spot_img
spot_img

ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಎನ್.ಎಸ್.ಎಸ್. ಶಿಬಿರ ಸಹಕಾರಿ: ಡಾ. ಸಂಜೀವ ತಳವಾರ

Must Read

spot_img
- Advertisement -

ಮೂಡಲಗಿ: ವಿದ್ಯಾರ್ಥಿಗಳು ಸೇವಾ ಮನೋಭಾವ ರೂಢಿಸಿಕೊಳ್ಳಲು ಮತ್ತು ತಮ್ಮ ಬದುಕನ್ನು ಸಾರ್ಥಕ ಪಡಿಸಿಕೊಳ್ಳಲು ಎನ್‌.ಎಸ್‌.ಎಸ್‌ ವಾರ್ಷಿಕ ವಿಶೇಷ ಶಿಬಿರಗಳು ಉತ್ತಮ ಅವಕಾಶ ಒದಗಿಸಿಕೊಡುತ್ತವೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬೆಳಗಾವಿ ಜಿಲ್ಲೆಯ ಪ್ರಭಾರಿ ಸಂಯೋಜನಾಧಿಕಾರಿ ಡಾ. ಸಂಜೀವ ತಳವಾರ ತಿಳಿಸಿದರು.

ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ದತ್ತು ಗ್ರಾಮ ರಾಜಾಪೂರದಲ್ಲಿ ಹಮ್ಮಿಕೊಂಡಿರುವ ೨೦೨೩-೨೪ನೇ ಸಾಲೀನ ವಾರ್ಷಿಕ ವಿಶೇಷ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಎನ್.ಎಸ್.ಎಸ್. ಸಹಕಾರಿಯಾಗಿದೆ. ನಾಯಕತ್ವ ಗುಣ, ಸಮಯದ ಸದುಪಯೋಗ, ಸಮಾಜಸೇವೆ, ಸಹಬಾಳ್ವೆ ಮುಂತಾದ ಮೌಲ್ಯಗಳನ್ನು ಬೆಳಸುತ್ತದೆ ಎಂದರು.

- Advertisement -

ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ  ಬಸಗೌಡ ಶಿ. ಪಾಟೀಲ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಬಹಳ ಮುಖ್ಯವಾಗಿದೆ. ಓದಿನ ಜೊತೆಗೆ ಸಮಾಜದೊಂದಿಗೆ ಬೆರೆಯಬೇಕು ಆಗ ನೋವು ನಲಿವುಗಳು ನಮಗೆ ಅರ್ಥವಾಗುತ್ತವೆ. ಆ ಮೂಲಕ ಪ್ರತಿಯೊಬ್ಬರು ಉತ್ತಮ ನಾಗರಿಕರಾಗಿ ಹೊರಹೊಮ್ಮಬೇಕು ಎಂದು ಕರೆ ನೀಡಿದರು.

ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಾನಂದ ಕಮತಿ ಮಾತನಾಡಿ, ಸ್ವಯಂಸೇವಕರು ಶ್ರದ್ಧೆ, ಪ್ರಾಮಾಣಿಕತೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜೀವಿತದ ಸ್ವಲ್ಪ ಸಮಯವನ್ನು ಸಮಾಜಸೇವೆಯಲ್ಲಿ ಕಳೆಯಬೇಕು ಆಗ ಜನ್ಮ ಸಾರ್ಥಕವಾಗುತ್ತದೆ ಎಂದರು.

ಪ್ರಾಚಾರ್ಯ ಡಾ. ಸುರೇಶ ಹನಗಂಡಿ ಪ್ರಾಸ್ತಾವಿಕ ಮಾತುಗಳನ್ನಾಡಿ ಶಿಬಿರದ ಧೇಯೋದ್ದೇಶಗಳನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜಾಪೂರ ಗ್ರಾಮ ಪಂಚಾಯತ ಚೇರಮನ್ನರಾದ ಶ್ರೀಮತಿ ನಾಗವ್ವ ನಾಗಪ್ಪ ಕಟ್ಟಿಕಾರ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷೆ ಗಂಗವ್ವ ಮಹಾದೇವ ವಗ್ಗ, ಸರಕಾರಿ ಪ್ರೌಢ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಪ್ರಕಾಶ ಹುನ್ನೂರ,‌ ಎನ್.ಎಸ್.ಎಸ್. ಕೋಶದ ಕಛೇರಿ ಸಿಬ್ಬಂದಿ ಪ್ರವೀಣ, ವಿಶ್ವನಾಥ ಸಣ್ಣಕ್ಕಿ, ಅಧ್ಯಾಪಕರು ಸ್ವಯಂಸೇವಕರು ಹಾಜರಿದ್ದರು.

- Advertisement -

ಡಾ. ಕೆ.ಎಸ್.ಪರವ್ವಗೋಳ ನಿರೂಪಿಸಿದರು, ವೀಣಾ ಕಂಕಣವಾಡಿ ಪ್ರಾರ್ಥಿಸಿದರು, ಕಾರ್ಯಕ್ರಮಾಧಿಕಾರಿ ಶಂಕರ ನಿಂಗನೂರ ಸ್ವಾಗತಿಸಿದರು, ಸಹ ಕಾರ್ಯಕ್ರಮಾಧಿಕಾರಿ ಡಿ.ಎಸ್.ಹುಗ್ಗಿ ವಂದಿಸಿದರು.

- Advertisement -
- Advertisement -

Latest News

ಅವಿರತ ಕಲಾಸೇವೆ ಮುಂದೊಮ್ಮೆ ಗುರುತಿಸಲ್ಪಡುತ್ತದೆ – ಪತ್ರಕರ್ತ ಪತ್ತಾರ

ಮೂಡಲಗಿ :ಕಲೆ ಎಂಬುದು ಯಾರ ಸ್ವತ್ತಲ್ಲ, ಸ್ವಾರ್ಥವಿಲ್ಲದ ಅವಿರತ ಕಲಾ ಸೇವೆ ಮುಂದೊಂದು ದಿನ ಗುರುತಿಸಲ್ಪಟ್ಟು, ಪದವಿ ಸನ್ಮಾನಗಳು ತಾನಾಗಿಯೇ ಅರಸಿ ಬರುತ್ತವೆ ಎಂದು ಪತ್ರಕರ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group