ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

Must Read

 

ಮಣ್ಣಿನಲ್ಲಿ ಕಲ್ಲಿನಲಿ ಕಾಷ್ಟದಲಿ ಲೋಹದಲಿ
ಮಾಡಿರುವ ಮೂರ್ತಿಗಳೆ ದೇವರೇನು ?
ಕಣ್ಣು ಕಿವಿ ಕೈಕಾಲು ಬಾಯಿ ಬುದ್ಧಿಗಳಿರುವ
ಮಾನವನೆ ಮಹದೇವ – ಎಮ್ಮೆತಮ್ಮ

ಶಬ್ಧಾರ್ಥ
ಕಾಷ್ಟ – ಕಟ್ಟಿಗೆ. ಲೋಹ – ಕಂಚು, ಹಿತ್ತಾಳೆ, ತಾಮ್ರ, ಚಿನ್ನ, ಬೆಳ್ಳಿ ಮುಂತಾದ ಧಾತು

ಮಣ್ಣು, ಕಲ್ಲು , ಕಟ್ಟಿಗೆ, ಲೋಹಗಳಿಂದ ಮಾಡಿರುವ ಮೂರ್ತಿಗಳು ದೇವರಲ್ಲ. ನಾವು ಅವುಗಳಲ್ಲಿಟ್ಟಿರುವ‌
ಭಕ್ತಿ,ಭಾವ, ನಂಬಿಗೆ, ವಿಶ್ವಾಸಗಳಿಂದ ನಮ್ಮಲ್ಲಿರುವ ದೇವ ಅನುಭವಕ್ಕೆ ಬರುತ್ತಾನೆ. ಅವು ದೇವನ ಅರಿವು ಪಡೆಯಲು
ಮಾಡಿಕೊಂಡ ಕುರುಹುಗಳು. ಆದರೆ ನೋಡುವ ಕಣ್ಣುಗಳು, ಕೇಳುವ ಕಿವಿಗಳು, ನಡೆದಾಡುವ ಕಾಲುಗಳು, ಕೆಲಸಮಾಡುವ ಕೈಯಿಗಳು ಮತ್ತು ಮಾತನಾಡುವ ಬಾಯಿ , ಯೋಚಿಸುವ
ಬುದ್ದಿಗಳಿರುವ ಮಾನವನೆ ನಿಜವಾದ‌ ಮಹದೇವ. ಅವರನ್ನು ಪ್ರೀತಿ, ವಿಶ್ವಾಸ, ಕರುಣೆ ಕನಿಕರದಿಂದ ಕಂಡರೆ ಆ ದೇವನು ಪ್ರೀತನಾಗುತ್ತಾನೆ. ಅದನ್ನು ಬಿಟ್ಟು ಅವರನ್ನು ಅಸಡ್ಡೆಯಿಂದ ಕಂಡರೆ ದೇವರು ದೂರಾಗುತ್ತಾನೆ. ಉಂಬ ಜಂಗಮ ಬಂದರೆ ನಡೆಯೆಂಬರು ಉಣ್ಣದಾ ಲಿಂಗಕ್ಕೆ ಬೋನ ಹಿಡಿವರಯ್ಯ ಎಂಬ ಬಸವಣ್ಣನ ವಚನ ಇದನ್ನೆ ವಿವರಿಸುತ್ತದೆ. ಇಲ್ಲಿ
ಜಂಗಮನೆಂದರೆ ಜೀವಂತ ನಡೆದಾಡುವ ಮನುಷ್ಯರು.
ಸಕಲ ಜೀವಿಗಳಿಗೆ ಒಳಿತನ್ನೆ ಬಯಸಿ ಅವರ‌ ಸೇವೆ ಮಾಡಿದರೆ
ದೇವನೊಲುಮೆ ಸುಲಭ. ಅವರನ್ನು ಕಾಡಿಸಿ ಪೀಡಿಸಿ ಹಿಂಸೆ ಕೊಟ್ಟರೆ ಅದರಿಂದ ನಮಗೆ ಪಾಪಕರ್ಮ ಅಂಟದೆ ಬಿಡದು.
ಪರೋಪಕಾರ ಪುಣ್ಯಾಯ ಪಾಪಾಯ ಪರಪೀಡನಮ್
ಎಂದು ವ್ಯಾಸ ಮಹರ್ಷಿಯ ಮಾತು ಅಕ್ಷರಸ್ಯ‌ ಸತ್ಯ.

ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...

More Articles Like This

error: Content is protected !!
Join WhatsApp Group