ಸಿಂದಗಿ; ಉತ್ತಮ ಸಮಾಜಕ್ಕಾಗಿ ತನ್ನ ಕುಟುಂಬಕ್ಕಾಗಿ ತನ್ನ ಸ್ವಹಿತಾಸಕ್ತಿಯಿಂದ ವಿವೇಚನಾ ಶಕ್ತಿಯಿಂದ ನಿಷ್ಪಕ್ಷಪಾತವಾಗಿ ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಸಿಎಂ ಮನಗೂಳಿ ಕಲಾ ವಾಣಿಜ್ಯ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಬಿ ಜಿ ಪಾಟೀಲ್ ಹೇಳಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸದೃಢ ದೇಶದ ಭವಿಷ್ಯಕ್ಕಾಗಿ ಯಾವುದೇ ಜಾತಿ ಧರ್ಮ ಮತ ಎನ್ನದೆ ಯೋಗ್ಯರಿಗೆ ಪ್ರತಿಯೊಬ್ಬರು ಚುನಾವಣೆಯಲ್ಲಿ ಮತದಾನ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶಿವಲಿಂಗ ಹಳೆಮನಿ ಮಾತನಾಡಿ, ಅವರು ಚುನಾವಣೆಗಳು ಪ್ರಜಾಪ್ರಭುತ್ವದ ಹಬ್ಬವಾಗಿದ್ದು ಪ್ರತಿಯೊಬ್ಬರು ತಮ್ಮ ಮತ ಸರಿಯಾಗಿ ಬುದ್ಧಿಯಿಂದ ಮತ ಚಲಾಯಿಸಬೇಕು ಪ್ರತಿಯೊಬ್ಬ ಮತದಾನದಿಂದ ದೂರ ಉಳಿಯದೆ ಮತ ಚಲಾಯಿಸಿ ನೆರೆಹೊರೆಯವರಿಗೂ ತಪ್ಪದೇ ಮತ ಚಲಾಯಿಸುವಂತೆ ತಿಳಿ ಹೇಳಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಇ ಎಲ್ ಸಿ ಎಂಬ್ಯಾಸಿಡರ್ ರವಿಕುಮಾರ್ ಹೊಸಮನಿ ಎಲ್ಲರಿಗೂ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು ಈ ಕಾರ್ಯಕ್ರಮದಲ್ಲಿ ಎಸ್ ಪಿ ತಳವಾರ, ಆರ್ ಎಸ್ ಗಾಯಕವಾಡ ಭಾಗವಹಿಸಿದ್ದರು.
ಶೋಭಾ ನಾಯ್ಕೋಡಿ ನಿರೂಪಿಸಿದರು ಆರ್ ಎಸ್ ಗಾಯಕವಾಡ ವಂದಿಸಿದರು