ವಿಶೇಷ ಚೇತನರಿಗೆ ಶೇ.೫ ರ ಅನುದಾನ ನೀಡುವಂತೆ ಮನವಿ

Must Read

ಸಿಂದಗಿ; ತಮಗಾಗಿ ಮೀಸಲಾಗಿರುವ ಶೇ. ೫ ಅನುದಾನ ಕೋರಿ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವಿಶೇಷ ಚೇತನರು ಮನವಿ ಸಲ್ಲಿಸಿದರು

ಮನವಿಯಲ್ಲಿ ಅವರು, ತಾಲೂಕಿನ ವಿವಿಧ ಗ್ರಾಮ ಪಂಚಾಯತಿ ಹಿಕ್ಕನಗುತ್ತಿ, ಗುತ್ತರಗಿ, ರಾಂಪೂರ ಪಿ.ಎ, ಕನ್ನೊಳ್ಳಿ ಮತ್ತು ಬ್ಯಾಕೋಡ ಈ ಗ್ರಾಮ ಪಂಚಾಯಾತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಾದ, ರಾಂಪೂರ, ಗಣಿಹಾರ, ಬಬಲೇಶ್ವರ, ಬಂಟನೂರ, ಕನ್ನೊಳ್ಳಿ ಹಾಗೂ ಮನ್ನಾಪೂರ ಹಳ್ಳಿಗಳಲ್ಲಿ ವಿಶೇಷ ಚೇತನರಿಗೆ ಪ್ರತಿ ವರ್ಷದ ಅನುದಾನದಲ್ಲಿ ಸಿಗಬೇಕಾದ ೫% ಅನುದಾನ ಸುಮಾರು ೧೫ ವರ್ಷಗಳಿಂದ ಇಲ್ಲಿಯವರೆಗೆ ಒಂದು ಭಾಗ ಕೂಡ ಸಿಕ್ಕಿರುವುದಿಲ್ಲ ಎಂದು ಅವರು ದೂರು ನೀಡಿದ್ದಾರೆ.

ಮುಂದಯವರೆದು, ವಿಶೇಷ ಚೇತನರ ಯೋಜನೆಯಡಿಯಲ್ಲಿ ಇಲ್ಲಿಯವರೆಗೂ ಒಂದು ಆಶ್ರಯ ಮನೆ ಬಂದಿರುವುದಿಲ್ಲ. ಇದನ್ನು ಪ್ರಶ್ನಿಸಿ ದಿನಾಂಕ ೩೦-೮-೨೦೨೩ ರಂದು ರಾಂಪುರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ದಿನಾಂಕ ೦೨-೧೧-೨೦೨೩ ರಂದು ಗುತ್ತರಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ನೀಡಲಾಗಿದೆ. ಎರಡೂ ಪಂಚಾಯತಿಗಳಿಂದ ಯಾವುದೇ ಸಹಕಾರ ಸಿಗಲಿಲ್ಲ. ಗುತ್ತರಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮನಬಂದಂತೆ ಮಾತನಾಡುತ್ತಾರೆ. ದಿನಾಂಕ ೨೪-೦೬-೨೦೨೨ ರಂದು ರಾಂಪುರ ಹಾಗೂ ದಿನಾಂಕ ೧೬-೫-೨೦೨೪ ರಂದು ಗುತ್ತರಗಿ ಗ್ರಾಮ ಪಂಚಾಯತಿಗೆ ಆರ್.ಟಿ.ಐ ಯಲ್ಲಿ ಮಾಹಿತಿ ಕೂಡಾ ಕೇಳಲಾಗಿತ್ತು ಇದಕ್ಕೂ ಏನೂ ಸ್ಪಂದನೆ ಸಿಗಲಿಲ್ಲ. ನಮಗೆ ಪ್ರತಿ ವರ್ಷ ಸಿಗುವ ೫% ಅನುದಾನ ಮತ್ತು ಆಶ್ರಯ ಮನೆಗಳನ್ನು ದುರ್ಬಳಕ್ಕೆ ಮಾಡದೇ ಸರಿಯಾದ ಫಲಾನುಭವಿಗೆ ನೀಡಬೇಕೆಂದು ಎಲ್ಲ ವಿಶೇಷ ಚೇತನರು ಸೇರಿ ಸಿಂದಗಿ ತಾಲೂಕ ಕಾರ್ಯನಿರ್ವಾಹಕ ಅಧೀಕಾರಿಗಳಿಗೆ ಮನವಿ ಸಲ್ಲಿಸಿದರು.

Latest News

ಎಲ್ಲಾ ಜಿಲ್ಲೆಗಳ ಯುವ ಸಾಧಕರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರದಾನ  

ಮೂಡಲಗಿ:-ತಾಲೂಕಿನ ಹಳ್ಳೂರ ಗ್ರಾಮದಲ್ಲಿ ರಾಜ್ಯದ ೩೧ ಜಿಲ್ಲೆಯ "ಯುವ ಸಾಧಕರಿಗೆ ಪ್ರಶಸ್ತಿ" ಪ್ರದಾನ ಸಮಾರಂಭ ಕಾರ್ಯಕ್ರಮ ದಿ. 26 ಹಾಗೂ 27 ರಂದು ಜರುಗುವುದು.ಕರ್ನಾಟಕ ರಾಜ್ಯ...

More Articles Like This

error: Content is protected !!
Join WhatsApp Group