ಹಾಸನದಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿರುವ ಮನೆ ಮನೆ ಕವಿಗೋಷ್ಠಿಯ ೩೨೧ನೇ ತಿಂಗಳ ಕಾರ್ಯಕ್ರಮವು ಶ್ರೀ ಯಲಗುಂದ ಶಾಂತಕುಮಾರ್ ರಂಗಭೂಮಿ ಕಲಾವಿದರು ಅಧ್ಯಕ್ಷರು ಮಾನವ ಹಕ್ಕುಗಳ ಒಕ್ಕೂಟ ಹಾಸನ ಇವರ ಪ್ರಾಯೋಜನೆಯಲ್ಲಿ ಇವರ ನಿವಾಸ ಶಾಂತಿನಗರದ ೧ನೇ ಮುಖ್ಯ ರಸ್ತೆ, ೨ನೇ ಕ್ರಾಸ್, ಉಮಾ ಮಹೇಶ್ವರಿ ಸಮುದಾಯ ಭವನದ ಹತ್ತಿರ, ೧೬ನೇ ವಾರ್ಡ್, ಹಾಸನ ಇಲ್ಲಿ ದಿನಾಂಕ ೧-೯-೨೦೨೪ರ ಭಾನುವಾರ ಮದ್ಯಾಹ್ನ ೨.೩೦ಕ್ಕೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಾಮಾಜಿಕ ನಾಟಕ ಕ್ಷೇತ್ರಕ್ಕೆ ಬೇಲೂರು ಕೃಷ್ಣಮೂರ್ತಿ ಕೊಡುಗೆ ವಿಷಯವಾಗಿ ಸಾಹಿತಿ ಶಿಕ್ಷಕರು ದಿಬ್ಬೂರು ರಮೇಶ್ ಅವರಿಂದ ಉಪನ್ಯಾಸ ನಂತರ ಆಗಮಿತ ಕವಿಗಳಿಂದ ಕವಿಗೋಷ್ಠಿ ರಂಗಭೂಮಿ ನಟರಿಂದ ರಂಗಗೀತೆ ಗಾಯಕ ಗಾಯಕಿಯರಿಂದ ಭಾವಗೀತೆ ಜಾನಪದ ಗೀತೆಗಳ ಹಾಡುಗಾರಿಕೆ ಇರುವುದು.
ಸೀಗೆನಾಡು ಸಂಸ್ಥಾನ ಮಠ ಶ್ರೀ ನಂದೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಈ.ಕೃಷ್ಣೇಗೌಡರು, ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷರು ನವಿಲೆ ಪರಮೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಜಿಲ್ಲೆಯ ಕವಿ ಕವಯಿತ್ರಿಯರು ಗಾಯಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡಬೇಕೆಂದು ಸಾಹಿತಿ ಹಾಗೂ ಮನೆ ಮನೆ ಕವಿಗೋಷ್ಠಿ ಸಂಚಾಲಕರು ಗೊರೂರು ಅನಂತರಾಜು ಕೋರಿದ್ದಾರೆ.