ಸಿಂದಗಿ: ಮೇ 7 ರಂದು ಲೋಕಸಭಾ ಚುನಾವಣೆ ಪ್ರಯುಕ್ತ ತಾಲೂಕಿನ ಬಂದಾಳ ಗ್ರಾಮದ ಮತದಾನ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಗ್ರಾಮಮಟ್ಟದ ಮತದಾನದ ಅಧಿಕಾರಿಗಳು ಮುಂದಾಗಬೇಕು ಎಂದು ಗ್ರಾಮ ಆಡಳಿತಾಧಿಕಾರಿ ಕುಮಾರಿ ಎಸ್ ಆಯ್ ಮೋರೆ ಹೇಳಿದರು.
ತಾಲೂಕಿನ ಬಂದಾಳ ಗ್ರಾಮದ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಎರಡು ಮತದಾನ ಕೇಂದ್ರಗಳ ಪರಿಶೀಲನೆ ಮಾಡಿ ಸಂಬಂಧಪಟ್ಟ ಚುನಾವಣೆ ಗ್ರಾಮಮಟ್ಟದ ಅಧಿಕಾರಿಗಳೊಂದಿಗೆ ಅವರು ಭಾಗವಹಿಸಿ ಮಾತನಾಡಿ ಈಗಾಗಲೇ ಚುನಾವಣೆಗೆ ಅಗತ್ಯ ಸಿದ್ದತೆ ಜಿಲ್ಲಾ ಹಾಗೂ ತಾಲೂಕು ಆಡಳಿತ ನಡೆಸಲಾಗುತ್ತದೆ ಅದರಂತೆ ಗ್ರಾಮ ಮಟ್ಟದ ಮತದಾನ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಬೇಕು .ಬೇಸಿಗೆ ಇರುವುದರಿಂದ ಕೇಂದ್ರಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಶೌಚಗೃಹ ವ್ಯವಸ್ಥೆ ವಿದ್ಯುತ್ ಸೌಲಭ್ಯ ಪೀಠೋಪಕರಣಗಳ ವ್ಯವಸ್ಥೆ ಮಾಡಬೇಕು ಹಾಗೂ ಎಲ್ಲೆಲ್ಲಿ ದುರಸ್ತಿ ಮಾಡುವದು ಶಾಲೆಯ ಮುಖ್ಯ ಶಿಕ್ಷಕರು ತಿಳಿಸಬೇಕು .ಮತದಾನ ಕೇಂದ್ರದಲ್ಲಿ ತೊಂದರೆ ಇದ್ದರೆ ಶೀಘ್ರದಲ್ಲೇ ಮುಗಿಸಬೇಕು. ನಮ್ಮ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಾವು ಎಲ್ಲರು ನಡೆಯಬೇಕು ಎಂದರು.
ಬಂದಾಳ ಶಾಲೆಯ ಮುಖ್ಯ ಗುರು ನಿಂಗನಗೌಡ ಪಾಟೀಲ, ಶಿಕ್ಷಕ ಬಸವರಾಜ ಅಗಸರ ಹಾಗೂ ಮತದಾನ ಕೇಂದ್ರದ ಇತರೆ ಸಿಬ್ಬಂದಿ ವರ್ಗದವರು ಇದ್ದರು.