಸಿದ್ದಾರೆ.