ಬೀದರ – ಗಡಿ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ವಡಗಾಂವ್ (ದೇ) ಸರ್ಕಾರಿ ಶಾಲೆಯ ಅವ್ಯವಸ್ಥೆ ಕಣ್ಣಾರೆ ಕಟ್ಟುವಂತಿದ್ದು,
ಕನ್ನಡ ಹಾಗೂ ಉರ್ದು ಮಾಧ್ಯಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮಸ್ಯೆ ಕೇಳೋರು ಯಾರು ಎನ್ನುವಂತಾಗಿದೆ
ಉಸ್ತುವಾರಿ ಸಚಿವರು, ಹಾಗೂ ಶಿಕ್ಷಣ ಸಚಿವರು ನೋಡಲೇಬೇಕಾದ ಸ್ಟೋರಿ ಇದು…..
200 ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಯಲ್ಲಿ ಈಗ ಡೆಂಗ್ಯೂ ಆತಂಕ ಮನೆ ಮಾಡಿದೆ.ಕನ್ನಡ ಮಾಧ್ಯಮದ 1-8 ತರಗತಿ ಹಾಗು ಉರ್ದು ಮಾದ್ಯಮದ 1-7 ನೇ ತರಗತಿವರಗೆ ಇರುವ ಶಾಲೆಯ ಆವರಣದಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ನೀರು ನಿಲ್ಲುತ್ತಿದೆ. ಮಳೆ ನೀರು ನಿಂತಲ್ಲೆ ನಿಲ್ಲುತ್ತಿರುವ ಪರಿಣಾಮ, ಸೊಳ್ಳೆಗಳ ತಾಣವಾದ ಶಾಲಾ ಆವರಣ. ಮಕ್ಕಳು ಕೆಸರು ಗದ್ದೆಯಲ್ಲೇ ಊಟ, ಕೆಸರು ಗದ್ದೆಯಲ್ಲೇ ಆಟವಾಡುವಂತಾಗಿದೆ.
ಈಗ ರಾಜ್ಯಾದ್ಯಂತ ಡೆಂಗ್ಯೂ ಆತಂಕ ಇದ್ದರೂ ಈ ಶಾಲೆಯತ್ತ ತಿರುಗಿ ಕೋಡ ನೋಡದ ಅಧಿಕಾರಿಗಳು ಮಳೆ ನೀರು ನಿಲ್ಲಂದಂತೆ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ, ಕ್ರಮಕ್ಕೆ ಮುಂದಾಗದ ಗ್ರಾಮ ಪಂಚಾಯತಿ ಹಾಗೂ ಶಿಕ್ಷಣ ಇಲಾಖೆ ವಿರುದ್ದ ಗ್ರಾಮಸ್ಥರ ಆಕ್ರೋಶ ಕೂಡ ವ್ಯಕ್ತಪಡಿಸಿದ್ದಾರೆ
ಮಕ್ಕಳಿಗೆ ಡೆಂಗ್ಯೂ ಹರಡುವುದಕ್ಕಿಂತ ಮುಂಚೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳುತ್ತಾರೆಯೋ ಇಲ್ಲವೋ ಕಾದು ನೋಡಬೇಕಾಗಿದೆ.
ನಂದಕುಮಾರ ಕರಂಜೆ, ಬೀದರ