ದಾಸರಾಯರ ಕೃತಿ ಸಂಪದಕ್ಕೆ ಜ್ಞಾನಪೀಠ ಪ್ರಶಸ್ತಿ ಸಿಗುವ ಎಲ್ಲ ಅರ್ಹತೆಗಳಿವೆ 

Must Read
 ಹರಿದಾಸ ಸಂಪದ ಸಂಸ್ಥಾಪಕ ಮಧುಸೂಧನ್ ವಿ. ರಾವ್ ಅಭಿಮತ
ಮಾನವಿಯ ಜಗನ್ನಾಥ ದಾಸರ ಅಂತರಂಗ ಭಕ್ತರಾದ ಬಲ್ಲಟಗಿ ಗುಂಡಾಚಾರ್ಯರ(ಶ್ರೀ ಶ್ಯಾಮಸುಂದರದಾಸರ) ಪುಣ್ಯದಿನ ಅಂಗವಾಗಿ ಬೆಂಗಳೂರು ಮತ್ತಿಕೆರೆ ರಾಯರ ಮಠದಲ್ಲಿ ದಾಸವಾಣಿ ಕರ್ನಾಟಕ ಆಯೋಜಿಸಿದ್ದ ಕಾರ್ಯಕ್ರಮವನ್ನು ಅಂಕಣಕಾರ ,ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಡಾ. ಗುರುರಾಜ್ ಪೋಶೆಟ್ಟಿಹಳ್ಳಿ ದೀಪ ಬೆಳಗಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹರಿದಾಸ ಸಂಪದ ಟ್ರಸ್ಟ್ ಸಂಸ್ಥಾಪಕ ಮಧುಸೂಧನ್ ವಿ ರಾವ್ ಮಾತನಾಡುತ್ತ,  ಕವಿಗಳಾಗಿದ್ದ ಶ್ಯಾಮಸುಂದರದಾಸರು ಭಕ್ತಿರಸಪೂರಿತವಾದ ಅನೇಕ ಕೃತಿಗಳನ್ನು ತಮ್ಮ ಶಬ್ದ ಚಮತ್ಕಾರದಿಂದ ರಚಿಸಿ ವಾಙ್ಮಯ ಸೇವೆಯನ್ನು ಮಾಡಿದ್ದಾರೆ.
ಅತ್ಯಂತ ಸರಳ ರೀತಿಯಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಿ ಅಸಾಮಾನ್ಯ ವ್ಯಕ್ತಿತ್ವ ಹೊಂದಿ ದೈವಾಂಶ ಸಂಭೂತರಾಗಿ ,ಅವಧೂತರಾಗಿ ಸದ್ದಿಲ್ಲದೆ  ಸಾಮಾಜಿಕ ಕ್ರಾಂತಿಯನ್ನು ಉಂಟು ಮಾಡಿದ  ಶ್ರೀ ಶ್ಯಾಮಸುಂದರದಾಸರು  (೧೯೦೩-೧೯೫೬).  ಪ್ರಾಸಬದ್ಧವಾದ ರಚನೆಗಳು, ಗೂಢಾರ್ಥಗಳುಳ್ಳ ಪದಗಳು ಇವರ ರಚನೆಯ ವೈಶಿಷ್ಟ್ಯ. ಪುರಂದರ ದಾಸರಾದಿಯಾಗಿ ದಾಸರ ಕೃತಿಗಳನ್ನು ಅಧ್ಯಯನ ಮಾಡುವ ಮೊದಲು ಇವರ ಕೃತಿಗಳನ್ನು ಅಧ್ಯಯನ ಮಾಡಿದರೆ ಉನ್ನತ ವಿಚಾರಗಳು ತಿಳಿಯಲ್ಪಡುತ್ತವೆ .ಇವರ ಕೃತಿ ಸಂಪದಕ್ಕೆ ಜ್ಞಾನ ಪೀಠ ಪ್ರಶಸ್ತಿ ಸಿಗಬೇಕಾದ ಎಲ್ಲ ಅರ್ಹತೆಗಳಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೆ ಸಂದರ್ಭದಲ್ಲಿ ಮಂಗಳಂಗಾ ಹರಿ ವಿಠ್ಠಲ (ಡಾ. ಎನ್ ಜಿ. ವಿಜಯಲಕ್ಷ್ಮಿ ರಾಘವೇಂದ್ರ ಆಚಾರ್ಯ )ವಿರಚಿತಾ ದೇವರನಾಮಗಳ ಧ್ವನಿ ಸುರಳಿಯನ್ನು ಲೋಕಾರ್ಪಣೆಗೊಳಿಸಲಾಯಿತು. ದಾಸವಾಣಿ ಕರ್ನಾಟಕದ ಜೈರಾಜ್ ಕುಲಕರ್ಣಿ, ಹಿರಿಯ ಸದಸ್ಯ ಜಿ. ಎಸ್ ಕೃಷ್ಣಮೂರ್ತಿ, ಮತ್ತು ಗಾಯಕಿ ಮಾನಸ ಕುಲಕರ್ಣಿ ಉಪಸ್ಥಿತರಿದ್ದರು.
Latest News

ಸ್ವರ ಗಾರುಡಿಗ ಸಿದ್ಧರಾಮ ಜಂಬಲದಿನ್ನಿ

ಹೈದ್ರಾಬಾದ ಕರ್ನಾಟಕದ ಇನ್ನೊಂದು ಅಪೂರ್ವದ ಕಲಾವಿದ ಶ್ರೇಷ್ಠ ಗಾಯಕ ಸಿದ್ಧರಾಮ ಜಂಬಲದಿನ್ನಿ ನಾಡು ನುಡಿ ಸಂಸ್ಕೃತಿಯ ಹಿರಿಯ ರಾಯಭಾರಿ . ರಾಯಚೂರಿನ ಬಿಸಿಲು ಬೇಗೆಯಲ್ಲಿ ಹಿಂದುಸ್ತಾನ್...

More Articles Like This

error: Content is protected !!
Join WhatsApp Group