ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

Must Read

 

ಬಿಸಿಲು ಬೇಗೆಯನುಂಡು ತಂಪು ಬೆಳದಿಂಗಳನು
ಚೆಲ್ಲುವನು ಚಂದಿರನು ಧರೆಯ ಮೇಲೆ
ದುಃಖದುಗುಡವ ನುಂಗಿ ಸುಖವ ಕೊಡುವರು ಜಗಕೆ
ಸಜ್ಜನರ ಪರಿಯಿಂತು – ಎಮ್ಮೆತಮ್ಮ

ಶಬ್ಧಾರ್ಥ
ಬೇಗೆ – ಬೆಂಕಿ, ಉರಿ, ತಾಪ, ಸಂಕಟ . ಧರೆ – ಭೂಮಿ
ದುಗುಡ – ಚಿಂತೆ, ಆತಂಕ,

ತಾತ್ಪರ್ಯ
ಚಂದ್ರ ಸೂರ್ಯನ ಪ್ರಖರವಾದ ಬಿಸಿಲು ತನ್ನ ಮೈಮೇಲೆ
ಬಿದ್ದರು ಅದನ್ನು ಸಹಿಸಿಕೊಂಡು ಕನ್ನಡಿಯಂಥ ತನ್ನ ಮೈಯಲ್ಲಿ ಪ್ರತಿಬಿಂಬಿಸಿ ತಂಪಾದ ಹಿತವಾದ ಹಾಲು
ಬೆಳದಿಂಗಳನ್ನು‌ ಭೂಮಿಗೆ ‌ಕೊಡುತ್ತಾನೆ. ಹುಣ್ಣಿಮೆಯ
ದಿನವಂತು ಆಹ್ಲಾದಕರವಾದ ಬೆಳದಿಂಗಳು ಮೈಮನಕ್ಕೆ
ಸಂತೋಷವನ್ನು‌ ಕೊಡುತ್ತದೆ. ಅಲ್ಲದೆ ಸಮುದ್ರವು ಅಂದು
ಸಂತೋಷದಿಂದ ಹೆದ್ದೆರೆಗಳನ್ನು ಎಬ್ಬಿಸಿ ಭೋರ್ಗರೆಯುತ್ತದೆ. ಚಂದ್ರ ಬಂದ ಕೂಡಲೆ‌ ನೈದಿಲೆ ಹೂಗಳ ಮುಖವರಳುತ್ತದೆ. ಹಾಗೆ ಬೆಳದಿಂಗಳನುಂಡು ಚಕೋರ ಪಕ್ಷಿ‌ ಆನಂದದಿಂದ ಗಗನದಲ್ಲಿ ಹಾರಾಡುತ್ತದೆ. ಹೀಗೆ ಸಜ್ಜನರು‌ ತಮ್ಮ ದುಃಖ ಚಿಂತೆ ವ್ಯಸನಗಳನ್ನು ನುಂಗಿಕೊಂಡು ಜನರಿಗೆ ಸಹಾಯಮಾಡುತ್ತಾರೆ.ತಮ್ಮ ದುಃಖಗಳನ್ನು ತೋರಗೊಡದೆ ಮುಖದಲ್ಲಿ‌ ಮುಗುಳನಗೆ ಬೀರುತ್ತ ಸಾಮಾಜಿಕ ಸೇವೆಯಲ್ಲಿ ನಿರತರಾಗುತ್ತಾರೆ. ಅವರು ಎಲ್ಲರ ಹಿತವನ್ನು ಬಯಸುವ ಕಾರಣ ಎಲ್ಲರಿಗೆ ಇಷ್ಟವಾಗುತ್ತಾರೆ. ಅದಕ್ಕೆ ಅವರಿಂದ ಸಹಾಯ ಪಡೆದ ವ್ಯಕ್ತಿಗಳು ಅವರನ್ನು ಕಂಡು ಸಂತಸ ವ್ಯಕ್ತಪಡಿಸುತ್ತಾರೆ. ಅವರನ್ನು ಕಂಡ‌ ಕೂಡಲೆ‌ ಜನರ ಮುಖ ಅರಳುತ್ತವೆ. ಸಂತೋಷದಿಂದ ಅವರನ್ನು ಎತ್ತಿ ಮೆರೆಸುತ್ತಾರೆ.
ಲೋಕಕೆ ಬೇಕಾದವನನ್ನು ಲೋಕನಾಥನಂತೆ ಗೌರವಿಸುತ್ತಾರೆ.

ರಚನೆ ಮತ್ತುವಿವರಣೆ
‌‌ ಎನ್.ಶರಣಪ್ಪ‌ ಮೆಟ್ರಿ
‌ ‌‌‌ ‌‌‌‌‌ ಮೊ. 9449030990

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...

More Articles Like This

error: Content is protected !!
Join WhatsApp Group