- Advertisement -
ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ ಇವರಿಂದ ಪ್ರತೀ ವರ್ಷದಂತೆ ನಡೆಯುವ ೪ ನೇ ಕನ್ನಡ ನುಡಿವೈಭವ ಕಾರ್ಯಕ್ರಮದಲ್ಲಿ ಮಧುನಾಯ್ಕ ಲಂಬಾಣಿ ಸಂಪಾದಕತ್ವದ ಕೃತಿ “ಹೂ ಮುಡಿದ ಜಡೆ”ಯ ಬಿಡುಗಡೆಗೆ ಕರ್ನಾಟಕ ಬಂಜಾರ ಭಾಷಾ ಅಕಾಡೆಮಿಯ ಅಧ್ಯಕ್ಷರಾದ ಡಾ.ಎ ಆರ್ ಗೋವಿಂದಸ್ವಾಮಿಯವರು ಆಗಮಿಸಲಿದ್ದಾರೆ.
ಇವರು ಚಲನ ಚಿತ್ರ ನಟರು, ನಿರ್ದೇಶಕರು, ಸಾಹಿತಿಗಳು ಖ್ಯಾತ ರಂಗಭೂಮಿ ಕಲಾವಿದರು ಆಗಿದ್ದು ಅನೇಕ ಪ್ರಮುಖ ಕೃತಿಗಳನ್ನು ರಚಿಸಿ ನಾಡು ನುಡಿಯ ಸೇವೆ ಮಾಡಿದ್ದಾರೆ. ಹೂ ಮುಡಿದ ಜಡೆ ಕೃತಿ ಲೋಕಾರ್ಪಣೆಗೆ ದಿನಾಂಕ-೨೫.೦೮.೨೦೨೪ ಭಾನುವಾರ ದಾವಣಗೆರೆಯಲ್ಲಿ ನಡೆಯುವ ೪ ನೇ ಕನ್ನಡ ನುಡಿವೈಭವ ಕಾರ್ಯಕ್ರಮಕ್ಕೆ ಆಗಮಿಸಿ ಪುಸ್ತಕ ಬಿಡುಗಡೆ ಮಾಡುವರು ಎಂದು ಕರ್ನಾಟಕ ರಾಜ್ಯ ಬರಹಗಾರರ ಸಂಘದ ಸಂಸ್ಥಾಪಕ ಅಧ್ಯಕ್ಷ ಮಧುನಾಯ್ಕ ಲಂಬಾಣಿಯವರು ತಿಳಿಸಿದ್ದಾರೆ.