spot_img
spot_img

ಸ್ಕೌಟ್ಸ್-ಗೈಡ್ಸ್ ಶಿಸ್ತು, ದೇಶಪ್ರೇಮ ಕಲಿಸುತ್ತದೆ: ಬಿಇಓ ದಂಡಿನ

Must Read

- Advertisement -

ಸವದತ್ತಿ:- “ಸ್ಕೌಟ್ಸ್-ಗೈಡ್ಸ್ ಎಂಬುದು ಸೇವೆಗಾಗಿ ಇರುವ ಸಂಸ್ಥೆಯಾಗಿದ್ದು ಮಕ್ಕಳಿಗೆ ಸೇವಾ ಮನೋಭಾವನೆ ಬೆಳೆಸುವಂತಹ ಕಾರ್ಯಕ್ರಮ ಶಾಲೆಗಳಲ್ಲಿ ನಡೆಸಬೇಕು, ಆದುದರಿಂದ ಶಾಲೆಗಳಲ್ಲಿ ಎಲ್ಲ ಶಿಕ್ಷಕ/ಕಿಯರು ಸ್ಕೌಟ್ಸ್ ಗೈಡ್ಸ್ ಘಟಕಗಳನ್ನು ಪ್ರಾರಂಭಿಸಬೇಕು, ಇದು ಮಕ್ಕಳಿಗೆ ಶಾಲೆಗಳಲ್ಲಿ ಹಾಗೂ ಜೀವನದಲ್ಲಿ ಶಿಸ್ತು ಕಲಿಸುವುದರ ಜೊತೆಗೆ ದೇಶಪ್ರೇಮ ಬೆಳೆಸಲು ಸಹಾಯಕಾರಿಯಾಗಿದೆ” ಎಂದು ಸವದತ್ತಿಯ ಬಿಇಓ ಮೋಹನ ದಂಡಿನ ಶಿಕ್ಷಕರೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಪಟ್ಟಣದ ಗುರುಭವನದಲ್ಲಿ ನಡೆದ ಪುನಶ್ಚೇತನ ಮತ್ತು ನವೀಕರಣ ಸಭೆಯಲ್ಲಿ ಬೇಡನ್ ಪೋವೆಲರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಸಿಗೆ ನೀರುನಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಾಲೂಕಾ ಪಿಇಓ ಎಂ.ಬಿ.ಕೊಪ್ಪದ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಂತರ ಕಾರ್ಯದರ್ಶಿಯಾದ ಎನ್.ಎನ್.ಕಬ್ಬೂರ ಮಾತನಾಡಿ ಪ್ರವೇಶ ಹಂತ, ಪ್ರಥಮ ಸೋಪಾನ, ದ್ವಿತೀಯ ಸೋಪಾನ, ತೃತೀಯ ಸೋಪಾನ, ರಾಜ್ಯ ಪುರಸ್ಕಾರ ಪರೀಕ್ಷೆಗಳ ಬಗ್ಗೆ, ಗೀತಗಾಯನದ ಸ್ಪರ್ದೆಯ ಬಗ್ಗೆ, ಮಾಹಿತಿ ನೀಡಿ, ರಾಜ್ಯ ಸಂಸ್ಥೆ ಮತ್ತು ಜಿಲ್ಲಾ ಸಂಸ್ಥೆಯಿಂದ ನೀಡಿದ ಮಾರ್ಗದರ್ಶಿ ಮಾಹಿತಿಗಳನ್ನು ಶಿಕ್ಷಕರೊಂದಿಗೆ ಚರ್ಚಿಸಿದರು.

- Advertisement -

ಶಿಕ್ಷಕರಾದ ಆರ್.ಎಸ್ ಬಡಿಗೇರ, ಎಮ್.ಆರ್.ವರವನ್ನವರ, ಆರ್.ಎಸ್.ಕೋಟೂರ ತಮ್ಮ ಶಾಲೆಗಳಲ್ಲಿ ಮಾಡಿದ ವಿಶೇಷ ಕಾರ್ಯಕ್ರಮಗಳನ್ನು ಎಲ್ಲರೊಂದಿಗೆ ಹಂಚಿಕೊಂಡರು. ತದನಂತರ ಘಟಕಗಳ ನೊಂದಣಿ ಕಾರ್ಯ ಮಾಡಲಾಯಿತು. ಎಲ್ಲ ಶಿಕ್ಷಕರಿಗೆ ಸ್ಕೌಟ್ಸ್ ಮಾಸ್ಟರ್ ಗಳ ಕೈಪಿಡಿಯನ್ನು ನೀಡಲಾಯಿತು. ತಾಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ 70ಕ್ಕಿಂತ ಅಧಿಕ ಶಿಕ್ಷಕ/ಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಿಕ್ಷಕರಾದ ಪವನ ಅಮಠೆ ಸ್ವಾಗತಿಸಿದರು, ವಾಯ್.ಟಿ.ತಂಗೋಜಿ ನಿರೂಪಿಸಿ, ವಂದಿಸಿದರು.

- Advertisement -
- Advertisement -

Latest News

ವಿಮರ್ಶೆ ; ಹಾಸನದಲ್ಲಿ ಶಿವ ಸಂಚಾರ ತಂಡದ ಬಂಗಾರದ ಮನುಷ್ಯ ನಾಟಕ

ಹಾಸನದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದ ಹೊರ ಆವರಣದಲ್ಲಿ ಶಿವಶಂಚಾರ ತಂಡದಿಂದ ಶನಿವಾರ ಪ್ರದರ್ಶಿತವಾದ ಬಂಗಾರದ ಮನುಷ್ಯ ನಾಟಕ ಹಲವು ಆಯಾಮಗಳಿಂದ ಗಮನ ಸೆಳೆಯಿತು. ಪ್ರಸಿದ್ದ...
- Advertisement -

More Articles Like This

- Advertisement -
close
error: Content is protected !!
Join WhatsApp Group