spot_img
spot_img

ಸಹಕಾರಿ ಕ್ಷೇತ್ರ ಬೆಳೆದರೆ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ – ಸತೀಶ ಕಡಾಡಿ

Must Read

spot_img
- Advertisement -

ಮೂಡಲಗಿ:ತಾಲೂಕಿನ ಅವರಾದಿ ಗ್ರಾಮದ ಶ್ರೀ ವಿಜಯಲಕ್ಷ್ಮಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ.,ಇದರ ನೂತನ ಕಟ್ಟಡವನ್ನು ಬುಧವಾರ ಅ-೧೪ ರಂದು ಬಿಡಿಸಿಸಿ ಬ್ಯಾಂಕ ನಿರ್ದೇಶಕ ಸತೀಶ ಕಡಾಡಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸಹಕಾರ ವಲಯಕ್ಕೆ ಸೂಕ್ತ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರವು ಪ್ರತ್ಯೇಕ ಸಹಕಾರ ಸಚಿವಾಲಯ ಸ್ಥಾಪಿಸಿದೆ. ದೇಶದಲ್ಲಿ ಸಹಕಾರಿ ಕ್ಷೇತ್ರ ಬೆಳೆಯಲು ವಿಶ್ವ ವಿದ್ಯಾಲಯ ಸ್ಥಾಪಿಸಿದ್ದಾರೆ ಸಹಕಾರಿ ಕ್ಷೇತ್ರ ಬೆಳೆದರೆ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಸಹಕಾರಿ ಇನ್ನಷ್ಟು ಹೆಮ್ಮರವಾಗಿ ಬೆಳೆಯಲಿ. ರೈತರು, ಬಡವರು, ಕೂಲಿಕಾರ್ಮಿಕರು ಇದರ ಉಪಯೋಗ ಪಡೆಯಲಿ ಎಂದರು.

ಸಹಕಾರಿ ಕ್ಷೇತ್ರ ಜನರ ಜೀವನ ಸಮೃದ್ಧಿಗೊಳಿಸುವ ಶಕ್ತಿಯಾಗಿದೆ. ಸಹಕಾರಿ ಕ್ಷೇತ್ರವು ೧೯೦೫ ರಲ್ಲಿ ಪ್ರಾರಂಭವಾಗಿದ್ದು ದೇಶದಲ್ಲಿ ಸಹಕಾರಿ ಕ್ಷೇತ್ರವು ಬೆಳೆಯಲು ಕರ್ನಾಟಕವು ಭದ್ರಬುನಾದಿಯಾಗಿದ್ದು, ರಾಜ್ಯದ ಸಣ್ಣರಾಮನಗೌಡ ಸಿದ್ದನಗೌಡ ಪಾಟೀಲ ಸಹಕಾರ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ ಅವರ ಸ್ಮರಣೆ ಮುಖ್ಯ ಎಂದರು.

- Advertisement -

ಬಿಡಿಸಿಸಿ ಬ್ಯಾಂಕ ನಿರ್ದೇಶಕ ಸತೀಶ ಕಡಾಡಿ ಅವರನ್ನು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸನ್ಮಾನಿಸಿದರು.
ಜಿ ಪಂ ಮಾಜಿ ಸದಸ್ಯ,ಸಂಸ್ಥೆಯ ಅಧ್ಯಕ್ಷ ರಮೇಶ ಉಟಗಿ ಮಾತನಾಡಿ ಸಹಕಾರಿಯು ಕಳೆದ ೨೦ ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಕೃಷಿ ಮತ್ತು ಟ್ಯಾಕ್ಟರ ಸಾಲ ಸೇರಿದಂತೆ ರೈತರಿಗೆ ಸಾಕಷ್ಟು ಅನೂಕೂಲ ಕಲ್ಪಿಸಿದ್ದು,ಸರ್ಕಾರದಿಂದ ಸಹಕಾರ ಪಡೆದು ಸಂಸ್ಥೆಯು ಪ್ರಗತಿಪಥದಲ್ಲಿ ಸಾಗಲು ಶ್ರಮಿಸಲಾಗುವುದು ಎಂದರು.

ಅತಿಥಿಗಳಾಗಿ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ದೀಪಕ, ಕಲ್ಲೋಳಿ ಮಹಾಲಕ್ಷ್ಮಿ ಸೌಹಾರ್ದ ಸಹಕಾರಿಯ ಹಿರಿಯ ಶಾಖಾ ವ್ಯವಸ್ಥಾಪಕ ಪರಪ್ಪ ಗಿರೆಣ್ಣವರ ಭಾಗವಹಿಸಿದ್ದರು.
ಸಂಸ್ಥೆಯ ನಿರ್ದೇಶಕರಾದ ಮುತ್ತಪ್ಪ ಉರಬಿ, ಮಹಾಲಿಂಗಪ್ಪ ಕಳಸಾರ, ಚಂದ್ರವ್ವ ಪಾಯನ್ನವರ,ಲಕ್ಕವ್ವ ಪಾಟೀಲ ಪ್ರಮುಖರಾದ ಪರಸಪ್ಪ ಬೇವಿನಕಟ್ಟಿ,ನಿಂಗಪ್ಪ ಪಾಟೀಲ, ಮಲ್ಲಿಕಾರ್ಜುನ ಉಟಗಿ, ಅಮೀನಸಾಬ ಬಾಗವಾನ ಸೇರಿದಂತೆ ಅನೇಕ ಸಹಕಾರಿಗಳು ಉಪಸ್ಥಿತರಿದ್ದರು.
ಶ್ರೀಶೈಲ ಪೂಜೇರಿ ಸ್ವಾಗತಿಸಿದರು. ಪ್ರಶಾಂತ ಮೇತ್ರಿ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.

- Advertisement -
- Advertisement -

Latest News

ಲೇಖನ : ಆ ನಾಲ್ಕು ಜನ ಯಾರು ?

ಹೌದು, ದಿನ ಬೆಳಗಾದರೆ ಮಾಡೋಕೆ ನೂರೆಂಟು ಕೆಲಸ ಇದ್ರು ಅದೇನೋ ದುಗುಡ, ದುಮ್ಮಾನಗಳು ಕಾಡುತ್ತಲೇ ಇರುತ್ತವೆ. ಎಲ್ಲಿಯವರೆಗೆ ಎಂದರೆ ನಾವು ಮಾಡುವ ಕೆಲಸದ ಮೇಲೆ ಗುರಿ...
- Advertisement -

More Articles Like This

- Advertisement -
close
error: Content is protected !!
Join WhatsApp Group