spot_img
spot_img

ಜಾನಪದ ಗಾರುಡಿಗ ಡಾ. ಸಿ.ಕೆ. ನಾವಲಗಿ

Must Read

spot_img
- Advertisement -

ಕರ್ನಾಟಕದ ಅಪೂರ್ವ ಜಾನಪದ ವಿದ್ವಾಂಸ ಡಾ. ಚನ್ನಬಸವ ನಾವಲಗಿ, ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತ್ತೂರ ತಾಲ್ಲೂಕಿನ ಬಸರಕೋಡದ ಅಪ್ಪಟ ಗ್ರಾಮೀಣ ಪ್ರತಿಭೆ: ಬೋಧಕ, ಬರಹಗಾರ- ವಾಗ್ಮಿ ಯಾಗಿ ತಮ್ಮ ಬಹುಮುಖ ವ್ಯಕ್ತಿ ವೈಶಿಷ್ಟ್ಯವನ್ನು ಕನ್ನಡ ನಾಡಿನ ತುಂಬ ಮೆರೆದಿದ್ದಾರೆ.

ವಿದ್ಯಾರ್ಥಿ ದೆಸೆಯಿಂದಲೇ ಬರೆವಣಿಗೆಯನ್ನು ರೂಢಿಸಿಕೊಂಡ ಪ್ರೊ. ನಾವಲಗಿ ಅವರ ಜಾನಪದ ಸಂಶೋಧನೆ, ವಚನ ಸಾಹಿತ್ಯ ವಿವೇಚನೆ-ವಿಶ್ಲೇಷಣೆ, ಕನ್ನಡ ಸಾಹಿತ್ಯದ ವಿಚಾರ, ವಿಮರ್ಶೆ ಕುರಿತು ಹಲವಾರು ಕೃತಿಗಳು ಪ್ರಕಟವಾಗಿವೆ. ನೂರಾರು ಲೇಖನಗಳು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವಿಶ್ವವಿದ್ಯಾಲಯ ಮಟ್ಟದ, ರಾಜ್ಯ ಮಟ್ಟದ, ರಾಷ್ಟ್ರಮಟ್ಟದ ವಿಚಾರ ಸಂಕಿರಣ, ಸಮ್ಮೇಳನಗಳಲ್ಲಿ ಭಾಗವಹಿಸಿ, ವೈಚಾರಿಕ, ಸಂಶೋಧನಾತ್ಮಕ ಪ್ರೌಢ ಪ್ರಬಂಧಗಳನ್ನು ಮಂಡಿಸಿ ವಿದ್ವಾಂಸರ ಗಮನ ಸೆಳೆದಿದ್ದಾರೆ. ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಡಾ. ನಾವಲಗಿ ಅವರು ಬೆಳಗಾವಿ ಜಿಲ್ಲೆಯ ಚೆ.ಕಿತ್ತೂರು ತಾಲ್ಲೂಕಿನ ಬಸರಕೋಡ ಗ್ರಾಮದಲ್ಲಿ 1 ಅಗಸ್ಟ್ 1956 ರಂದು ಜನಿಸಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರು ಬಸರಕೋಡ ಹಾಗೂ ದೇವಗಾಂವಿಯಲ್ಲಿ ಪೂರೈಸಿದ್ದಾರೆ. ಕಿತ್ತೂರಿನ ಶ್ರೀ ಗುರುಸಿದ್ದೇಶ್ವರ ಹೈಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣವನ್ನು ಅಭ್ಯಸಿಸಿ, ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಸಮಾಜಶಾಸ್ತ್ರದಲ್ಲಿ 1981 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠ ಧಾರವಾಡದಲ್ಲಿ, 1982 ರಲ್ಲಿ ಬಸವ ಅಧ್ಯಯನ ಪೀಠದಲ್ಲಿ ಡಿಪ್ಲೋಮಾ ಪದವಿ ಗಳಿಸಿದ್ದಾರೆ. 1992 ರಲ್ಲಿ “ವಚನ ಸಾಹಿತ್ಯದಲ್ಲಿ  ಬಿ.ಎ. ಪದವಿ ಜಾನಪದ ಅಂಶಗಳು’ ಒಂದು ಅಧ್ಯಯನ ವಿಷಯದಲ್ಲಿ ಪಿ.ಎಚ್.ಡಿ. ಪದವಿ ಪಡೆದುಕೊಂಡಿದ್ದಾರೆ.

- Advertisement -

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಡಾ. ಸಿ.ಕೆ.ನಾವಲಗಿ ಅವರ ಕೊಡುಗೆ ಅನನ್ಯವಾದುದು. ಸುಮಾರು 70, ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಜಾನಪದ ಸ್ಪಂದನ, ಬೇಂದ್ರೆಯವರ ಕಾವ್ಯದ ಮೇಲೆ ಜಾನಪದ ಪ್ರಭಾವ, ಗಾದೆಗಳಲ್ಲಿ ಹಾಸ್ಯ, ಗ್ರಾಮೀಣ ಗ್ರಹಿಕೆ, ವಚನ ಸಾಹಿತ್ಯ ಮತ್ತು ಚಾನಪದ, ಜನಪದ ಕಥನಗೀತ ಸಂಚಯ, ಜಾನಪದ ಚಿಂತನ, ಶರಣ ಸಂಗಾತ, ಜಾನಪದ ಸಮಾಲೋಕ, ವಿಮರ್ಶನ ಗ್ರಹಿಕೆ ಮುಂತಾದ ವಿಚಾರ-ವಿಮರ್ಶೆ, ಸಂಪಾದನೆ, ಸಂಶೋಧನೆಗೆ ಸಂಬಂಧಿಸಿದ ಕೃತಿಗಳನ್ನು ರಚಿಸಿದ್ದಾರೆ. ಹಲವು ಸಂಪಾದನ ಕೃತಿಗಳನ್ನು ರಚಿಸಿದ್ದಾರೆ. ‘ದಿಕ್ಕೂಚಿ’ ವೈಚಾರಿಕ ಕೃತಿಗೆ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಜಿಲ್ಲೆಯ ಶ್ರೇಷ್ಠ ಕೃತಿ ಪ್ರಶಸ್ತಿ ಲಭಿಸಿದೆ. ಹಾಗೆಯೇ ‘ಗ್ರಾಮೀಣ ಗ್ರಹಿಕೆ’ ಜಾನಪದ ಕೃತಿಗೆ ವಿಜಯಪುರ ಜಿಲ್ಲಾ ಜಾನಪದ ಸಂರಕ್ಷಣಾ ಪರಿಷತ್ತಿನ ಅತ್ಯುತ್ತಮ ಕೃತಿ ಪ್ರಶಸ್ತಿ ದೊರೆತಿದೆ. ಇವರ 2003ನೇ ಸಾಲಿನ ಕೃತಿ ‘ಜಾನಪದ ಸಮಾಲೋಕ’ಕ್ಕೆ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ‘ಸಿರಿಗನ್ನಡ ಪ್ರಶಸ್ತಿ’ ಹಾಗು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ‘ಅಕ್ಕಮ್ಮ ಗಿರಿಗೌಡ ರುದ್ರಪ್ಪ’ ದತ್ತಿ ಪ್ರಶಸ್ತಿ ಲಭಿಸಿದೆ. ಪ್ರೊ. ನಾವಲಗಿಯವರ ಅಪೂರ್ವ ಪ್ರತಿಭೆಯನ್ನು ಗುರುತಿಸಿದ ಬೆಂಗಳೂರು ದೂರದರ್ಶನ ಕೇಂದ್ರವು ‘ಚಂದನ ದೂರದರ್ಶನದ ಬೆಳಗು’ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಂದರ್ಶನ ಪಡೆದು 1 ಜನವರಿ 2005 ರಂದು ಪ್ರಸಾರ ಮಾಡಿದೆ.

ನಾವಲಗಿಯವರ ಆಳವಾದ ಅಧ್ಯಯನ, ವ್ಯಾಪಕವಾದ ಕ್ಷೇತ್ರ ಕಾರ್ಯ ವ್ಯವಸ್ಥಿತ ಚಿಂತನೆ. ವೈಜ್ಞಾನಿಕ ದೃಷ್ಟಿಕೋನ, ಅಧ್ಯಯನ ಶ್ರದ್ಧೆ, ನಿರೂಪಣ ಸಾಮರ್ಥ್ಯ ಹಾಗೂ ಅಭಿವ್ಯಕ್ತಿಯ ಪ್ರಾಮಾಣಿಕತೆಗಳು ಅವರ ಎಲ್ಲ ಕೃತಿಗಳಲ್ಲಿ ಮುಪ್ಪುರಿಗೊಂಡು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮೌಲಿಕ ಕೊಡುಗೆಗಳಾಗಿ ರೂಪಗೊಂಡಿವೆ. ನಾವಲಗಿ ಅವರ ಬರೆವಣಿಗೆ ಅದೆಂದಿಗೂ ಕುಂದದ ಶಕ್ತಿ, ನಿರಂತರ ಓದು, ಬರವಣಿಗೆ ಅವರ ಸಾಹಿತ್ಯ ಬದುಕಿನ ಜೀವಂತಿಕೆಯಾಗಿದೆ.

ಡಾ.ರಾಜು ಕಂಬಾರ
ಸಾಹಿತಿ- ಪತ್ರಕರ್ತರು, ಕೌಜಲಗಿ

- Advertisement -
- Advertisement -

Latest News

ಹಳಕಟ್ಟಿ ಭವನದಲ್ಲಿ ಶರಣ ಸಂಪ್ರದಾಯ ಮತ್ತು ಅದರ ಪ್ರಸ್ತುತತೆ ಕುರಿತು ಉಪನ್ಯಾಸ

ದಿ; 12  ರಂದು ರವಿವಾರ ಲಿಂಗಾಯತ ಸಂಘಟನೆ ವತಿಯಿಂದ ನಡೆದ ವಚನ ಪ್ರಾರ್ಥನೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಬೆಳಗಾವಿಯ ಅನುಭಾವಿ ಸಾಹಿತಿಗಳಾದ ಎಸ್ ಬಿ ಸೋಮಣ್ಣವರ...
- Advertisement -

More Articles Like This

- Advertisement -
close
error: Content is protected !!
Join WhatsApp Group