spot_img
spot_img

ಮಂಡ್ಯ ಸಾಹಿತ್ಯ ಸಮ್ಮೇಳನ ಲಾಂಛನ ರೂವಾರಿ ಹಾಸನದ ಶಂಕರಪ್ಪ ಕೆ. ಎನ್.

Must Read

spot_img
- Advertisement -

ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮೇಳನದ ಲಾಂಛನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಬಿಡುಗಡೆ ಮಾಡಿದರು.

ಲಾಂಛನ ಸಿದ್ದಪಡಿಸಿದ ಶಂಕರಪ್ಪ ಕೆ ಎನ್ ಜಿ.ಜೆ.ಸಿ ಪ್ರೌಢಶಾಲಾ ವಿಭಾಗ ನಗರನಹಳ್ಳಿ, ಹೊಳೆನರಸೀಪುರ ತಾ, ಹಾಸನ ಜಿಲ್ಲೆ, ಇಲ್ಲಿ ಚಿತ್ರಕಲಾ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಹಾಸನ, ಮೈಸೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಲಾಂಛನ ಮಾಡಿದ ಕೀರ್ತಿ ಇವರದು. ವಿಶ್ವ ವಿಖ್ಯಾತ ಮಹಾ ಮಸ್ತಕಾಭಿಷೇಕದ ಲಾಂಛನವನ್ನು ಮಾಡಿದವರು. ಹೆಮ್ಮೆಯ ಹಾಸನದ ಕಲಾವಿದರು.

ಇವರು ಈ ಲಾಂಛನದಲ್ಲಿ ಮಂಡ್ಯ! – ಕಂಡ್ಯಾ!! ಎಂದು ಕೇಳುವ ಜನ ಬಹಳ ಇದ್ದಾರೆ. ಏಕೆಂದರೆ ಇದು ಪುತಿನ, ಕೆ.ಎಸ್.ನ., ಆರ್ಯಾಂಬ, ಮೂರ್ತಿರಾಯರು, ನಾಗರತ್ನಮ್ಮ, ಅವರಂತಹ ನುಡಿ ಮಹತ್ತೆಯನ್ನು ಮತ್ತಷ್ಟು ಎತ್ತರಕ್ಕೇರಿಸಿದ ಕವಿ, ನಾಟಕಕಾರ, ಅಭಿನಯ ಚತುರರು ಉದಿಸಿದ ನೆಲ ಯದುಶೈಲದ ನಾಡು. ಕಸ ಬಳಸಿ ಕಾಗದ ನೀಡಿದ ತಾಣ. ಕಬ್ಬಿನ ಸಿಹಿಯ, ಬೆಲ್ಲದ ರುಚಿಯ ಸಕ್ಕರೆ ಸವಿಯ ಹರಡಿದ ಬೀಡು. ಕಾವೇರಿಯ ಜೀವ ಜಲದ ಸದ್ಬಳಕೆ ಮಾಡ್ತಾ ಮತ್ತವಳ ರಕ್ಷಣೆಗೂ ಕಟಿಬದ್ಧವಾದ ಜನಗಣ ರೈತ ಶಕ್ತಿ ಕೇಂದ್ರಿತ ತಾಣ ‘ಸತ್ಯಾಗ್ರಹ’ಕ್ಕೆ ಪುಷ್ಟಿಕೊಟ್ಟ ನೆಲ, ಮನೋಹರ ಪಕ್ಷಿ ಕಾಶಿಯ ನೆಲೆವೀಡು ವಿಶ್ವೇಶ್ವರಯ್ಯನವರನ್ನು ನೆನಪಿಸುವ . ಕೃಷ್ಣರಾಜ ಒಡೆಯರ ಅಭಿಧಾನದ ಲೋಕ ವಿಖ್ಯಾತ ಕೃಷ್ಣರಾಜಸಾಗರ ಕನ್ನಡ ಸಾಹಿತ್ಯ ಪರಿಷತ್ತನ್ನು, ಮಂಡ್ಯವನ್ನು ಸ್ಥಾಪಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್‌ರನ್ನೂ ಒಳಗೊಂಡು ಕಬ್ಬಿನಿಂದ ಅಲಂಕೃತವಾಗಿ, ಬೆಳೆಯುವ ಬೆಳೆ ರಾಗಿ, ಬತ್ತ, ರೈತರನ್ನೊಳಗೊಂಡ ಲಾಂಛನ. ಇದೆಲ್ಲದರ ಪ್ರತಿರೂಪ ಈ ಲಾಂಛನ

- Advertisement -

ಶಂಕರಪ್ಪ ನವರ ಲಾಂಛನದಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ಇದೆಲ್ಲವನ್ನೂ ಕಣ್ಮನ ತುಂಬಿಕೊಳ್ಳಬಹುದು.. ಈ ಸುಂದರ ಲಾಂಛನವನ್ನು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ. ವಿಧಾನ ಪರಿಷತ್ತಿನ ಸದಸ್ಯ ದಿನೇಶ್ ಗೊಳಿಗೌಡ, ಕಸಾಪ ಅಧ್ಯಕ್ಷ ಮಹೇಶ್ ಜೋಶಿ, ಕನ್ನಡ ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಉಪಸ್ಥಿತರಿದ್ದರು.

ಗೊರೂರು ಅನಂತರಾಜು
ಹಾಸನ
99449462879

- Advertisement -
- Advertisement -

Latest News

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group